fbpx
ಸಮಾಚಾರ

ಬಾಲಿವುಡ್ ನ ಹಾಸ್ಯ ನಟ ರಾಜು ಶ್ರೀವಾತ್ಸವಗೆ ಹೃದಯಾಘಾತ! ಆಸ್ಪತ್ರೆಗೆ ದಾಖಲು

ಹಿಂದಿ ಸಿನಿಮಾಗಳಲ್ಲಿ ತನ್ನ ಹಾಸ್ಯದ ಮೂಲಕ ರಂಜಿಸುತ್ತಿದ್ದ ರಾಜು ಶ್ರೀವಾತ್ಸವ ಇಂದು ಆಸ್ಪತ್ರೆಗೆ ಧಾಖಲಾಗಿದ್ದಾರೆ. ಜಿಮ್ ಮಾಡುತ್ತಿದ್ದ ವೇಳೆ ಸಣ್ಣ ಪ್ರಮಾಣದ ಹೃದಯಾಘಾತವಾದ ಕಾರಣ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಹಿಂದಿ ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ಹಾಗು ಕೆಲವು ಪೋಷಕ ನಟರ ಪಾತ್ರದಲ್ಲಿ ಕೂಡ ಮಿಂಚಿದ್ದಾರೆ. ತಮ್ಮ ದಿನ ನಿತ್ಯದ ಚಟುವಟಿಕೆಯಂತೆ ಇಂದು ಕೂಡ ಇವರು ಜಿಮ್ ನಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಜಿಮ್ ಮಾಡುತ್ತಿದ್ದ ವೇಳೆ ಇವರಿಗೆ ಸಣ್ಣ ಪ್ರಮಾಣದಲ್ಲಿ ಹೃದಯಾಘಾತ ಉಂಟಾಗಿದೆ. ತಕ್ಷಣ ಇವರನ್ನು ದೆಹಲಿಯ ಎಐಐಎಂಎಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸದ್ಯ ಇವರು ಚೇತರಿಕೆ ಕಂಡುಕೊಳ್ಳುತ್ತಿದ್ದಾರೆ.

ಜಿಮ್ ನಲ್ಲಿ ಆಗಿದ್ದೇನು?
ರಾಜು ಶ್ರೀವಾತ್ಸವ ಬೆಳಗೆ ಜಿಮ್ ಮಾಡುತ್ತಿದ್ದರು. ಇದೆ ವೇಳೆ ಇವರಿಗೆ ಏನೋ ಸರಿಯಿಲ್ಲ ಎಂದು ಅನಿಸುತ್ತದೆ. ಇದಕ್ಕಿದಂತೆ ತಕ್ಷಣ ನೆಲಕ್ಕೆ ಬಿದ್ದಿದ್ದಾರೆ. ಜಿಮ್ ನಲ್ಲಿದ್ದ ಜಾಣರು ಇವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ನಂತರ ಇವರಿಗೆ ಸಣ್ಣ ಪ್ರಮಾಣದ ಹೃದಯಾಘಾತವಾಗಿದೆ ಎಂದು ಹೇಳಲಿದೆ. ಇದೀಗ ಇವರು ಚೇತರಿಸಿಕೊಳ್ಳುತ್ತಿದ್ದು, ಅಭಿಮಾನಿಗಳಲ್ಲಿ ಯಾವುದೇ ರೀತಿಯ ಆತಂಕ ಬೇಡ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top