fbpx
ಸಮಾಚಾರ

ಪ್ರೊ ಕಬಡ್ಡಿ ಲೀಗ್ ನಲ್ಲಿ ಇತಿಹಾಸ ನಿರ್ಮಿಸಿದ ಹಾಲಿ ಬೆಂಗಳೂರು ಬುಲ್ಸ್ ತಂಡದ ಆಟಗಾರ! ಏನದು ಗೊತ್ತಾ?

ಅತಿ ಹೆಚ್ಚು ಪ್ರಾಮುಖ್ಯತೆ ಗಳಿಸಿರುವ ಕ್ರೀಡೆಗಳಲ್ಲಿ ಕಬಡ್ಡಿ ಕೂಡ ಒಂದು. ಪ್ರೊ ಕಬಡ್ಡಿ ಲೀಗ್ ಯಶಸ್ವಿಯಾಗಿ ತನ್ನ 8 ಆವೃತ್ತಿಗಳನ್ನು ಮುಗಿಸಿದ್ದು, ಇದೀಗ ತನ್ನ 9 ನೇ ಆವೃತ್ತಿಗೆ ಕಾಲಿಟ್ಟಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದ್ದು, ಕಳೆದ ವರ್ಷ ಬೆಂಗಳೂರು ಬುಲ್ಸ್ ತಂಡದ ಪರ ಆಡಿದ ಆಟಗಾರ ಇಂದು ಇತಿಹಾಸದಲ್ಲೇ ಅಧಿಕ ಮೊತ್ತಕ್ಕೆ ಸೇಲ್ ಆಗಿದ್ದಾರೆ.

ಪ್ರೊ ಕಬಡ್ಡಿ ಲೀಗ್ ಎಂದರೆ ಅಭಿಮಾನಿಗಳಿಗೆ ಹುಚ್ಚು. ಕಬಡ್ಡಿ ಪ್ರಿಯರು ತಮ್ಮೆಲ್ಲ ಚಟುವಟಿಕೆಗಳನ್ನು ಬಿಟ್ಟು ಈ ಆಟವನ್ನು ನೋಡುತ್ತಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಬಿಡ್ಡಿಂಗ್ ನಡೆದಿದ್ದು, ಬೆಂಗಳೂರು ಬುಲ್ಸ್ ತಂಡದ ಪರ ಆಡಿದ ಆಟಗಾರ ಪವನ್​ ಬರೋಬ್ಬರಿ 2 ಕೋಟಿ 26 ಲಕ್ಷ ರೂ ಗೆ ಸೇಲ್ ಆಗಿದ್ದಾರೆ.

ಕಳೆದ ಬಾರಿ ಬೆಂಗಳೂರು ಬುಲ್ಸ್ ತಂಡದ ಪರ ಆಡಿದ ಪವನ್ ಅವರನ್ನು ಈ ಬಾರಿ ತಮಿಳ್ ತಲೈವಾಸ್ ತಂಡವು ಬರೋಬ್ಬರಿ 2 ಕೋಟಿ 26 ಲಕ್ಷ ರೂ. ನೀಡಿ ಖರೀದಿಸಿದೆ. ಇದು ಪ್ರೊ ಕಬಡ್ಡಿ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ಹೆಗ್ಗಳಿಕೆಗೆ ಪವನ್ ಪಾತ್ರರಾಗಿದ್ದಾರೆ. ಏಕೆಂದರೆ ಇಲ್ಲಿಯವರೆಗೂ ಯಾವ ಆಟಗಾರ ಕೂಡ 2 ಕೋಟಿಗಿಂತ ಅಧಿಕ ಮೊತ್ತಕ್ಕೆ ಮಾರಾಟವಾಗಿರಲಿಲ್ಲ. ಇದೀಗ ಪವನ್ ಇತಿಹಾಸ ನಿರ್ಮಿಸಿದ್ದಾರೆ.

ಈ ಹಿಂದೆ ಅಧಿಕ ಬೆಳೆಗೆ ಮಾರಾಟವಾದ ಆಟಗಾರರ ಪಟ್ಟಿಯಲ್ಲಿ ಪರ್ದೀಪ್ ನರ್ವಾಲ್ ಹೆಸರಿತ್ತು. ಇವರನ್ನು ಯುಪಿ ಯೋಧಾ ತಂಡ 1.65 ಕೋಟಿಗೆ ಖರೀದಿಸಿತ್ತು. ಆದರೆ ಈ ಇತಿಹಾಸವನ್ನು ಪವನ್ ಮುರಿದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top