fbpx
ಸಮಾಚಾರ

ರಾ… ರಾ… ರಕ್ಕಮ್ಮ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಜಪಾನಿನ ಸುದೀಪ್ ಅಭಿಮಾನಿ! ವಿಡಿಯೋ ವೈರಲ್

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಎಲ್ಲಾ ಕಡೆ ಸಕತ್ ಸೌಂಡ್ ಮಾಡುತ್ತಿದೆ. ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚಾದ್ಯಂತ ಈ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇವೆಲ್ಲದರ ನಡುವೆ ವಿಕ್ರಾಂತ್ ರೋಣ ಸಿನಿಮಾದ ಅತ್ಯಂತ ಜನಪ್ರಿಯ ಗೊಂಡ ರಾ.. ರಾ… ರಕ್ಕಮ್ಮ ಹಾಡಿಗೆ ಜಪಾನಿನ ಯುವಕ ಸ್ಟೆಪ್ ಹಾಕಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

ಸಿನಿಮಾ ಬಿಡುಗಡೆ ಯಾಗುವ ಮುಂಚೆ ಅತ್ಯಂತ ಜನಪ್ರಿಯತೆ ಗಳಿಸದ ಹಾಡು ಎಂದರೆ ಅದು ರಾ.. ರಾ… ರಕ್ಕಮ್ಮ ಹಾಡು, ಈ ಹಾಡಿಗೆ ಸಾರ್ವಜನಿಕರಿಂದು ಹಿಡಿದು ಸೆಲೆಬ್ರಿಟಿ ವರೆಗೂ ಪ್ರತಿಯೊಬ್ಬರೂ ಹೆಜ್ಜೆ ಹಾಕಿ ರೀಲ್ಸ್ ಮಾಡಿದರು. ಇದೀಗ ಇದೆ ಹಾಡಿಗೆ ಜಪಾನಿನ ಯುವಕ ರೀಲ್ಸ್ ಮಾಡಿದ್ದೂ, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

 

 

ವಿಕ್ರಾಂತ್ ರೋಣ ಸಿನಿಮಾ ಪ್ರಪಂಚಾದ್ಯಂತ ಹೌಸ್ ಫುಲ್ ಪ್ರದರ್ಶನ ತೋರಿಸುತ್ತಿದೆ. ರಿಲೀಸ್ ಆದ ಕೇವಲ 4 ದಿನಗಳಲ್ಲಿ ಈ ಸಿನಿಮಾ 100 ಕೋಟಿ ಕ್ಲಬ್ ಸೇರಿದ್ದು, ಬಾಕ್ಸ್ ಆಫೀಸ್ ಅನ್ನು ಮತ್ತಷ್ಟು ಧೂಳಿಪಟ ಮಾಡಲು ಶರವೇಗದಲ್ಲಿ ಮುನ್ನುಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top