fbpx
cinema

“ಹಿಂದಿ ಹೇಗೆ ‘ಹಿಂದ್’ ಆಗುವುದಿಲ್ಲವೋ ಅದೇ ತರ ಕನ್ನಡ ‘ಕನ್ನಡ್’ ಆಗುವುದಿಲ್ಲ” ಕನ್ನಡ್ ಎಂದು ಪದೇ ಪದೇ ಬಳಸುತ್ತಿದ್ದ ನಿರೂಪಕಿಗೆ ಕಿಚ್ಚ ಕ್ಲಾಸ್

ಕಿಚ್ಚ ಸುದೀಪ್ ಅವರಿಗೆ ಕನ್ನಡ ಭಾಷೆ ಮತ್ತು ಕರ್ನಾಟಕ ಜನರ ಮೇಲೆ ಅಪಾರವಾದ ಅಭಿಮಾನ ಮತ್ತು ಗೌರವ ಇರುವುದು ನಮಗೆಲ್ಲ ಗೊತ್ತು. ಸಾಕಷ್ಟು ಸಂದರ್ಶನಗಳಲ್ಲಿ ಜನರು ಕನ್ನಡ್ ಎಂಬ ಪದವನ್ನು ಬಳಸಿದರೆ ಅದನ್ನು ಕನ್ನಡ ಎಂದು ಕರಿಯಬೇಕು ಕನ್ನಡ್ ಅಲ್ಲ ಎಂದು ಹೇಳಿದ್ದಾರೆ. ಇದೀಗ ಕಿಚ್ಚ ಸುದೀಪ್ ಹಿಂದಿ ನಿರೂಪಕಿಗೆ ಕನ್ನಡ್ ಎಂದು ಬಳಸಿದ ಹಿಂದಿ ನಿರೂಪಕಿಗೆ ಟಾಂಗ್ ಕೊಟ್ಟಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

ವಿಕ್ರಾಂತ್ ರೋಣ ಸಿನಿಮಾ ಪ್ರಮೋಷನ್ ನಡುವೆಯೂ ಮತ್ತು ಸಿನಿಮಾದ ಸಕ್ಸಸ್ ನಂತರ ಕಿಚ್ಚ ಸುದೀಪ್ ಹಲವಾರು ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೆ ರೀತಿ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದ ಕಿಚ್ಚನಿಗೆ ಹಿಂದಿ ನಿರೂಪಕಿ ಮಾತನಾಡುತ್ತ ಕನ್ನಡ್ ಎಂಬ ಪದವನ್ನು ಬಳಸುತ್ತಿದ್ದರು. ಇದನ್ನು ಗಮನಿಸಿದ ಕಿಚ್ಚ ತಕ್ಷಣ ಆ ನಿರೂಪಕಿಗೆ ಅದು ಕನ್ನಡ್ ಅಲ್ಲ ಕನ್ನಡ ಎಂದು ತಿದ್ದಿ ಹೇಳಿದರು.

 

 

ತಮ್ಮ ತಪ್ಪನ್ನು ಸಮರ್ಥಿಸಿಕೊಂಡ ನಿರೂಪಕಿ ‘ಕ್ಷಮಿಸಿ ಸರ್​..’ ಎಂದು ಕ್ಷಮೆ ಕೇಳಿ ‘ನಾವು ಈಗ ತಾನೇ ಕಲಿಯುತ್ತಿದ್ದೇವೆ ಸರ್​’ ಎಂದು ಹೇಳಿದರು. ಇದಕ್ಕೆ ಕಿಚ್ಚ ‘ಹಿಂದಿ ಎಂದಿಗೂ ಹಿಂದ್​ ಆಗುವುದಿಲ್ಲ. ಅದೇ ರೀತಿ ಕನ್ನಡ ಕೂಡ ಕನ್ನಡ್​ ಆಗುವುದಿಲ್ಲ. ನೀವು ತಮಿಳು, ತೆಲುಗು ಎಲ್ಲವನ್ನೂ ಸರಿಯಾಗಿ ಹೇಳಿತ್ತೀರಿ. ಕನ್ನಡದ ವಿಚಾರ ಬಂದಾಗ ಕನ್ನಡ್​ ಎನ್ನುತ್ತೀರಿ. ಭಾಷೆ ಬಿಟ್ಟುಬಿಡಿ, ಕೊನೇ ಪಕ್ಷ ಭಾಷೆಯ ಹೆಸರನ್ನಾದರೂ ಸರಿಯಾಗಿ ಹೇಳಿ’ ಎಂದು ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು.

 

 

ಕಿಚ್ಚ ಸುದೀಪ್ ಅವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಕಿಚ್ಚನಿಗೆ ಕನ್ನಡ ಭಾಷೆ ಮತ್ತು ಕನ್ನಡಿಗರ ಮೇಲೆ ಇರುವ ಗೌರವವನ್ನು ಕಂಡು ಅಭಿಮಾನಿಗಳು ಅವರನ್ನು ಶ್ಲಾಘಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top