fbpx
ಸಮಾಚಾರ

12,000ಕ್ಕೂ ಕಡಿಮೆ ಬೆಲೆಯ ಚೈನೀಸ್ ಫೋನ್‌ಗಳನ್ನು ಬ್ಯಾನ್ ಮಾಡಲು ಚಿಂತನೆ

ಇತ್ತೀಚೆಗಷ್ಟೇ ಚೈನೀಸ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದ್ದು, ಮತ್ತೊಮ್ಮೆ ಚೀನಾ ಉತ್ಪನ್ನಗಳನ್ನು ನಿಷೇಧಿಸುವ ಮಾತು ಕೇಳಿಬರತೊಡಗಿದೆ, ಈ ಬಾರಿ ಈ ಉತ್ಪನ್ನಗಳು ಸ್ಮಾರ್ಟ್‌ಫೋನ್‌ಗಳಾಗಿವೆ. ಹೌದು, 12 ಸಾವಿರ ರೂ. ಗೂ ಕಡಿಮೆ ಬೆಲೆಯ ಸಾಧನಗಳನ್ನು ಮಾರಾಟ ಮಾಡುವ ಚೈನೀಸ್ ಸ್ಮಾರ್ಟ್ ಫೋನ್ ತಯಾರಕರನ್ನು ನಿರ್ಬಂಧಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಚೀನಾ ಸ್ಮಾರ್ಟ್ ಫೋನ್ ಕಂಪನಿಗಳು ಹೆಚ್ಚಾಗಿ ಭಾರತದ ಮೇಲೆ ಅವಲಂಬಿತವಾಗಿವೆ. 2022ರ ಜೂನ್‌ನ ತ್ರೈಮಾಸಿಕ ವರದಿಯಲ್ಲಿ ಮೂರನೇ ಒಂದು ಭಾಗದಷ್ಟು 12 ಸಾವಿಕ್ಕೂ ಅಗ್ಗದ ಫೋನ್‌ಗಳು ಮಾರಾಟವಾಗಿವೆ. ಅವುಗಳಲ್ಲಿ ಶೇ.80 ರಷ್ಟು ಚೀನಾ ಕಂಪನಿಯ ಫೋನ್‌ಗಳೇ ಮಾರಾಟವಾಗಿವೆ.

ವರದಿಗಳ ಪ್ರಕಾರ, ಸರ್ಕಾರ ಈ ಬಗ್ಗೆ ಯೋಜಿಸುತ್ತಿರುವುದು ನಿಜವಾಗಿದ್ದರೆ, ಭಾರತದಲ್ಲಿ ₹ 12,000 ಮತ್ತು ಅದಕ್ಕಿಂತ ಕಡಿಮೆ ಬೆಲೆಯ ಮೊಬೈಲ್‌ಗಳ ಶೇಕಡ 50 ರಷ್ಟು ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಶಿಯೋಮಿ ಮತ್ತು ರಿಯಲ್‌ಮೀಯಂತಹ ಚೀನಾ ಕಂಪನಿಗಳಿಗೆ ಭಾರೀ ಹೊಡೆತ ಬೀಳಲಿದೆ.

ಭಾರತವು ಈಗಾಗಲೇ ಚೀನಾದ ಮೊಬೈಲ್ ತಯಾರಕರ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಂಡಿದೆ. OPPO, Vivo ಮತ್ತು Xiaomi ಯಂತಹ ಚೀನಾದ ಸ್ಮಾರ್ಟ್‌ಫೋನ್ ಕಂಪನಿಗಳ ಮೇಲೆ ಇತ್ತೀಚೆಗೆ ನಡೆದ ಐಟಿ ದಾಳಿಗಳು ಇದನ್ನು ಸಾಬೀತುಪಡಿಸುತ್ತವೆ. ಚೀನಾದ ಮೂರು ಮೊಬೈಲ್ ಕಂಪನಿಗಳಾದ OPPO, Vivo India ಮತ್ತು Xiaomi ವಿರುದ್ಧದ ತೆರಿಗೆ ವಂಚನೆ ಆರೋಪದ ಪ್ರಕರಣಗಳನ್ನು ಭಾರತ ಸರ್ಕಾರ ಪರಿಶೀಲಿಸುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top