ಬಿಗ್ ಬಾಸ್ ಶುರುವಾಗಿದೆ. ಸ್ಪರ್ಧಿಗಳು ಮನೆ ಒಳಗೆ ಪ್ರವೇಶಿಸಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಮೊದಲ ಟಾಸ್ಕ್ ನೀಡಿದ್ದಾರೆ. ಅದೇನೆಂದರೆ ನಾನು ಯಾರು? ಎಂಬ ಟಾಸ್ಕ್. ಇದರಲ್ಲಿ ಪ್ರತಿಯೊಬ್ಬ ಸ್ಪರ್ಧಿಯು ತಮ್ಮ ಜೀವನದಲ್ಲಿ ಆದ ಕಹಿ ಘಟನೆಯ ಕುರಿತು ಮಾತನಾಡುತ್ತಿದ್ದಾರೆ. ಈ ವೇಳೆ ಪತ್ರಕರ್ತರಾದ ಸೋಮಣ್ಣ ಮಾಚಿಮಾಡ ತಮ್ಮ ಜೀವನದಲ್ಲಿ ಆದ ಕಹಿ ಘಟನೆಯನ್ನು ನೆನೆದು ಕಣ್ಣೇರು ಇಟ್ಟರು.
ಸೋಮಣ್ಣ ಮಾಚಿಮಾಡ ಅವರಿಗೆ ಸ್ಪರ್ಧಿಗಳು ನೀವು ಯಾಕೆ ಸಣ್ಣ ಆಗಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಇವರು ಕಳೆದ ಎರಡು ವರ್ಷಗಳಿಂದ ನನ್ನ ಜೀವನದಲ್ಲಿ ಆದ ಬದಲಾವಣೆಗಳು ನನ್ನನ್ನು ಈ ರೀತಿ ಮಾಡಿದೆ. ವಿಚ್ಛೇದನದ ಸಂದರ್ಭದಲ್ಲಿ ನಾನು ಬೆಳಗ್ಗೆ ಕೋರ್ಟ್ಗೆ ಹೋಗುತ್ತಿದ್ದೆ, ಮಧ್ಯಾಹ್ನ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಿದ್ದೆ. ನಾವಿಬ್ಬರು ಪರಸ್ಪರ ಒಪ್ಪಿ ವಿಚ್ಚೇದನ ಪಡೆದಿದ್ದೇವೆ. ಇಬ್ಬರಿಗೆ ಬೇರೆ ಬೇರೆ ಕಾರಣಗಳಿರಬಹುದು. ಆದರೆ ಇದೀಗ ನನಗೆ ಅವರನ್ನು ಮರೆತು ಬದುಕಲು ಸಾಧ್ಯವಾಗುತ್ತಿಲ್ಲ. ಆಕೆಯೇ ಫಸ್ಟ್, ಆಕೆಯೇ ಲಾಸ್ಟ ಎಂದು ಹೇಳಿದ್ದಾರೆ.
ಆಕೆಯನ್ನು ನಾನು ಬಹಳಷ್ಟು ನೋಯಿಸಿಬಿಟ್ಟೆ ಅನಿಸುತ್ತದೆ. ಯಾವಾಗ ನೋಡಿದರು ಕೆಲಸ ಕೆಲಸ ಎಂದು ಹೋಗುತ್ತಿದ್ದೆ. ಅವಳನ್ನು ದೂರ ತಳ್ಳಿದೆ ಎಂದು ಹೇಳ್ತಿಲ್ಲ, ಆದರೆ ನಂಗೆ ಅವಾಗ ನನ್ನ ಕೆಲಸ ಇಂಪಾರ್ಟೆಂಟ್ ಆಗಿತ್ತು. ನನ್ನ ತಂದೆ ಆರ್ಮಿ ಅಲ್ಲಿ ಕೆಲಸ ಮಾಡುತ್ತಿದ್ದರು. ನಾನು ಅವಳಿಗೆ ಹೇಳ್ತಿದ್ದೆ ನಮ್ಮ ಅಪ್ಪ ತರ ನಾನು ಕೂಡ ಆರ್ಮಿ ಅಲ್ಲಿ ಇದ್ದಿದರೆ ನೀನು ಇಲ್ಲಿ ಒಂಟಿಯಾಗಿ ಇರಬೇಕಿತ್ತು ಎಂದು. ಆದ್ದರಿಂದ ನಂಗೆ ಮಿಡಿದ ತುಂಬಾ ಇಂಪಾರ್ಟೆಂಟ್ ಎಂದು ಹೇಳಿದೆ.
ಇದಲ್ಲದೆ ನಾನು ಈ ಕಾರ್ಯಕ್ರಮಕ್ಕೆ ಬರುವ ಮುಂಚೆ ಅವಳಿಗೆ ಕಾಲ್ ಮಾಡಿದ್ದೆ. ಅವಳಿಗೆ ನಾನು ಬಿಗ್ ಬಾಸ್ ಗೆ ಹೋಗುತ್ತಿರುವ ವಿಷಯ ಹೇಳಿದ ಮೇಲೆ ಮನಸಿಗೆ ಸಮಾಧಾನ ಅಯ್ತು. ನನ್ನ ಆಶೀರ್ವಾದ ನಿನ್ನ ಮೇಲೆ ಇರುತ್ತೆ ಹೋಗಿ ಚೆನ್ನಾಗಿ ಅದು ಎಂದು ಹೇಳಿದರು.
ಇದಲ್ಲದೆ ವಿಚ್ಚೇದನ ನಂತರ ಸ್ನೇಹಿತರು, ಪರಿವಾರದವರು ನನ್ನನು ದೂರ ಮಾಡಿದರು. ಈಗಲೂ ಕೂಡ ನಾನು ಒಬ್ಬನಾಗಿ ಬದುಕುತ್ತಿದ್ದೇನೆ. ನಾನು ಬಿಗ್ ಬಾಸ್ ಬರಲು ಮುಖ್ಯ ಕಾರಣವೇನೆಂದರೆ ಜನರ ಜೊತೆ ಬೆರೆಯಬೇಕು ಎಂದು. ಏಕೆಂದರೆ ಮೊದಲಿನಿಂದಲೂ ನನಗೆ ಪ್ಪನ ಪ್ರೀತಿ ಸಿಗಲಿಲ್ಲ. ಅಪ್ಪನ ಜತೆ ಊಟ ಮಾಡಿದ್ದೂ ನೆನಪಿಲ್ಲ. ಈಗಾಗಿ ನಿಮ್ಮ ಪ್ರೀತಿ ಸಿಗಲಿ ಎಂದು ಬಿಗ್ ಬಾಸ್ ಗೆ ಬಂದೆ ಎಂದು ತಿಳಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
