fbpx
ಸಮಾಚಾರ

ಅವನ ಬಳಿ ನಂದು ಮತ್ತೊಂದು ವಿಡಿಯೋ ಇದೆ, ಯಾವಾಗ ಬಿಡುಗಡೆಮಾಡುತ್ತಾನೋ ಗೊತ್ತಿಲ್ಲ…! ಶಾಕಿಂಗ್ ಹೇಳಿಕೆ ನೀಡಿದ ಸೋನು ಗೌಡ

ಟಿಕ್ ಟಾಕ್ ಮತ್ತು ರೀಲ್ಸ್ ಮೂಲಕ ಹೆಚ್ಚು ಪ್ರಖ್ಯಾತಿ ಗಳಿಸಿದ ಸೋನು ಗೌಡ ಅವರು ಇದೀಗ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಬಿಗ್ ಬಾಸ್ ಮನೆ ಪ್ರವೇಶಿಸಿರುವ ಇವರ ತಮ್ಮ ಜೀವನದ ಕಹಿ ಘಟನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅದರಲ್ಲೂ ತಮ್ಮ ವಿಡಿಯೋ ಬಿಡುಗಡೆ ಆದ ವಿಷಯವನ್ನು ಸಹ ಹಂಚಿಕೊಂಡಿದ್ದಾರೆ. ಇದರ ಮಧ್ಯೆ ಇದೀಗ ಮತ್ತೊಂದು ಷಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

ಟ್ರೊಲ್ ಮೂಲಕ ಅಟ್ ಹೆಚ್ಚು ಫೇಮಸ್ ಆದ ಸ್ಟಾರ್ ಎಂದರೆ ಅದು ಸೋನು ಗೌಡ. ತಮ್ಮ ಖಾಸಗಿ ವಿಡಿಯೋ ಲೀಕ್ ಆದ ಕುರಿತು ಮಾತನಾಡಿದ ಸೋನು “ನಾನು ಒಬ್ಬ ಹುಡುಗನನ್ನು ಇಷ್ಟಪಟ್ಟಿದ್ದೆ. ಅವನೂ ನನ್ನನ್ನು ಇಷ್ಟಪಡುತ್ತಿದ್ದ ಇಬ್ಬರೂ ಮದುವೆ ಸಹ ಆಗಬೇಕು ಎಂದುಕೊಂಡಿದ್ದೆವು. ಅವನೂ ಮದುವೆಗೆ ಒಪ್ಪಿಕೊಂಡಿದ್ದ. ಆದರೆ ಒಂದು ದಿನ ಅವನು ಏನು ಕೇಳ್ದ ಅಂದ್ರೆ, `ವಿಡಿಯೋ ಕಾಲ್ ಮಾಡು’ ಅಂತಾ ಕೇಳ್ದ. ಆಮೇಲೆ, ʼನಿನ್ನ ವಿಡಿಯೋ ಇದೆ, ನೀನು ಯಾರನ್ನ ಮದುವೆ ಆಗುತ್ತೀಯಾ ನೋಡತ್ತೀನಿʼ ಅಂತಾ ಬೆದರಿಕೆ ಹಾಕಿದ್ದ ಅಂತಾ ಕಣ್ಣೀರಿಟ್ಟಿದ್ದಾರೆ.

ಇದರ ಮಧ್ಯೆ ಮತ್ತೊಂದು ಷಾಕಿಂಗ್ ಹೇಳಿಕೆ ನೀಡಿದ ಸೋನು “ಆತನ ಬಳಿ ಇದ್ದಿದ್ದು ನನ್ನ ಎರಡು ವಿಡಿಯೋ. ಅದರಲ್ಲಿ ಒಂದನ್ನು ಬಿಡುಗಡೆ ಮಾಡಿದ್ದಾನೆ. ಮತ್ತೊಂದು ಯಾವಾಗ ಬಿಡುಗಡೆ ಮಾಡುತ್ತಾನೋ ಗೊತ್ತಿಲ್ಲ. ನನಗೆ ಆದ ರೀತಿ ಬೇರೆ ಯಾವಾಗ ಹುಡಿಗಿಗೂ ಆಗಬಾರದು” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top