fbpx
ಸಮಾಚಾರ

ವರಮಹಾಲಕ್ಷ್ಮಿ ಹಬ್ಬ ಮೊದಲು ಆಚರಣೆಗೆ ಬಂದಿದ್ದು ಹೇಗೆ, ಮೊದಲು ಆಚರಿಸಿದವರು ಯಾರು, ಇದರ ಹಿಂದೆ ಇರುವ ರೋಚಕ ಕಥೆ ಏನ್ ಗೊತ್ತಾ

ವರಮಹಾಲಕ್ಷ್ಮಿ ಹಬ್ಬ ಮೊದಲು ಆಚರಣೆಗೆ ಬಂದಿದ್ದು ಹೇಗೆ ?ಈ ವ್ರತವನ್ನು ಮೊದಲು ಆಚರಿಸಿದವರು ಯಾರು ?
ಅಷ್ಟೈಶ್ವರ್ಯಗಳ ಸ್ವರೂಪವೇ ಮಹಾಲಕ್ಷ್ಮಿ.ಮಹಾಲಕ್ಷ್ಮಿ ಅವತರಿಸಿದ್ದು ಅತ್ಯಂತ ರೋಚಕ . ಪ್ರತಿ ಯುಗಗಳಲ್ಲಿಯೂ ಕೂಡ ಲಕ್ಷ್ಮಿಯು ಬೇರೆ ಬೇರೆ ಅವತಾರಗಳನ್ನು ತಾಳಿದ್ದಾಳೆ . ಈ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುವುದಕ್ಕೆ ಮಹತ್ವವಾದ ಒಂದು ಹಿನ್ನೆಲೆ ಇದೆ . ಲಕ್ಷ್ಮಿ ಯಾರು ಅವಳ ಜನನ ಹೇಗಾಯಿತು ? ಎನ್ನುವ ಕುತೂಹಲಕಾರಿ ಸಂಗತಿಗಳನ್ನು ಇಂದು ನಾವು ತಿಳಿದುಕೊಳ್ಳೋಣ ಬನ್ನಿ.

 

 

 

ಎಲ್ಲರಿಗೂ ತಿಳಿದಿರುವಂತೆ ಲಕ್ಷ್ಮಿ ಪ್ರಕೃತಿಯ ಮೂಲ. ಸರ್ವ ಸಂಪತ್ತಿನ ಒಡತಿ. ಲಕ್ಷ್ಮಿ ಶ್ರೀಮನ್ನಾರಾಯಣನ ಪತ್ನಿ. ಮಹಾಲಕ್ಷ್ಮಿ ಹೇಗೆ ಅವತರಿಸಿದಳು ಎನ್ನುವುದರ ಬಗ್ಗೆ ನಮ್ಮ ಪುರಾಣಗಳಲ್ಲಿ ಅನೇಕ ಉಲ್ಲೇಖಗಳಿವೆ. ಆ ಪ್ರಕಾರವಾಗಿ ಜಗತ್ತಿನ ಅಂಧಕಾರವನ್ನು ಹೋಗಲಾಡಿಸಲು ಸಮುದ್ರ ಮಂಥನದ ವೇಳೆ ಅವತರಿಸಿ ಶ್ರೀ ಮಹಾಲಕ್ಷ್ಮಿ .
ಎಲ್ಲರಿಗೂ ತಿಳಿದಿರುವಂತೆ ಇಂದ್ರ ಮೂರು ಲೋಕಗಳ ಒಡೆಯ. ದೇವಾನು ದೇವತೆಗಳ ರಾಜ. ದೇವಲೋಕದ ಒಡೆಯನಾದ ಇಂದ್ರ ಒಮ್ಮೆ ತನ್ನ ಬಳಿ ಇದ್ದ ಐಶ್ವರ್ಯವೆನ್ನುವ ಮಧದಿಂದ ಭೋಗದಿಂದ ದುರಹಂಕಾರಿಯಾದ. ಇದೇ ಕಾರಣಕ್ಕೆ ದೂರ್ವಾಸ ಮಹರ್ಷಿಗಳ ಶಾಪಕ್ಕೆ ಗುರಿಯಾದ. ಶಾಪದ ಪರಿಣಾಮವಾಗಿ ಇಂದ್ರ ಶ್ರೀವಿಹೀನನಾದ. ಅಂದರೆ ಲಕ್ಷ್ಮಿ ವಿಹೀನನಾದ. ಇದರಿಂದ ಮೂರು ಲೋಕದಲ್ಲಿ ಸರ್ವ ಸಂಪತ್ತು, ವರ್ಚಸ್ಸು ದೂರವಾಗಿ ಅಂದಕಾರ ಆವರಿಸಿಕೊಳ್ಳುತ್ತಾ ಬಂದಿತ್ತು. ಮೂರು ಲೋಕಗಳು ಬಲಿಚಕ್ರವರ್ತಿಯ ಪಾಲಾದವು. ಕಂಗಾಲಾದ ಇಂದ್ರ ಶ್ರೀಮನ್ನಾರಾಯಣನ ಮೊರೆ ಹೋದ, ದೇವತೆಗಳನ್ನು ಅಂಧಕಾರದಿಂದ ದೂರ ಮಾಡುವಂತೆ ಬೇಡಿಕೊಂಡ . ಶ್ರೀಮನ್ನಾರಾಯಣನ ಒಂದು ಸೂತ್ರವನ್ನು ಸಿದ್ಧಪಡಿಸಿದ. ಅದೇ ದೇವರ ಮತ್ತು ದಾನವರ ನಡುವಿನ ಸಮುದ್ರ ಮಂಥನ.

 

ನಿಮಗೆಲ್ಲಾ ತಿಳಿದಿರುವಂತೆ ಅಮೃತಕ್ಕಾಗಿ ದೇವತೆಗಳು ಮತ್ತು ದಾನವರಿಂದ ಸಮುದ್ರ ಮಂಥನ ನಡೆಯುತ್ತದೆ. ಕ್ಷೀರಸಾಗರದಲ್ಲಿ ನಡೆದ ಸಮುದ್ರ ಮಂಥನದಲ್ಲಿ ಮಂದರ ಪರ್ವತವನ್ನು ಬಳಸಲಾಗುತ್ತದೆ . ಸಮುದ್ರ ಮಂಥನ ಮಾಡುವಾಗ ಹಾವಿನ ಬಾಲವನ್ನು ದೇವತೆಗಳು ಹಿಡಿದಿದ್ದರೆ ,ಹಾವಿನ ಹೆಡೆಯನ್ನು ದಾನವರು ಹಿಡಿದಿರುತ್ತಾರೆ. ಮಂಥನದ ರಭಸಕ್ಕೆ ಮಂದರ ಪರ್ವತ ಕುಸಿಯಲಾರಂಭಿಸುತ್ತದೆ. ಆಗ ಮಹಾವಿಷ್ಣು ಕೂರ್ಮಾವತಾರಿಯಾದ ತನ್ನ ಬೆನ್ನಿನ ಮೇಲೆ ಮಂದಾರ ಪರ್ವತವನ್ನು ಹೊತ್ತು ಕೊಳ್ಳುತ್ತಾನೆ. ಸಮುದ್ರ ಮಂಥನದ ಆರಂಭದಲ್ಲಿ ಹಾಲಾಹಲ ಬರುತ್ತದೆ. ಅದನ್ನು ಸಾಕ್ಷಾತ್ ಪರಮೇಶ್ವರ ಸೇವಿಸುತ್ತಾನೆ. ನಂತರ ಮಧ್ಯದ ದೇವತೆಗಳಾದ ಸುರರು, ಸುಂದರ ಕುದುರೆ ,ಉಚ್ಚಶ್ರವಸ್ಸು, ಚಂದ್ರ, ಕೌಸ್ತುಭ ಮಣಿ, ಕಾಮದೇನು, ಅಪ್ಸರೆಯರು, ಐರಾವತ ಉಗಮವಾಗುತ್ತದೆ.

ಸಮುದ್ರ ಮಂಥನದ ಸಮಯದಲ್ಲಿ ಅತ್ಯಂತ ಶುಭಕರವಾದ ವಸ್ತುಗಳೊಂದಿಗೆ ದಿವ್ಯ ತೇಜಸ್ವಿಯಿಂದ ಸುಂದರಳಾದ ಕನ್ಯೆಯೊಬ್ಬಳು ಹುಟ್ಟಿ ಬರುತ್ತಾಳೆ . ಅವಳೇ ಶ್ರೀ ಮಹಾಲಕ್ಷ್ಮಿ, ಸಮುದ್ರದಿಂದ ಹುಟ್ಟಿ ಬಂದ ಮಹಾಲಕ್ಷ್ಮಿ ಸಮುದ್ರ ರಾಜನ ಪುತ್ರಿ ಎಂದೇ ಜನಜನಿತಳಾಗುತ್ತಾಳೆ. ಕ್ಷೀರಸಮುದ್ರದಲ್ಲಿ ಜನಿಸಿ ಸಮುದ್ರ ರಾಜನ ಮಗಳಾಗಿ ಕಮಲದಲ್ಲಿ ಲಕ್ಷ್ಮಿ ಉದ್ಭವಿಸಿದ ಕೂಡಲೇ ಮೂರು ಲೋಕದ ಅಂಧಕಾರ ದೂರ ಮಾಡುತ್ತಾಳೆ. ಲಕ್ಷ್ಮಿ ಜನನದಿಂದ ಇಡೀ ಲೋಕ ತೇಜೋಮಾಯವಾಗುತ್ತದೆ. ಪ್ರಕೃತಿಯಲ್ಲಿ ಇದ್ದ ಕತ್ತಲು ದೂರವಾಗುತ್ತದೆ. ದೇವತೆಗಳಿಗೆ ವರ್ಚಸ್ಸು ಪ್ರಾಪ್ತಿಯಾಗುತ್ತದೆ , ಇದರಿಂದಾಗಿ ಇಂದ್ರ ಬಲಿಚಕ್ರವರ್ತಿಯ ಮೇಲೆ ವಿಜಯವನ್ನು ಸಾಧಿಸುತ್ತಾನೆ. ಒಂದು ದಿವ್ಯ ಕಾರಣಕ್ಕಾಗಿಯೇ ಸಮುದ್ರ ಮಂಥನದಲ್ಲಿ ಜನಿಸಿದ ಮಹಾಲಕ್ಷ್ಮಿ ಪ್ರತಿ ಯುಗದಲ್ಲಿ ವಿವಿಧ ರೂಪಗಳಲ್ಲಿ ಅವತರಿಸಿದ್ದಾಳೆ. ತ್ರೇತಾಯುಗದಲ್ಲಿ ಸೀತೆಯಾಗಿ, ದ್ವಾಪರಯುಗದಲ್ಲಿ ರುಕ್ಮಿಣಿಯಾಗಿ, ಕಲಿಯುಗದಲ್ಲಿ ಶ್ರೀನಿವಾಸನಿಗೆ ಪದ್ಮಾವತಿಯಾಗಿ ಸದಾಕಾಲ ಶ್ರೀಮನ್ನಾರಾಯಣನ ಜೊತೆಯಲ್ಲಿ ಇದ್ದಾಳೆ.

ವರಮಹಾಲಕ್ಷ್ಮಿ ಹಬ್ಬ ಆಚರಣೆಗೆ ಬಂದಿದ್ದು ಹೇಗೆ ? ಮೊದಲು ವರಮಹಾಲಕ್ಷ್ಮಿ ಹಬ್ಬ ಮಾಡಿದವರು ಯಾರು ? ವರಮಹಾಲಕ್ಷ್ಮಿ ಹಬ್ಬಕ್ಕೆ ಇರುವ ಹಿನ್ನೆಲೆ ಏನು ?

ನಮ್ಮ ಭಾರತ ವಿವಿಧ ಧರ್ಮಗಳ ಬೀಡು. ಹಲವಾರು ಧರ್ಮ, ಭಾಷೆ, ಜಾತಿಗಳಿರುವ ನಮ್ಮ ಭಾರತ ಒಂದು ಪರಿಪೂರ್ಣ ವಿಶ್ವ. ಈ ವಿಶ್ವದಂತೆ ನಮ್ಮ ದೇಶದಲ್ಲಿ ಪ್ರತಿನಿತ್ಯವೂ ಆಚರಣೆಗಳಿವೆ .,ಹಬ್ಬಗಳಿವೆ, ಸ್ವಾತಂತ್ರ್ಯೋತ್ಸವ , ಗಣರಾಜ್ಯೋತ್ಸವ, ಗಾಂಧಿ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳನ್ನಾಗಿ ಅತ್ಯಂತ ಉತ್ಸಾಹ, ಸಂಭ್ರಮದಿಂದ ಆಚರಿಸುತ್ತೇವೆ. ಅದೇ ರೀತಿ ಧಾರ್ಮಿಕವಾಗಿ ದೀಪಾವಳಿ ಗಣೇಶ ಚತುರ್ಥಿ ದುರ್ಗಾಪೂಜೆ ,ಸಂಕ್ರಾಂತಿ ಹಬ್ಬ ಮತ್ತು ಹೋಳಿ ಹಬ್ಬವನ್ನು ರಂಗುರಂಗಾಗಿ ಆಚರಿಸಿ ಸಂಭ್ರಮಿಸುತ್ತೇವೆ.

 

 

 

ಇಂತಹ ಹಬ್ಬಗಳಲ್ಲಿ ದಕ್ಷಿಣ ಭಾರತದಲ್ಲಿ ಶ್ರಾವಣ ಮಾಸದಲ್ಲಿ ಆಚರಿಸುವ ಪ್ರಮುಖ ಹಬ್ಬವೇ ವರಮಹಾಲಕ್ಷ್ಮಿ ಹಬ್ಬ. ಈ ಹಬ್ಬ ಹೆಣ್ಣು ಮಕ್ಕಳಿಗೆ ಅತ್ಯಂತ ಪ್ರಿಯವಾದ ಹಬ್ಬ. ಕಳಸದಲ್ಲಿ ಲಕ್ಷ್ಮಿಯನ್ನು ಆವಾಹನೆ ಮಾಡಿ ಪೂಜಿಸುವ ಈ ಹಬ್ಬ ಅತ್ಯಂತ ವಿಶಿಷ್ಟ. ಆದರೆ ಈ ಹಬ್ಬ ಜಾರಿಗೆ ಬಂದಿದ್ದು ಹೇಗೆ ? ಯಾರು ಮೊದಲು ವರಮಹಾಲಕ್ಷ್ಮಿಯನ್ನು ಪೂಜಿಸಿದರು ? ಎನ್ನುವ ಕುತೂಹಲಕಾರಿ ಕಥೆಯನ್ನು ತಿಳಿಯೋಣ ಬನ್ನಿ.
ವರಮಹಾಲಕ್ಷ್ಮಿ ಹಬ್ಬ ಆಚರಣೆಯ ಹಿಂದಿದೆ ರೋಚಕ ಕಥೆ. ವರಮಹಾಲಕ್ಷ್ಮಿ ವ್ರತ ಕಥೆಯನ್ನು ಹೇಳಿದ್ದು ಸಾಕ್ಷಾತ್ ಪರಮೇಶ್ವರ.
ವೇದವ್ಯಾಸರು ಒಟ್ಟು ಹದಿನೆಂಟು ಪುರಾಣಗಳನ್ನು ರಚಿಸಿದ್ದಾರೆ. 18 ಪುರಾಣಗಳಲ್ಲಿ ಪ್ರಮುಖವಾದದ್ದೇ ಭವಿಷ್ಯೋತ್ತರ ಪುರಾಣ . ಈ ಭವಿಷ್ಯೋತ್ತರ ಪುರಾಣದಲ್ಲಿ ವೇದವ್ಯಾಸ ಮಹರ್ಷಿಗಳು ಒಂದು ಕಥೆಯನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಸಾಕ್ಷಾತ್ ಪರಮೇಶ್ವರ ಪಾರ್ವತಿ ದೇವಿಗೆ ಒಂದು ಕಥೆಯನ್ನು ಹೇಳುತ್ತಾನೆ. ಆ ಕಥೆಯು ವರಲಕ್ಷ್ಮೀ ಹಬ್ಬದ ಆಚರಣೆಗೆ ನಾಂದಿಯಾಗುತ್ತದೆ. ಒಮ್ಮೆ ಕೈಲಾಸದಲ್ಲಿ ಪಾರ್ವತಿ ದೇವಿ ಸರ್ವ ಜನರಿಗೆ ಸಂಪತ್ತು , ಆರೋಗ್ಯ ಇಹದಲ್ಲಿ ನೆಮ್ಮದಿ ಮತ್ತು ಪರದಲ್ಲಿ ಮೋಕ್ಷ ನೀಡುವ ಶ್ರೇಷ್ಠ ವ್ರತದ ವಿಷಯ ತಿಳಿಸಬೇಕೆಂದು ಪರಮೇಶ್ವರನಲ್ಲಿ ಪ್ರಾರ್ಥಿಸುತ್ತಾಳೆ. ಆಗ ಸಾಕ್ಷಾತ್ ಶಿವ ಪಾರ್ವತಿಯರು ಋಷಿಮುನಿಗಳ ಸಮ್ಮುಖದಲ್ಲಿ ಶ್ರೇಷ್ಠ ವ್ರತ ಒಂದರ ಬಗ್ಗೆ ವಿವರಿಸುತ್ತಾನೆ.
ಹಿಂದೆ ವಿದರ್ಭ ದೇಶದ ಕೌಂಡಿನ ನಗರದಲ್ಲಿ ಚಾರುಮತಿ ಎನ್ನುವ ಸುಂದರ ಸುಶೀಲೆ ಹೆಣ್ಣುಮಗಳು ಇರುತ್ತಾಳೆ. ಅವಳು ಪ್ರತಿನಿತ್ಯ ಪ್ರಾತಃಕಾಲದಲ್ಲಿ ಸೂರ್ಯೋದಯಕ್ಕೆ ಮುಂಚೆ ಎದ್ದು ಮನೆಯ ಮುಂದೆ ಗೋಮಯದಿಂದ ಸಾರಿಸಿ, ರಂಗೋಲಿಯನ್ನು ಬಿಡಿಸಿ , ಮಂಗಳ ಸ್ನಾನ ಮಾಡಿ, ಹೊಸ್ತಿಲ ಪೂಜೆಯನ್ನು ನೆರವೇರಿಸುತ್ತಿದ್ದರು.

 

ವೃಂದಾವನದಲ್ಲಿ ತುಳಸಿ ಪೂಜೆಯನ್ನು ಮಾಡಿ, ಅತ್ಯಂತ ಭಕ್ತಿಯಿಂದ ತುಳಸಿಯನ್ನು ಅಂತರಂಗದಿಂದ ಪೂಜಿಸುತ್ತಿದ್ದಳು. ಚಾರುಮತಿ ತುಳಸಿಯಲ್ಲಿರುವ ಅಂತರಂಗದ ಲಕ್ಷ್ಮಿಯನ್ನು ಪೂಜಿಸುವಾಗ ಮನೆಯ ಮಂದಿಯನ್ನು ಚೆನ್ನಾಗಿ ನೋಡಿಕೊಳ್ಳಲು ಅವರ ಸೇವೆಯನ್ನು ನಿರಂತರವಾಗಿ ಮಾಡಲು ಸದೃಢ ಆರೋಗ್ಯವನ್ನು ದಯಪಾಲಿಸು ಎಂದು ಬೇಡಿಕೊಳ್ಳುತ್ತಿದ್ದಳು. ಮನೆಯ ಗೃಹಿಣಿಯಾಗಿ ಎಲ್ಲರನ್ನು ನೋಡಿಕೊಳ್ಳುವುದು ತನ್ನ ಕರ್ತವ್ಯವೆಂದು ಭಾವಿಸಿದ್ದಳು. ಚಾರುಮತಿಯಲ್ಲಿ ಸರಳತೆ, ಅಪಾರ ತಿಳುವಳಿಕೆ ಮತ್ತು ಸೇವಾ ಮನೋಭಾವವಿತ್ತು.

ಹೀಗಿರಲು ಒಂದು ದಿನ ಚಾರುಮತಿಯ ಸ್ವಪ್ನದಲ್ಲಿ ಸಾಕ್ಷಾತ್ ಲಕ್ಷ್ಮಿ ಕಾಣಿಸಿಕೊಂಡಳು. ಚಾರುಮತಿ ನಿನ್ನ ಸರಳತೆಗೆ, ಸೇವಾಮನೋಭಾವಕ್ಕೆ ನಾನು ತೃಪ್ತಳಾಗಿದ್ದೇನೆ. ನಿನಗಾಗಿ ನೀನು ಎಂದು ಏನನ್ನೂ ಬೇಡಲಿಲ್ಲ. ಪರರ ಸೇವೆಯಲ್ಲಿ ಸಂತೋಷ ಪಡುತ್ತಿದ್ದೀಯ.ನನ್ನ ಹೆಸರು ವರಮಹಾಲಕ್ಷ್ಮಿ. ವರವನ್ನು ಕೊಡುವ ಲಕ್ಷ್ಮಿ ಬರುವ ಶ್ರಾವಣ ಮಾಸದಲ್ಲಿ ಹುಣ್ಣಿಗೆ ಮುನ್ನ ನಿಮಗೆ ಮುಂಚೆ ಶುಕ್ರವಾರದಂದು ನನ್ನನ್ನು ಕಳಶ ರೂಪದಲ್ಲಿ ಆಹ್ವಾನಿಸಿ ಪೂಜೆಯನ್ನು ಸಲ್ಲಿಸುವುದು. ನನಗೆ ಅತ್ಯಂತ ಸಂತೋಷದ ದಿನ . ನಿನಗೆ ಸಂಪತ್ತನ್ನು ದಯಪಾಲಿಸುತ್ತಾನೆ. ಚಾರುಮತಿಗೆ ಇತ್ತ ತಾನು ಕಂಡ ಸ್ವಪ್ನದ ಬಗ್ಗೆ ಆಶ್ಚರ್ಯವಾಯಿತು. ವರಮಹಾಲಕ್ಷ್ಮಿಯನ್ನು ಕನಸಿನಲ್ಲಿ ಕಂಡ ಅವಳಿಗೆ ಅತ್ಯಂತ ಸಂತೋಷವಾಯಿತು . ವರಮಹಾಲಕ್ಷ್ಮಿ ನಿನ್ನ ಕೃಪೆ ಅಪಾರವಾದದ್ದು ನಿನ್ನ ಅನುಗ್ರಹಕ್ಕೆ ಪಾತ್ರರಾದ ನನಗೆ ಯಾವ ಅಪೇಕ್ಷೆಯೂ ಇಲ್ಲ ಎಂದು ಲಕ್ಷ್ಮಿಯ ಮಹಿಮೆಯನ್ನು ಕೊಂಡಾಡಿದಳು. ಮುಂದೆ ತನಗೆ ಬಂದ ಕನಸಿನ ವಿಷಯವನ್ನು ಮನೆಯವರಲ್ಲಿ ಹೇಳಿಕೊಂಡಳು . ವರಮಹಾಲಕ್ಷ್ಮಿ ಕನಸಿನಲ್ಲಿ ಅನುಗ್ರಹಿಸಿದ ಪ್ರಕಾರವೇ ಶ್ರಾವಣ ಮಾಸದ ಹುಣ್ಣಿಮೆಯ ಹಿಂದೆ ಬರುವ ಶುಕ್ರವಾರದಂದು ಶ್ರದ್ಧೆ, ಭಕ್ತಿಯಿಂದ ದೇವಿಯನ್ನು ಕಳಸ ರೂಪದಲ್ಲಿ ಪೂಜಿಸಿದಳು. ಆ ದಿನ ಅತ್ಯಂತ ತೃಪ್ತಳಾದ ಶ್ರೀ ಮಹಾಲಕ್ಷ್ಮಿ.

ಚಾರುಮತಿಗೆ ಎಲ್ಲಾ ರೀತಿಯ ಸಂಪತ್ತನ್ನು ದಯಪಾಲಿಸಿದಳು. ಅತ್ಯಂತ ಬಡತನದಲ್ಲಿದ್ದ ಚಾರುಮತಿಗೆ ಗೃಹ, ಸಕಲ ಸಂಪತ್ತುಗಳಿಂದ ,ವೈಭವದಿಂದ ಕಂಗೊಳಿಸುವಂತೆ ನೂರಾರು ಜನರಿಗೆ ಅನ್ನದಾನ ಮಾಡುವ ಕೇಂದ್ರವಾಯಿತು. ಚಾರುಮತಿ ಎಂದು ನಿರೀಕ್ಷೆ ಮಾಡದ ಸಂಪತ್ತು ವಿಧ ವಿಧವಾಗಿ ಹರಿದು ಬಂತು.ಮುಂದೆ ಚಾರುಮತಿ ಸಕಲ ಐಶ್ವರ್ಯಗಳಿಂದ ಬಾಳುತ್ತಾ, ದಾನಧರ್ಮಗಳನ್ನು ಮಾಡುತ್ತಾ, ಕಡೆಯಲ್ಲಿ ಮೋಕ್ಷವನ್ನು ಸಹ ಪಡೆದಳು. ಇದೆಲ್ಲಾ ವರಮಹಾಲಕ್ಷ್ಮಿಯ ಮಹಾಪ್ರಸಾದ. ಈ ಲೋಕದಲ್ಲಿ ಅನೇಕರು ಈ ವ್ರತವನ್ನು ಆಚರಿಸುತ್ತಾ ಅಭೀಷ್ಟಗಳನ್ನು ಪೂರ್ಣ ಮಾಡಿಕೊಳ್ಳುತ್ತಿದ್ದಾರೆ .ಇದು ವರ ಮಹಾಲಕ್ಷ್ಮೀಯ ಒಂದು ಮಹತ್ವದ ಕಥೆಯಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top