ಮರಾಠಿಯ ಹಿರಿಯ ನಟ ಪ್ರದೀಪ್ ಪಟವರ್ಧನ್ ಅವರು ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 65 ವರ್ಷದ ಪಟವರ್ಧನ್ ಅವರು ಇಂದು ಬೆಳಿಗ್ಗೆ 7-8 ರ ಸುಮಾರಿಗೆ ದಕ್ಷಿಣ ಮುಂಬೈನ ಗಿರ್ಗಾಂವ್ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪಟವರ್ಧನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಮರಾಠಿ ಸಿನಿಮಾಗಳಲ್ಲಿನ ತಮ್ಮ ಅದ್ಭುತ ನಟನೆಯಿಂದಾಗಿ ಪ್ರದೀಪ್ ಪಟವರ್ಧನ್ ಅವರು ಪ್ರೇಕ್ಷಕರ ಹೃದಯ ಗೆದ್ದಿದ್ದರು. ಇಂದು ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಮರಾಠಿ ಕಲಾ ಪ್ರಪಂಚಕ್ಕೆ ತೀವ್ರ ನಷ್ಟ ಆಗಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಟ್ವೀಟ್ ಮಾಡಿದ್ದಾರೆ.
मराठी रंगभूमीवरील मोरूची मावशी, बायको असून शेजारी, लग्नाची बेडी तसेच मराठी चित्रपटसृष्टीत आपल्या सहजसुंदर अभिनयाने रसिक प्रेक्षकांच्या हृदयावर अधिराज्य गाजवणारे सदाबहार अभिनेते प्रदीप पटवर्धन यांचे दुःखद निधन झाले. त्यांच्या जाण्याने मराठी कलासृष्टीने उमद्या कलावंताला गमावले आहे. pic.twitter.com/CVjESFYCkf
— Eknath Shinde – एकनाथ शिंदे (@mieknathshinde) August 9, 2022
‘ಮರುಚಿ ಮಾವ್ಶಿ’ ನಾಟಕದಿಂದ ಪ್ರದೀಪ್ ಪಟ್ವರ್ಧನ್ ಖ್ಯಾತಿ ಗಳಿಸಿದ್ದರು. ಪ್ರದೀಪ್ ಪಟ್ವರ್ಧನ್ ಹಲವು ಮರಾಠಿ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಫುಲ್ ಚಾರ್ ಹಾಫ್’, ‘ಮೀ ಶಿವಾಜಿರಾಜೆ ಭೊಂಸ್ಲೆ ಬೋಲ್ತೆ’, ಮತ್ತು ‘ಪೊಲೀಸ್ ಲೈನ್’, ‘ಲವು ಕಾ ಲಾತ್’, ಜಮ್ಲಾ ಹೋ ಜಮ್ಲಾ, ಪ್ರದೀಪ್ ನಟನೆಯ ಕೆಲ ಪ್ರಮುಖ ಸಿನಿಮಾಗಳು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
