fbpx
ಸಮಾಚಾರ

‘ಸೋನು ಗೌಡ’ ನಿಜವಾದ ಹೆಸರು ಏನು ಗೊತ್ತಾ? ತನ್ನ ಅಸಲಿ ಹೆಸರು ಬಹಿರಂಗ ಪಡಿಸಿದ ಟಿಕ್ ಟಾಕ್ ಸ್ಟಾರ್

ಟಿಕ್ ಟಾಕ್ ಮೂಲಕ ಪ್ರಸಿದ್ಧಿ ಗಳಿಸಿದ ಸೋನು ಗೌಡ ಇದೀಗ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಅತಿ ಹೆಚ್ಚು ಟ್ರೊಲ್ ಗೆ ಒಳಗಾಗುತ್ತಿದ್ದ ಇವರು ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ಸಹ ಹೇಳಿದ್ದಾರೆ. ಇದೀಗ ಇವರು ತಮ್ಮ ನಿಜವಾದ ಹೆಸರನ್ನು ಬಹಿರಂಗವಾಗಿ ಬಿಗ್ ಬಾಸ್ ವೇದಿಕೆಯ ಮೇಲೆ ತಿಳಿಸಿದ್ದಾರೆ.

ಸೋನು ಗೌಡ ಎಂದೇ ಪ್ರಖ್ಯಾತರಾಗಿರುವ ಇವರು ಮೂಲತಃ ಮಂಡ್ಯದವರು. ಆದರೆ ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಎರಡನೆಯ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸಿದ ಇವರು ಸಾಮಾಜಿಕ ಜಾಲತಾಣವನ್ನು ಸಕ್ರಿಯವಾಗಿ ಬಳಸಿಕೊಂಡು ಸಕತ್ ಫೇಮಸ್ ಆದರು. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ ಅವರು ತಮ್ಮ ನಿಜವಾದ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಸೋನು ಗೌಡ ಅವರ ನಿಜವಾದ ಹೆಸರು ಶಾಂಭವಿ ಶ್ರೀನಿವಾಸ ಗೌಡ. ಆದರೆ ಯಾರೋ ಒಬ್ಬರು ಇವರನ್ನು ಈ ಹಿಂದೆ “ಸೋನು” ಎಂದು ಕರೆಯುತ್ತಿದ್ದರು. ಹೀಗಾಗಿ ಈ ನಿಕ್ ನೇಮ್ ಇವರಿಗೆ ಇಷ್ಟವಾಗಿ ಅದನ್ನೇ ಬಳಸುತ್ತಿದ್ದಾರೆ.

ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸಿರುವ ಇವರು ತಾವು ಜೀವನದಲ್ಲಿ ಅನುಭವಿಸಿದ ಕಷ್ಟಗಳನ್ನು ಸಹ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸೋನು ಗೌಡ ಎಂದೇ ಪ್ರಖ್ಯಾತಿ ಗಳಿಸಿರುವ ಇವರು ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top