fbpx
ಸಮಾಚಾರ

ಬಿಗ್ ಬಾಸ್ OTT ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ ಎಂಟ್ರಿ!

ಬಿಗ್ ಬಾಸ್ OTT ಇಂದು ಸಂಜೆ 7 ಗಂಟೆಗೆ ಗ್ರಾಂಡ್ ಓಪನಿಂಗ್ ಪಡೆಯಲಿದ್ದು, ಇದಕ್ಕಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚಿಗೆ ಬಂದಿರುವ ಮಾಹಿತಿ ಪ್ರಕಾರ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆ ಪ್ರವೇಶಿಸುತ್ತಿರುವ ಮೋಡಲ್ ಸ್ಪರ್ಧಿ ಎಂದು ಹೇಳಲಾಗುತ್ತಿದೆ. ವೂಟ್ ಕೂಡ ಇದರ ಕುರಿತು ಅಧಿಕೃತವಾಗಿ ಘೋಷಿಸಿದೆ.

ಆರ್ಯವರ್ಧನ್ ಗುರೂಜಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಐಪಿಎಲ್ ಸಮಯದಲ್ಲಿ ಅತಿ ಹೆಚ್ಚು ಟಿವಿ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿದ್ದ ಗುರೂಜಿ ಇವರು. ಐಪಿಎಲ್ ಪಂದ್ಯ ಶುರುವಾಗುವ ಮುಂಚೆ ಯಾವ ತಂಡ ಗೆಲ್ಲುತ್ತದೆ, ಯಾವ ಆಟಗಾರ ಹೆಚ್ಚು ರನ್ ಅಥವಾ ಹೆಚ್ಚು ವಿಕೆಟ್ ಕಬಳಿಸುತ್ತಾರೆ ಹೀಗೆ ಹತ್ತು ಹಲವಾರು ಪ್ರೆಡಿಕ್ಷನ್ ಮಾಡುತ್ತಿದ್ದರು. ಆದರೆ ವಿಪರ್ಯಾಸ ಎಂದರೆ ಇವರು ಮಾಡುತ್ತಿದ್ದ ಲೆಕ್ಕಾಚಾರ ಯಾವುದು ಸರಿ ಹೋಗುತ್ತಿರಲಿಲ್ಲ. ಎಲ್ಲವು ಉಲ್ಟಾ ಆಗುತ್ತಿತ್ತು.

ಆರ್ಯವರ್ಧನ್ ಹೆಚ್ಚಾಗಿ ನಮ್ಮ ಆರ್ ಸಿ ಬಿ ತಂಡವನ್ನು ಸಪ್ಪೋರ್ಟ್ ಮಾಡುತ್ತಿದ್ದರು. ಆರ್ ಸಿ ಬಿ ತಂಡದ ಪರ ಪ್ರೆಡಿಕ್ಷನ್ ಮಾಡುತ್ತಿದ್ದರು. ಈಗಾಗಿ ಇವರು ಅಪಾರವಾದ ಅಭಿಮಾನಿಗಳನ್ನು ಸಂಪಾದಿಸಿದ್ದರು. ಇವರು ಇದೀಗ ಬಿಗ್ ಬಾಸ್ ಮನೆ ಒಳಗೆ ಹೋಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಟಿವಿ ಕಾರ್ಯಕ್ರಮದಲ್ಲಿ ಎಲ್ಲರನ್ನು ರಂಜಿಸುತ್ತಿದ್ದ ಇವರು ಬಿಗ್ ಬಾಸ್ ಮನೆಗೆ ಹೋಗಿ ಜನರನ್ನು ಯಾವ ರೀತಿ ರಂಜಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top