fbpx
ಸಮಾಚಾರ

ವೈರಲ್ ಆಗಿದ್ದ ತನ್ನ ಬೆತ್ತಲೆ ವಿಡಿಯೋ ಕಣ್ಣೀರಿಟ್ಟ ಸೋನು: ವಿಡಿಯೋ ಲೀಕ್​ ಆಗಿದ್ದು ಹೇಗೆ? ಎಲ್ಲವನ್ನೂ ಎಳೆಎಳೆಯಾಗಿ ವಿವರಿಸಿದ ಸೋನು ಗೌಡ

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಷೋ ಎಂದೇ ಹೆಸರಾಗಿರುವ ಬಿಗ್ ಬಾಸ್ ಈ ಬಾರಿ ಓಟಿಟಿಯಲ್ಲಿ ಪ್ರಸಾರವಾಗುವ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದೆ. ಈ ಭಾರಿ ದಿನದ 24 ಗಂಟೆಯೂ ದೊಡ್ಮನೆಯಲ್ಲಿ ಏನಾಗುತ್ತದೆ ಎಂದು ವೀಕ್ಷಣೆ ಮಾಡಬಹುದು. ಇಂಥ ಬಿಗ್ ಬಾಸ್ ಗೆ ಈ ಬಾರಿ ಒಟ್ಟು 16 ಮಂದಿ ಗ್ರಾಂಡ್ ಎಂಟ್ರಿ ಕೊಟ್ಟಿದ್ದು ಆಟ ಈಗಷ್ಟೇ ಕಳೆಕಟ್ಟಿದೆ.

ಬಿಗ್​ ಬಾಸ್​ ಸ್ಪರ್ಧಿಗಳ ಪೈಕಿ ಸೋನು ಶ್ರೀನಿವಾಸ್​ ಗೌಡ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಷೋಗೆ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ನೆಟ್ಟಿಗರು ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಕಾರಣ ಇಷ್ಟೇ.. ಕೆಲವೇ ತಿಂಗಳ ಹಿಂದೆ ಸೋನು ಗೌಡ ಅವರ ಬೆತ್ತಲೆ ವಿಡಿಯೋ ಲೀಕ್​ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಖಾಸಗಿ ಅಂಗಗಳನ್ನು ಪ್ರದರ್ಶನ ಮಾಡಿದವರಿಗೆಲ್ಲ ‘ಬಿಗ್​​ ಬಾಸ್​’ ವೇದಿಕೆಯಲ್ಲಿ ಅವಕಾಶ ನೀಡಿದ್ದು ಸರಿಯಲ್ಲ ಎಂದು ಕಮೆಂಟ್​ಗಳ ಮೂಲಕ ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ. ಈಗ ಅದೇ ಲೀಕ್ ವಿಡಿಯೋ ಬಗ್ಗೆ ಸ್ವತಃ ಸೋನು ಗೌಡ ಮಾತನಾಡಿದ್ದಾರೆ. ತಮ್ಮ ಖಾಸಗಿ ವಿಡಿಯೋ ಲೀಕ್​ ಆಗಿದ್ದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ನಮ್ಮ ಮನೆಯಲ್ಲಿ, ‘ನೀನು ಯಾರನ್ನಾದರೂ ಲವ್ ಮಾಡು’ ಅಂತಾ ಸ್ವಾತಂತ್ರ್ಯ ಕೊಟ್ಟಿದ್ದರು. ಹಾಗಾಗಿ ನಾನು ಒಬ್ಬ ಹುಡುಗನನ್ನು ಇಷ್ಟಪಟ್ಟಿದ್ದೆ. ಅವನೂ ನನ್ನನ್ನು ಇಷ್ಟಪಡುತ್ತಿದ್ದ ಇಬ್ಬರೂ ಮದುವೆ ಸಹ ಆಗಬೇಕು ಎಂದುಕೊಂಡಿದ್ದೆವು. ಅವನೂ ಮದುವೆಗೆ ಒಪ್ಪಿಕೊಂಡಿದ್ದ. ಆದರೆ ಒಂದು ದಿನ ಅವನು ಏನು ಕೇಳ್ದ ಅಂದ್ರೆ, `ವಿಡಿಯೋ ಕಾಲ್ ಮಾಡು’ ಅಂತಾ ಕೇಳ್ದ. ಆಮೇಲೆ, ʼನಿನ್ನ ವಿಡಿಯೋ ಇದೆ, ನೀನು ಯಾರನ್ನ ಮದುವೆ ಆಗುತ್ತೀಯಾ ನೋಡತ್ತೀನಿʼ ಅಂತಾ ಬೆದರಿಕೆ ಹಾಕಿದ್ದ ಅಂತಾ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಇತರೇ ಸ್ಪರ್ಧಿಗಳು ಸೋನು ಶ್ರೀನಿವಾಸ್ ಅವರನ್ನ ಸಂತೈಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top