ಬಿಗ್ ಬಾಸ್ OTT ಶುರುವಾಗಿದೆ. ಸೆಲೆಬ್ರಿಟಿಗಳು ಮನೆ ಒಳಗೆ ಪ್ರವೇಶಿಸಿದ್ದಾರೆ. ಅಭಿಮಾನಿಗಳಲ್ಲಿ ಕುತೂಹಲ ಕೂಡ ಹೆಚ್ಚಾಗಿದೆ. ಈ ಬಾರಿ ಬಿಗ್ ಬಾಸ್ ಯಾವೆಲ್ಲ ರೀತಿ ನಡೆಯುತ್ತಿದೆ ಎಂದು. ಇವೆಲ್ಲದರ ನಡುವೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಮೊದಲ ಟಾಸ್ಕ್ ನೀಡಿದ್ದು ಇದರಲ್ಲಿ ಪ್ಯಾಟೆ ಹುಡುಗಿ ಹಳ್ಳಿ ಲೈಫ್ ಖ್ಯಾತಿಯ ಸ್ಪೂರ್ತಿ ಗೌಡ ತಮ್ಮ ಜೀವನದ ಕರಾಳ ದಿನವನ್ನು ತೆರೆದಿಟ್ಟಿದ್ದಾರೆ.
ಬಿಗ್ ಬಾಸ್ ಮನೆ ಮಂದಿಗೆ ನಾನು ಯಾರು? ಎಂಬ ಟಾಸ್ಕ್ ನೀಡಿದ್ದರು. ಇದರಲ್ಲಿ ಸ್ಪೂರ್ತಿ ಗೌಡ ಮಾತನಾಡುತ್ತಾ “ಮನೆಯಲ್ಲಿ ನನ್ನನ್ನು ತುಂಬಾನೇ ಮುದ್ಧಾಗ ಸಾಕಿದ್ದಾರೆ. ಟಿವಿ ಮುಂದೆ ಕೂತು ಊಟ ಮಾಡಿದ್ದರೂ ಸಹ ನಾನು ತಟ್ಟೆ ಎತ್ತಿಡುತ್ತಿರಲಿಲ್ಲ ಕೈ ಅಲ್ಲೇ ತೊಳೆದುಕೊಳ್ಳುತ್ತಿದ್ದೆ ಅಷ್ಟು ಚೆನ್ನಾಗಿ ಅಮ್ಮ ಸಾಕಿದ್ದರು. ಬರ್ತಾ ಬರ್ತಾ ಜೀವನದ ಬಗ್ಗೆ ಗೊತ್ತಾಗಿದ್ದು ನನ್ನ ತಾಯಿ ಹಾಸಿಗೆ ಹಿಡಿದಾಗ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಇತ್ತು. ಥೈರಾಯ್ಡ್ ಕ್ಯಾನ್ಸರ್ ಅಂದ್ರೆ ಗಂಭೀರ ಅಂತ ಗೊತ್ತಿರಲಿಲ್ಲ ನನಗೆ ಅಷ್ಟು ಮೆಚ್ಯೂರಿಟಿ ಕೂಡ ಇರಲಿಲ್ಲ. ದಿನ ಕಳೆಯುತ್ತಿದ್ದಂತೆ ಅವರು ಮಾತನಾಡುವುದನ್ನು ನಿಲ್ಲಿಸಿದ್ದರು ನಡೆಯುವುದನ್ನು ನಿಲ್ಲಿಸಿದ್ದರು. ದುಡ್ಡಿಗೆ ಏನೂ ಕಷ್ಟ ಇರಲಿಲ್ಲ ಹ್ಯಾಪಿ ಫ್ಯಾಮಿಲಿ ಅಂತಾರಲ್ಲ ಹಾಗಿದ್ವಿ. ಅಷ್ಟು ಚೆನ್ನಾಗಿ ಜೀವನ ಮಾಡುತಿದ್ವಿ” ಎಂದರು.
ನಂತರ ಮುಂದುವರಿಸುತ್ತಾ “ತಾಯಿಗೆ ಈ ರೀತಿ ಆದ ಮೇಲೆ ನಾವು ರಸ್ತೆಗೆ ಬಂದು ಬಿಟ್ವಿ. ಆಗ ನನಗೆ ತಾಯಿ ಬೆಲೆ ಗೊತ್ತಾಗಿದ್ದು. ಪ್ಯಾಟೆ ಹುಡುಗಿ ಹಳ್ಳಿ ಲೈಫ್ ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಾಗ ನನ್ನ ತಾಯಿಗೆ ಆಪರೇಷನ್ ಆಯ್ತು. ಆ ಸಮಯದಲ್ಲಿ ಜನರು ಹೇಗೆ ಕಾಮೆಂಟ್ ಮಾಡಿದ್ದರು ಅಂದ್ರೆ ನಾನು ಇಂಡಸ್ಟ್ರಿಗೆ ಬಂದಿದಕ್ಕೆ ನನ್ನ ತಾಯಿಗೆ ಶಾಕ್ ಆಗಿ ಈ ಪರಿಸ್ಥಿತಿ ಬಂದಿದ್ದಾರೆ ಅಂತ. ಆ ಸಮಯದಲ್ಲಿ ನನ್ನ ತಾಯಿ ಸಾವಿಗೆ ನಾನೇ ಕಾರಣ ಅನ್ನೋ ಮಾತುಗಳು ಬಂತು. ಆ ಮಾತುಗಳನ್ನ ನಾನು ಕೇಳಿಸಿಕೊಂಡಿದ್ದೆ ಮತ್ತು ನನ್ನ ತಂದೆನೂ ಕೇಳಿಸಿಕೊಂಡಿದ್ದಾರೆ. ಆದರೂ ಸುಮ್ಮನೆ ಇದ್ದೀವಿ ಅಷ್ಟೆ”.
ನನ್ನ ತಂದೆ ನನಗೆ ತುಂಬಾನೇ ಸಪೋರ್ಟ್ ಆಗಿ ನಿಂತರು. ಮನೆಯಲ್ಲಿ ಹೆಣ್ಣು ಎಷ್ಟು ಮುಖ್ಯ ಅನ್ನೋದು ನಮಗೆ ಈಗ ತಿಳಿಯುತ್ತಿದೆ. ಯಾವ ಮಕ್ಕಳು ಕೂಡ ತಾಯಿ ಸಾವಿಗೆ ನಾನೇ ಕಾರಣ ಅಂತ ಕೇಳಿಸಿಕೊಳ್ಳುವುದಕ್ಕೆ ಇಷ್ಟ ಪಡಲ್ಲ. ನಾನು ಈ ಸತ್ಯ ವಿಷಯವನ್ನು ಯಾರೊಂದಿಗೂ ಹಂಚಿಕೊಂಡಿಲ್ಲ. ನಾನು ತುಂಬಾನೇ ಎಮೋಷನಲ್ ಹುಡುಗಿ. ಆದರೆ ಒಂದು ವಿಚಾರ ನಾನು ಗಮನದಲ್ಲಿ ಇಟ್ಟುಕೊಂಡಿರುವುದು ಏನೆಂದರೆ ಯಾರು ಏನೇ ಅನ್ನಲಿ ನಾನು ತುಂಬಾ ಸ್ಟ್ರಾಂಗ್ ಅಗಿರಬೇಕು ಅಂತ ಹಾಗೆ ತೋರಿಸಿಕೊಳ್ಳುತ್ತೀನಿ ಆದರೆ ನಾನು ಹಾಗಿಲ್ಲ’ ಎಂದು ಸ್ಫೂರ್ತಿ ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
