fbpx
ಸಮಾಚಾರ

CSK ತೊರೆಯಲಿರುವ ಜಡೇಜಾ? ಅನುಮಾನಕ್ಕೆ ಕಾರಣವಾಯ್ತು ಈ ನಡೆ

ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ 2022ರ ಇಂಡಿಯನ್ ಪ್ರೀಮಿಯರ್ ಲೀಗ್‌ ಅಷ್ಟೇನೂ ಒಳ್ಳೆಯದಾಗಿರಲಿಲ್ಲ. ಆಡಿದ ಒಟ್ಟು 14 ಪಂದ್ಯಗಳಲ್ಲಿ ಕೇವಲ 4 ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಆವೃತ್ತಿಯ ಆರಂಭದ ಮುನ್ನ ಆಲ್ ರೌಂಡರ್ ರವೀಂದ್ರ ಜಡೇಜಾ ಅವರಿಗೆ CSK ನಾಯಕತ್ವವನ್ನು ವಹಿಸಲಾಗಿತ್ತು. ಆದರೆ ತಂಡದ ಕಳಪೆ ಪ್ರದರ್ಶನದಿಂದಾಗಿ ಜಡೇಜ ಅವರು ನಾಯಕತ್ವವನ್ನು ತೊರೆದರು. ಆನಂತರ ನಾಯಕತ್ವವನ್ನು ಮತ್ತೆ ಧೋನಿ ಅವರಿಗೆ ವಹಿಸಲಾಯಿತು .

ಇವೆಲ್ಲದರ ಬೆಳವಣಿಗೆಗಳ ನಡುವೆ ಕಳೆದ ತಿಂಗಳು ಜಡೇಜಾ ಅವರ ಸಾಮಾಜಿಕ ಜಾಲತಾಣದ ಚಟುವಟಿಕೆಗಳು ಅವರ ಮತ್ತು CSK ನಡುವಿನ ಸಂಭಂದದ ಕುರಿತು ಅನೇಕ ಅನುಮಾನಗಳು ಮೂಡಿತ್ತು. ಜಡೇಜಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಿಂದ 2021 ಮತ್ತು 2022ರಲ್ಲಿ ತಾವು ಮಾಡಿದ್ದ CSK ಸಂಬಂಧಿತ ಎಲ್ಲಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಿದ್ದರು. ಆ ಬಳಿಕ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆಯುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಈ ಎಲ್ಲಾ ವಿಚಾರಗಳ ಮಧ್ಯೆ ಜಡೇಜಾ ಮತ್ತು CSK ತಂಡದಿಂದ ಮತ್ತೊಂದು ಹೆಜ್ಜೆ ಹೊರಯಿಟ್ಟಿದ್ದಾರೆ ಎಂಬ ಮಾತು ಕೇಳಿಬಂದಿದೆ. ಏಕೆಂದರೆ ಚೆನ್ನೈ ತಂಡದ ಟ್ವೀಟ್ ಒಂದಕ್ಕೆ ನೀಡಿದ್ದ ರಿಪ್ಲೆ ಪೋಸ್ಟ್ ಅನ್ನೇ ಜಡೇಜಾ ಡಿಲೀಟ್ ಮಾಡಿದ್ದಾರೆ. ಇದು CSK ಅಭಿಮಾನಿಗಳಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

 

 

ಜಡೇಜಾ CSK ತಂಡವನ್ನು ಸೇರಿ ಬರೋಬ್ಬರಿ ಹತ್ತು ವರ್ಷ ಮುಕ್ತಾಯವಾಗಿದೆ. ಈ ವಿಶೇಷವಾಗಿ ಫೆಬ್ರವರಿ 4 2022 ರಂದು CSK ಫ್ರಾಂಚೈಸ್ ಜಡೇಜಾ ಕುರಿತು “10 years of Super Jaddu.” ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಜಡ್ಡು “10 more to go.” ಎಂದು ಬರೆದು ರಿಪ್ಲೆ ಮಾಡಿದ್ದರು. ಆದರೆ ಇದೀಗ ಈ ಪೋಸ್ಟ್ ಡಿಲೀಟ್ ಮಾಡಿದ್ದು, ಇದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ನಿಜಕ್ಕೂ ಜಡೇಜಾ ಮತ್ತು CSK ನಡುವೆ ನಸುಕಿನ ಗುದ್ದಾಟ ನಡೆಯುತ್ತಿದೆಯೇ? ಜಡೇಜಾ CSK ತಂಡವನ್ನು ತೊರೆಯುತ್ತಾರಾ? ಎಂಬೆಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top