fbpx
ಸಮಾಚಾರ

ಹೊಸ ಲುಕ್ ನಲ್ಲಿ ಕಂಗೊಳಿಸುತ್ತಿದ್ದಾರೆ ಆರ್ಯವರ್ಧನ್ ಗುರೂಜಿ! ಇವರ ಬದಲಾವಣೆ ನೋಡಿ ಶಾಕ್ ಆದ ಜನರು

ಕಲರ್ಸ್ ಕನ್ನಡ ವಾಹಿನಿಯ ಮುಳ್ಕ ಹೆಚ್ಚು ಜನಪ್ರಿಯ ಗಳಿಸಿದ ಕಾರ್ಯಕ್ರಮ ಬಿಗ್ ಬಾಸ್ ಇದೀಗ ಮೊದಲ ಬಾರಿ OTT ಯಲ್ಲಿ ಪ್ರಸಾರವಾಗುತ್ತಿದೆ. ಬಿಗ್ ಬಾಸ್ ಮನೆ ಒಳಗೆ ಘಟಾನುಘಟಿಗಳು ಪ್ರವೇಶಿಸಿದ್ದಾರೆ. ಪ್ರತಿ ದಿನ ಕೂಡ ಒಂದಲ್ಲ ಒಂದು ಘಟನೆ ನಡೆಯುತ್ತಿದ್ದು, ಇದೀಗ ಆರ್ಯವರ್ಧನ್ ಗುರೂಜಿ ಅವರ ಲುಕ್ ಎಲ್ಲ ಕಡೆ ಸಕತ್ ವೈರಲ್ ಆಗುತ್ತಿದೆ.

ಸಂಖ್ಯಾಶಾಸ್ತ್ರದ ಮೂಲಕ ಅಪಾರವಾದ ಅಭಿಮಾನಿಗಳನ್ನು ಸಂಪಾದಿಸಿದ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸಿದ ಮೊದಲ ಸ್ಪರ್ಧಿಯಾಗಿದ್ದರು. ಇವರು ಮನೆಗೆ ಪ್ರವೇಶಿಸುತ್ತಿದ್ದಂತೆ ಇವರ ಮೇಲೆ ಅಭಿಮಾನಿಗಳಿಗೆ ಅಪಾರವಾದ ಕುತೂಹಲವಿತ್ತು. ಮನೆಯಲ್ಲಿ ಯಾವೆಲ್ಲ ರೀತಿ ಜಾದು ಮಾಡುತ್ತಾರೆ, ಮನೆಯಲ್ಲಿ ಜನರನ್ನು ಹೇಗೆ ರಂಜಿಸುತ್ತಾರೆ, ಹೀಗೆ ಹತ್ತು ಹಲವಾರು ಅನುಮಾನಗಳು ಇವರ ಮೇಲೆ ಇತ್ತು. ಆದರೆ ಇದಕೆಲ್ಲ ಮೀರಿ ಇದೀಗ ಗುರೂಜಿ ಹೊಸ ಗೆಟ್ ಅಪ್ ನಲ್ಲಿ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಗುರೂಜಿ ಇದೀಗ ತಮ್ಮ ತಲೆ ಮತ್ತು ಮೀಸೆಯನ್ನು ಸಂಪೂರ್ಣವಾಗಿ ತೆಗೆಸಿಕೊಂಡಿದ್ದಾರೆ. ನಟ, ರಾಜಕಾರಣಿ ಅರ್ಜುನ್ ರಮೇಶ್ ಅವರು ಆರ್ಯವರ್ಧನ್​ ಅವರ ಗಡ್ಡ ಬೋಳಿಸಿದ್ದಾರೆ. ‘ಮೀಸೆ ಕತ್ತರಿಸಬೇಡಿ. ಕೆಂಪೇಗೌಡ ಸುದೀಪ್ ರೀತಿ ಕಾಣುತ್ತಿದ್ದೀರಿ’ ಎಂದು ಬಾಯ್ತುಂಬ ಹೊಗಳಿದ್ದಾರೆ. ಆದರೂ ತಮ್ಮ ತಲೆ ಕೂದಲು ಮತ್ತು ಮೀಸೆಯನ್ನು ಬೋಳಿಸುವ ಮೂಲಕ ಹೊಸ ಲುಕ್ ನಲ್ಲಿ ಗುರೂಜಿ ಮಿಂಚುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top