fbpx
ಸಮಾಚಾರ

ಪತಿ ಮಾಡಿದ ಎಡವಟ್ಟಿನಿಂದ ಆಸ್ಪತ್ರೆ ಸೇರಿದ ನಯನತಾರ! ಅಷ್ಟಕ್ಕೂ ಆಗಿದ್ದಾದರೂ ಏನು?

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರ ಮತ್ತು ವಿಘ್ನೇಶ್ ಶಿವನ್ ಕೆಲವು ತಿಂಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರು ವಿವಾಹದ ನಂತರ ಒಂದಲ್ಲ ಒಂದು ಸುದ್ದಿ ಇಂದ ಚರ್ಚೆಯಾಗುತ್ತಿದ್ದರು. ಇದೀಗ ನಯನತಾರ ಆಸ್ಪತ್ರೆಗೆ ದಾಖಲಾಗಿದ್ದು, ಇದಕ್ಕೆ ಮುಖ್ಯ ಕಾರಣ ಅವರ ಪತಿ ಎಂದು ಹೇಳಲಾಗುತ್ತಿದೆ.

ನಯನತಾರ ಮೇಲೆ ಇರುವ ಅಪಾರವಾದ ಪ್ರೀತಿ ಇಂದ ಪತಿ ವಿಘ್ನೇಶ್ ಶಿವನ್ ವೀಕೆಂಡ್ ನಲ್ಲಿ ನಾನೆ ಅಡುಗೆ ಮಾಡುವುದಾಗಿ ಹೇಳಿದ್ದಾರೆ. ಅದರಂತೆ ಅವರು ಬಗೆ ಬಗೆಯ ಅಡುಗೆಯನ್ನು ಸಹ ಮಾಡಿದ್ದಾರೆ. ಆದರೆ ಅಡುಗೆಯಲ್ಲಿ ಏನು ತೊಂದರೆ ಆಯಿತೋ ಏನೋ ಗೊತ್ತಿಲ್ಲ. ತನ್ನ ಪ್ರೀತಿಯ ಗಂಡ ಮಾಡಿದ ಅಡುಗೆ ತಿಂದ ಬಳಿಕ ನಯನತಾರ ಫುಲ್ ವಾಂತಿ ಮಾಡಿಕೊಂಡಿದ್ದಾರಂತೆ. ಇದರಿಂದ ಇವರ ಅರೋಗ್ಯ ಹದಗೆಟ್ಟಿದ್ದು, ಇವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಆಸ್ಪತ್ರೆಗೆ ಸೇರಿದ ನಯನತಾರಾನನ್ನು ವೈದ್ಯರು ಕೆಲ ಕಾಲ ಇವರ ಆರೋಗ್ಯದ ಮೇಲೆ ನಿಗಾ ಇಟ್ಟು, ಇವರು ಚೇತರಿಸಿಕೊಂಡ ನಂತರ ಇವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಇದೀಗ ನಯನತಾರ ತಮ್ಮ ಮನೆಗೆ ಮರಳಿದ್ದಾರೆ. ಆದರೆ ಇಷ್ಟೆಲ್ಲಾ ಘಟನೆಗಳು ನಡೆದರೂ ಕೂಡ ಇದರ ಕುರಿತು ನಯನತಾರ ವಾಗಲಿ ಅಥವಾ ಇವರ ಪತಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top