OTT ಮೂಲಕ ಮೊದಲ ಬಾರಿ 24/7 ಪ್ರಸಾರವಾಗುತ್ತಿರುವ ಬಿಗ್ ಬಾಸ್ ಈ ಬಾರಿ ಹಲವು ವೈಶಿಷ್ಯತೆಯಿಂದ ಕೂಡಿದೆ. ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಅತಿ ಹೆಚ್ಚು ಆಕರ್ಷಿತರಾಗಿದ್ದು ಎಂದರು ಪತ್ರಕರ್ತ ಸೋಮಣ್ಣ ಮಾಚಿಮಾಡ. ತಮ್ಮ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಇವರು ಇದೀಗ ಬಿಗ್ ಬಾಸ್ ಮನೆಯಲ್ಲಿ ಮೊದಲ ಸೇಫ್ ಸ್ಪರ್ಧಿ ಎಂದು ಹೇಳಬಹುದು.
ಈ ಬಾರಿ ಬಿಗ್ ಬಾಸ್ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸುತ್ತಾ ಬಂದಿದೆ. ಅದರಲ್ಲಿ ಪವರ್ ಪ್ಲೇ ಎಂಬ ತಂತ್ರಜ್ಞಾನ ಕೂಡ ಒಂದು. ಇದರ ಅಡಿಯಲ್ಲಿ ಸುದೀಪ್ ಅಭಿಮಾನಿಗಳಿಗೆ ಪ್ರಶ್ನೆ ಒಂದನ್ನು ಕೇಳಿದ್ದಾರೆ. ಅದೇನೆಂದರೆ ‘ಮೊದಲ ವಾರ ನಿಮ್ಮನ್ನು ಇಂಪ್ರೆಸ್ಮಾಡಿದ ಸ್ಪರ್ಧಿ ಯಾರು’ ಎಂದು. ಇದಕ್ಕೆ ಬಂದಿರುವ ಬಹುಪಾಲು ಉತ್ತರ ಎಂದರೆ ಅದು ಸೋಮಣ್ಣ. ಹೀಗಾಗಿ ಈ ವಾರ ಸೇಫ್ ಆಗುವ ಸ್ಪರ್ಧಿ ಎಂದರೆ ಅದು ಸೋಮಣ್ಣ ಎಂದು ಹೇಳಬಹುದು.
ಸೋಮಣ್ಣ ಪತ್ರಕರ್ತರಾಗಿ ಕೆಲಸ ಮಾಡಿದವರು. ಹಲವಾರು ಸೆಲೆಬ್ರಿಟಿ ಗಳನ್ನೂ ಸಹ ಸಂದರ್ಶನ ಮಾಡಿದ್ದಾರೆ. ಈಗಾಗಿ ಇವರು ಜನರಿಗೆ ಚಿರ ಪರಿಚಿತರು. ಯಾವುದೇ ಕಾಂಟ್ರವರ್ಸಿ ಮಾಡಿಕೊಳ್ಳದೆ ಮನೆಯಲ್ಲಿ ತಮ್ಮ ಪಾಡಿಗೆ ತಾವು ಇರುತ್ತಾರೆ. ಹೀಗಾಗಿ ಜನರು ಇವರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.
ಈ ವಾರ ಮನೆಯ ಪ್ರತಿಯೊಬ್ಬ ಸದಸ್ಯರು ಕೂಡ ನಾಮಿನೇಟ್ ಆಗಿದ್ದಾರೆ. ಅದರಲ್ಲೂ ಆರ್ಯವರ್ಧನ್ ಗುರೂಜಿ ಮತ್ತು ಸೋನು ಗೌಡ ಅವರನ್ನು ಸೋಮಣ್ಣ ನೇರವಾಗಿ ನಾಮಿನೇಟ್ ಮಾಡಿರುವ ಕಾರಣ ಇವರಿಬ್ಬರು ಈ ವಾರದ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ. ಆದ್ದರಿಂದ ಈ ವಾರ ಇವರಿಬ್ಬರಲ್ಲಿ ಒಬ್ಬರು ಮನೆ ಬಿಟ್ಟು ಹೋಗುವ ಎಲ್ಲಾ ಸಾಧ್ಯತೆಗಳಿವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
