fbpx
ಸಮಾಚಾರ

ಟೋಯಿಂಗ್ ಇಲ್ಲವೆಂದು ಎಲ್ಲಂದರಲ್ಲಿ ತಮ್ಮ ವಾಹನವನ್ನು ನಿಲ್ಲಿಸುವ ಮುಂಚೆ ಹುಷಾರ್! ಹಣ ವಸೂಲಿ ಮಾಡಲು ಹೊಸ ಮಾರ್ಗ ಕಂಡುಕೊಂಡ ಸಂಚಾರಿ ಪೊಲೀಸರು

ಇಷ್ಟು ದಿನ ಹಲವಾರು ವಿವಾದಗಳು ಸೃಷ್ಟಿಯಾದ ಕಾರಣ ಬೆಂಗಳೂರಿನಲ್ಲಿ ಟೋಯಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದರ ಪ್ರಯೋಜನ ಪಡೆದ ಬೆಂಗಳೂರಿಗರು ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಹೊರಟು ಹೋಗುತ್ತಿದ್ದರು. ಆದರೆ ಇನ್ಮುಂದೆ ಈ ರೀತಿ ಮಾಡುವ ಮುನ್ನ ಎಚ್ಚರ. ಏಕೆಂದರೆ ನೋ ಪಾರ್ಕಿಂಗ್ ನಲ್ಲಿ ನಿಮ್ಮ ವಾಹನವನ್ನು ನಿಲ್ಲಿಸಿದರೆ ನಿಮಗೆ ಬೀಳುತ್ತೆ ಫೈನ್.

ಟೋವಿಂಗ್ ವ್ಯಸ್ಥೆಯನ್ನು ತಾತ್ಕಾಲಿಕವಾಗಿ ಸಂಚಾರಿ ಪೊಲೀಸರು ಸ್ಥಗಿತಗೊಳಿಸಿದ್ದರಿಂದ ಜನರು ತಮಗೆ ಇಷ್ಟ ಬಂದಂತೆ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದರು. ಹೀಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಪೊಲೀಸರು ಇದೀಗ ವ್ಹೀಲ್ ಕ್ಲ್ಯಾಂಪ್ ಮೊರೆ ಹೋಗಿದ್ದಾರೆ. ಹೌದು ಇನ್ಮುಂದೆ ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿರುವ ನಿಮ್ಮ ವಾಹನಗಳನ್ನು ಪೊಲೀಸರು ಹೊತ್ತುಕೊಂಡು ಹೋಗುವುದಿಲ್ಲ, ಬದಲಾಗಿ ನಿಮ್ಮ ಗಾಡಿಗೆ ವ್ಹೀಲ್ ಕ್ಲ್ಯಾಂಪ್ ಅಳವಡಿಸಿ ಅಲ್ಲೇ ದಂಡ ವಸೂಲಿ ಮಾಡುತ್ತಾರೆ.

ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಇದೀಗ ಪೊಲೀಸರು ಈ ಹೊಸ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಜನರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಹೋದರೆ ತಮ್ಮ ವಾಹನಗಳಿಗೆ ವ್ಹೀಲ್ ಕ್ಲ್ಯಾಂಪ್ ಹಾಕಿ ನೀವು ಬರುವ ವರೆಗೂ ಕಾದು ತಮ್ಮ ಬಳಿ ಪೊಲೀಸರು ದಂಡ ವಸೂಲಿ ಮಾಡುತ್ತಾರೆ. ಹೀಗಾಗಿ ಸವಾರರು ಇನ್ನು ಮುಂದೆ ತಮ್ಮ ವಾಹನವನ್ನು ಎಲ್ಲೆಂದರಲ್ಲಿ ನಿಲ್ಲಿಸುವ ಮುಂಚೆ ಹುಷಾರ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top