ಇತ್ತೀಗಷ್ಟೆ ಬಿಡುಗಡೆಯಾದ ‘ಹರ್ ಹರ್ ಶಂಭೋ’ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಹಾಡನ್ನು ಮುಸ್ಲಿಂ ಗಾಯಕಿ ಫರ್ಮಾನಿ ನಾಜ್ ಗಾನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಹಾಡು ಹಾಡಿದವರು ಯಾರು ಎಂಬ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ವೈರಲ್ ಆದ ಬೆನ್ನಲ್ಲೇ ಹಾಡನ್ನು ಹಾಡಿದ ಗಾಯಕಿಗೆ ಮುಸ್ಲಿಮರಿಂದ ಅಪಸ್ವರ ವ್ಯಕ್ತವಾಗಿದೆ.
ಫರ್ಮಾನಿ ನಾಜ್‌ಗೆ ಹಿಂದೂಗಳಿಂದ ಬೆಂಬಲ ವ್ಯಕ್ತವಾಗುತ್ತಿದ್ದರೂ ಮುಸ್ಲಿಮರಿಂದ ವಿರೋಧ ವ್ಯಕ್ತವಾಗುತ್ತಿದೆ. ದಿಯೋಬಂದ್ ಮೂಲದ ಧರ್ಮಗುರು ಮುಫ್ತಿ ಅಸದ್ ಖಾಸ್ಮಿ ಷರಿಯಾ ಕಾನೂನಿನ ಅಡಿಯಲ್ಲಿ ಹಿಂದೂ ದೇವತೆಯ ಹಾಡನ್ನು ಹಾಡಲು ಮುಸ್ಲಿಮರಿಗೆ ಅನುಮತಿಯಿಲ್ಲ ಎಂದು ಹೇಳಿದ್ದಾರೆ. ಆಕೆ ತನ್ನನ್ನು ಮುಸ್ಲಿಂ ಎಂದು ಭಾವಿಸುತ್ತಾಳಾದರೆ ಹಿಂದೂ ಹಾಡನ್ನು ಹಾಡಬಾರದು ಎಂದಿದ್ದಾರೆ.
ಇಸ್ಲಾಂ ಪ್ರಕಾರ ಆಕೆ ಕೆಟ್ಟ ಕೆಲಸವನ್ನು ಮಾಡಿದ್ದಾಳೆ. ಇಸ್ಲಾಂ ಕಾನೂನು ಷರಿಯಾ ಇವುಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಗಾಯಕಿಯನ್ನು ನಿಂದಿಸಿದ್ದಾರೆ. ಸುದ್ದಿಸಂಸ್ಥೆ ಎಎನ್‌ಐಗೆ ನೀಡಿದ ಹೇಳಿಕೆಯಲ್ಲಿ ಧರ್ಮಗುರುಗಳಾದ ಮುಫ್ತಿ ಅಸದ್ ಖಾಸೀಂ, ಹಾಡುವುದು ಹಾಗೂ ನರ್ತಿಸುವುದಕ್ಕೆ ಮುಸ್ಲಿಂ ಧರ್ಮದಲ್ಲಿ ಅವಕಾಶವಿಲ್ಲ, ಇದನ್ನು ಕೆಟ್ಟ ಕೆಲಸ ಎಂದು ಹೇಳಲಾಗುತ್ತದೆ. ಷರೀಯಾ ಕಾನೂನು ಇದಕ್ಕೆ ಅವಕಾಶ ನೀಡುವುದಿಲ್ಲ. ಇದು ಕೆಟ್ಟ ಕೆಲಸ. ಆಕೆ ತನ್ನ ಈ ಹಾಡಿನ ಕೃತ್ಯಕ್ಕಾಗಿ ಅಲ್ಲಾಹ್ ಬಳಿ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
