ಪತಿ ಚಿರುವಿನ ಅಗಲಿಕೆಯ ಬಳಿಕ ಮೇಘನಾ ರಾಜ್ ಸಿನಿಮಾ ರಂಗದಲ್ಲಿ ಅಲ್ಲದೆ ಹೆಚ್ಚಾಗಿ ಹೊರಗಡೆ ಎಲ್ಲಿಯೂ ಸಹ ಗುರುತಿಸಿಕೊಂಡಿರಲಿಲ್ಲ. ತಮ್ಮ ಮುದ್ದಾದ ಮಗ ರಾಯನ್ ಸರ್ಜಾ ಆಗಮನದ ನಂತರ ಮೇಘನಾ ಅವರ ಮುಖದಲ್ಲಿ ಮತ್ತೆ ಸಂತಸ ತಂದಿದೆ. ಇದಾದ ನಂತರ ಹಲವಾರು ರಿಯಾಲಿಟಿ ಕಾರ್ಯಕ್ರಮಗಳಲ್ಲಿ ನಟಿ ಭಾಗಿಯಾಗುತ್ತಿದ್ದಾರೆ. ಇದೀಗ ಮೇಘನಾ ರಾಜ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯೊಂದು ಹುಡುಕಿಕೊಂಡು ಬಂದಿದ್ದು, ಇದು ನಮ್ಮ ಕನ್ನಡಿಗರ ಹೆಮ್ಮೆ ಎಂದು ಹೇಳಲಾಗುತ್ತಿದೆ.
ಬಹುಭಾಷಾ ಪ್ರತಿಭೆ, ಸ್ಟಾರ್ ದಂಪತಿ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾಜ್ ಬಾಲನಟಿಯಾಗಿ ಸಿನಿಮಾ ರಂಗಕ್ಕೆ ಪ್ರವೇಶ ಪಡೆದರು. ಇದೀಗ ಇವರ ಅಮೋಘ ನಟನೆಗಾಗಿ ಇವರಿಗೆ ಪ್ರತಿಷ್ಠಿತ “FOG HERO” ಪ್ರಶಸ್ತಿ ನೀಡಲಾಗುತ್ತಿದೆ.
“ಫೆಡರೇಷನ್ ಆಫ್ ಇಂಡೋ ಅಮೆರಿಕನ್ಸ್ ಆಫ್ ನಾರ್ತೆನ್ ಕ್ಯಾಲಿಫೋರ್ನಿಯಾ” ಇವರು ಆಯೋಜಿಸುತ್ತಿರುವ “ಫೆಸ್ಟಿವಲ್ ಆಫ್ ಗ್ಲೋಬ್”(FOG) ಸಮಾರಂಭ ಕಳೆದ ನಲವತ್ತು ವರ್ಷಗಳಿಂದ ಅದ್ದೂರಿಯಾಗಿ ನಡೆದುಕೊಂಡು ಬಂದಿದೆ. ಈ ಬಾರಿ ಸಹ ಇದೇ ಆಗಸ್ಟ್ 19, 20 ಹಾಗೂ 21 ರಂದು ಈ ಸಮಾರಂಭವನ್ನು ಆಯೋಜಿಸಲಾಗಿದ್ದು, ಸುಮಾರು ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಅಲ್ಲಿ ವಾಸಿಸುವ ಹಲವಾರು ಭಾರತೀಯರು ಸೇರಿದಂತೆ ಅಲ್ಲಿನ ಜನರು ಸಹ ಭಾಗವಹಿಸುತ್ತಾರೆ.
ಪ್ರಶಸ್ತಿ ಸ್ವೀಕರಿಸುವ ಬಗ್ಗೆ ಮಾತನಾಡಿದ ಮೇಘನಾ ರಾಜ್ “ಅಮಿತಾಭ್ ಬಚ್ಚನ್, ಧರ್ಮೇಂದ್ರ ಅವರಂತಹ ಗಣ್ಯರು ಪಡೆದಿರುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯಲು ನನಗೆ ತುಂಬಾ ಸಂತೋಷವಾಗಿದೆ. ಅಂತಹ ಮಹಾನ್ ನಟರಿಗೆ ನೀಡುವ ಪ್ರಶಸ್ತಿಗೆ ಈ ಬಾರಿ ಆಯ್ಕೆಯಾಗಿರುವುದು ನನ್ನ ಸೌಭಾಗ್ಯ. ನಾನು ಇದನ್ನು ನನ್ನ ತಂದೆಯ ಮೂಲಕ ಕಲಿತಿದ್ದೇನೆ. ಆಗಸ್ಟ್ 21 ರಂದು ನಡೆಯುವ ಅದ್ಧೂರಿ ಸಮಾರಂಭದಲ್ಲಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ. ಕನ್ನಡ ಚಿತ್ರರಂಗ ಈಗ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ನನಗೆ ಕನ್ನಡಿಗನಾಗಿ ಈ ಪ್ರಶಸ್ತಿ ಸ್ವೀಕರಿಸಲು ತುಂಬಾ ಸಂತೋಷವಾಗಿದೆ” ಎಂದು ನಟಿ ಮೇಘನಾ ರಾಜ್ ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
