fbpx
ಸಮಾಚಾರ

ಬಿಗ್ ಬಾಸ್ ಮನೆಯಲ್ಲಿ ತನ್ನ ಮೊಬೈಲ್ ನಂಬರ್ ರಿವೀಲ್ ಮಾಡಿದ ಸೋನು ಗೌಡ! ಆದರೆ ಇದರಲ್ಲಿ ಒಂದು ಟ್ವಿಸ್ಟ್

ಬಿಗ್ ಬಾಸ್ OTT ಶುರುವಾಗಿದ್ದು ಸ್ಪರ್ಧಿಗಳು ಟಾಸ್ಕ್ ಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಈ ಬಾರಿಯ ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸಿರುವ ಸ್ಪರ್ಧಿಗಳ ಕುರಿತು ಜನರು ಬಹಳಷ್ಟು ಚರ್ಚೆ ಮಾಡುತ್ತಿದ್ದಾರೆ. ಅದರಲ್ಲೂ ಸೋನು ಗೌಡ ಬಿಗ್ ಬಾಸ್ ಮನೆ ಪ್ರವೇಶಿಸಿರುವ ಕುರಿತು ಹಲವಾರು ಜನರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಇದರ ಬೆನ್ನಲೇ ಇದೀಗ ಸೋನು ಗೌಡ ತಮ್ಮ ಮೊಬೈಲ್ ನಂಬರ್ ಅನ್ನು ರಿವೀಲ್ ಮಾಡಿದ್ದು, ಇದರಲ್ಲಿ ಕೆಲವು ತಂತ್ರಗಾರಿಕೆಯನ್ನು ಉಪಯೋಗಿಸಿದ್ದಾರೆ.

ಟ್ರೊಲ್ ಮತ್ತು ಖಾಸಗಿ ವಿಡಿಯೋ ಬಿಡುಗಡೆ ಮೂಲಕ ಹೆಚ್ಚು ಸದ್ದು ಮಾಡುತ್ತಿದ್ದ ವ್ಯಕ್ತಿ ಎಂದರೆ ಅದು ಸೋನು ಗೌಡ. ಇವರು ಸಾಮಾಜಿಕ ಜಾಲತಾಣದಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಸಂಪಾದಿಸಿದ್ದಾರೆ. ಇವರೆಲ್ಲರಿಗೂ ಸೋನು ಗೌಡ ಅವರ ನಂಬರ್ ಸಿಕ್ಕರೆ ಎಷ್ಟು ಖುಷಿ ಅಲ್ವ. ಆದರೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡ ತಮ್ಮ ದೂರವಾಣಿ ಸಂಖ್ಯೆಯನ್ನು ಬಹಿರಂಗಪಡಿಸಿದ್ದಾರೆ. ಆದರೆ ಇದರಲ್ಲೂ ಕೂಡ ಒಂದು ಟ್ವಿಸ್ಟ್ ಇಟ್ಟಿದ್ದಾರೆ.

ಬಿಗ್ ಬಾಸ್ ಮನೆಯ ಸಹ ಸ್ಪರ್ಧಿಯಾಗಿರುವ ಲೋಕೇಶ್ ಸೋನು ಗೌಡ ಅವರ ಬಳಿ ತಮ್ಮ ಮೊಬೈಲ್ ನಂಬರ್ ಹೇಳಿ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಸೋನು 99876543210 ಎಂದು ಹೇಳುತ್ತಾರೆ. ಇದಕ್ಕಿದ್ದಂತೆ ಅಲ್ಲೇ ಇದ್ದ ಸ್ಪೂರ್ತಿ ಗೌಡ ಇದು ತಪ್ಪು ನಂಬರ್ ಎಂದು ಹೇಳುತ್ತಾರೆ. ಇದಕ್ಕೆ ಪ್ರತಿಕ್ರಯಿಸಿದ ಸೋನು ‘ಅದನ್ನು ನಾನು ಉಲ್ಪಾ ಪಲ್ಟಾ ಹೇಳಿದ್ದೀನಿ. ಈ ನಂಬರ್​ ಯಾವುದೇ ಕಾರಣಕ್ಕೂ ಇರಲ್ಲ. ನಿಮ್ಮಂತ ಜಾಣರು ಇರುತ್ತಾರೆ’ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top