fbpx
ಸಮಾಚಾರ

Bigg Boss Kannada OTT: ಮೊದಲ ಕ್ಯಾಪ್ಟನ್ ಆಯ್ಕೆ: ಇವರೇ ನೋಡಿ ಈ ಸಲದ ದೊಡ್ಮನೆಯ ಚೊಚ್ಚಲ ನಾಯಕ

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ಚರ್ಚೆಗೆ ಗ್ರಾಸವಾಗುವ ಕಾರ್ಯಕ್ರಮ ಎಂದರೆ ಬಿಗ್ ಬಾಸ್. ಪ್ರತೀ ಸಲವೂ ಚಿತ್ರವಿಚಿತ್ರ ಜನರ ಜೊತೆ ಭಯಂಕರ ವಿಚಿತ್ರ ಎಲಿಮೆಂಟುಗಳನ್ನೂ ಮನೆತುಂಬಿಸಿಕೊಳ್ಳೋದು ಬಿಗ್‌ಬಾಸ್ ಮಹಿಮೆ. ಆದರೆ ಈ ಬಾರಿ ಮೇಲುನೋಟಕ್ಕೇ ಹುಚ್ಚು ಕೆರಳಿಕೊಂಡಿರುವಂತೆ ಕಾಣಿಸೋ ಆಸಾಮಿಗಳ ಸಂಖ್ಯೆ ಕಡಿಮೆ ಇದ್ದರೂ ಆರಂಭದಲ್ಲೇ ಆಟ ಕಳೆಗಟ್ಟುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಯ್ಕೆ ನಡೆಯುವುದೇ ಒಂದು ಸ್ವಾರಸ್ಯಕರ ಸಂಗತಿ. ಕ್ಯಾಪ್ಟೆನ್ಸಿ ಸಿಗಬೇಕು ಎಂದರೆ ಮನೆಯಲ್ಲಿ ಎಲ್ಲರ ಮನ ಗೆಲ್ಲುವುದು ಮುಖ್ಯ ಆಗುತ್ತದೆ. ಮೊದಲ ವಾರದ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ನಡೆದಿದೆ. ಹಾಗಾದ್ರೆ ಈ ಸಾರಿಯ ಬಿಗ್ ಬಾಸ್ ನ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು ಯಾರು ಅಂತೀರಾ? ಮುಂದೆ ಓದಿ

 

 

ಕ್ಯಾಪ್ಟನ್ ಆಯ್ಕೆ ಮಾಡಲು ಕ್ಯಾಪ್ಟೆನ್ಸಿ ಟಾಸ್ಕ್‌ ಒಂದನ್ನು ನಡೆಸಲು ನಿರ್ಧರಿಸಿ ಬಿಗ್ ಬಾಸ್ ಮನೆಮಂದಿಗೆ ವೋಟ್‌ ಮಾಡುವಂತೆ ಬಿಗ್‌ ಬಾಸ್‌ ಹೇಳಿದ್ದರು. ಆ ಪ್ರಕಾರ ಸ್ಪರ್ಧೆಗಳ ಆಯ್ಕೆಯ ಪ್ರಕಾರ, ಅರ್ಜುನ್‌ ರಮೇಶ್‌, ಸೋಮಣ್ಣ ಮಾಚಿಮಾಡ, ಚೈತ್ರಾ ಹಳ್ಳಿಕೇರಿ ಮತ್ತು ನಂದು ಆಯ್ಕೆಯಾದರು. ಮನೆಯ ಸದಸ್ಯರ ಮತಗಳ ಆಧಾರದ ಮೇಲೆ ಈ ನಾಲ್ಕು ಮಂದಿ ಕ್ಯಾಪ್ಟನ್ಸಿ ಟಾಸ್ಕ್ ಆಡಿದರು. ಕ್ಯಾಪ್ಟೆನ್ಸಿ ಟಾಸ್ಕ್‌ನಲ್ಲಿ ಹೆಚ್ಚು ಆಟಗಳಲ್ಲಿ ಗೆದ್ದ ಕಿರುತೆರೆ ನಟ ಅರ್ಜುನ್ ರಮೇಶ್ ಮನೆಯ ಮೊದಲ ಕ್ಯಾಪ್ಟನ್‌ ಆಗಿ ಆಯ್ಕೆಯಾದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top