fbpx
ಸಮಾಚಾರ

ನಿಮ್ಮ ಮನೆಯಲ್ಲಿ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತಿದೆಯಾ? ಹಾಗಿದ್ದರೆ ತಕ್ಷಣ ಈ ಕೆಳಗಿರುವ ಉಪಕರಣಗಳ ಬಳಕೆಯನ್ನು ಕಡಿಮೆ ಮಾಡಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಕೇಳಲ್ಪಡುವ ಒಂದು ಸಮಸ್ಯೆ ಎಂದರೆ ಅದು ವಿದ್ಯುತ್ ಬಿಲ್ ಏರಿಕೆ. ಮೊದಲೇ ಸರ್ಕಾರ ವಿದ್ಯುತ್ ಬಿಲ್ ಮೊತ್ತವನ್ನು ಪ್ರತಿ ಯೂನಿಟ್ ಗೆ ಹೆಚ್ಚಿಸುತ್ತಲೇ ಇರುತ್ತದೆ. ಇದರ ಮದ್ಯೆ ಜನರಿಗೆ ವಿದ್ಯುತ್ ಬಿಲ್ ಪ್ರತಿ ತಿಂಗಳು ಹೆಚ್ಚು ಬರುತ್ತಿದೆ ಎಂಬ ಚಿಂತೆ. ಆದರೆ ಜನರು ಮಾತ್ರ ಇದಕ್ಕೆ ಸ್ಪಷ್ಟವಾದ ಕಾರಣ ಏನೆಂಬುದನ್ನು ಮಾತ್ರ ತಿಳಿಯುವುದಿಲ್ಲ.

ನಿಮ್ಮ ಮನೆಯ ವಿದ್ಯುತ್ ಬಿಲ್ ದಿನ ಹೆಚ್ಚಳವಾಗಲು ಮುಖ್ಯ ಕಾರಣ ನೀವು ನಿಮ್ಮ ಮನೆಯಲ್ಲಿ ಬಳಸುವ ಉಪಕರಣಗಳು. ನಿಮ್ಮ ಮನೆಯಲ್ಲಿ ಬಳಸುವ ಕೆಲವು ಉಪಕರಣಗಳು ನಿಮ್ಮ ವಿದ್ಯುತ್ ಬಿಲ್ ಅನ್ನು ಹೆಚ್ಚಳ ಮಾಡುತ್ತದೆ. ಹೀಗಾಗಿ ತಾವುಗಳು ತಮ್ಮ ಮನೆಯ ಕೆಲವು ಉಪಕರಣಗಳ ಕುರಿತು ಜಾಗೃತಿ ವಹಿಸಬೇಕು. ತಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಹೆಚ್ಚಳ ಮಾಡುವ ಉಪಕರಣಗಳ ಪಟ್ಟಿ ಇಲ್ಲಿದೆ.

ಎಲೆಕ್ಟ್ರಿಕ್ ಗೀಸರ್:
ಇದು ಅತ್ಯಂತ ಹೆಚ್ಚು ವಿದ್ಯುತ್ ಬಳಸುವ ಸಾಧನ. ಅದರಲ್ಲೂ ಮಳೆ ಗಾಲದಲ್ಲಿ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ಗೀಸರ್ ಅನ್ನು ಬಳಸುತ್ತಾರೆ. ಈಗಾಗಿ ಎಲೆಕ್ಟ್ರಿಕ್ ಗೀಸರ್ ಬದಲು ಜನರು ಅನಿಲ ಚಾಲಿತ ಗೀಸರ್ ಬಳಸಬಹುದು. ಇದು ಎಲೆಕ್ಟ್ರಿಕ್ ಗೀಸರ್ ಗೆ ಹೋಲಿಸಿದರೆ ಅತಿ ಕಡಿಮೆ ವಿದ್ಯುತ್ ಬಳಸುತ್ತದೆ.

ನಾನ್-ಇನ್ವರ್ಟರ್ ಏರ್ ಕಂಡಿಷನರ್:
ಇನ್ನು ಮನೆಯಲ್ಲಿ ಅತಿ ಹೆಚ್ಚು ವಿದ್ಯುತ್ ಬಳಸುವ ಉಪಕರಣ ಎಂದರೆ ಅದು AC. ಆದರೂ ಜನರು ಮಾತ್ರ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಹೀಗಾಗಿ ಜನರು ಇದರ ಬದಲು ಫ್ಯಾನ್ ಬಳಸಬಹುದು. ಇಲ್ಲವೆಂದರೆ ಇನ್ವರ್ಟರ್ ಎಸಿ ಉತ್ತಮವಾಗಿದೆ. ಇದು ಸುಮಾರು 15 ಪ್ರತಿಶತದಷ್ಟು ವಿದ್ಯುತ್ ಅನ್ನು ಉಳಿಸುತ್ತದೆ.

ಚಿಮಣಿ:
ಅಡುಗೆಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ವಸ್ತು ಇದು. ಹೆಚ್ಚಾಗಿ ಬೇಸಿಗೆಯ ಸಮಯದಲ್ಲಿ ಜನರು ಇದನ್ನು ಬಳಸುತ್ತಾರೆ. ವರದಿಯ ಪ್ರಕಾರ ಇದು ಅತಿ ಹೆಚ್ಚು ವಿದ್ಯುತ್ ಬಳಸುವ ಉಪಕರಣ ವಾಗಿದೆ. ಹೀಗಾಗಿ ಜನರು ಚಿಮಣಿ ಬದಲಿಗೆ ಅನೇಕ ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಇದನ್ನು ಬಾಲಸುವ ಮೂಲಕ ವಿದ್ಯುತ್ ಅನ್ನು ಉಳಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top