fbpx
ಸಮಾಚಾರ

ನಂಗೆ ಮೂಡ್ ಆಫ್ ಆಗಲ್ಲ! ಸಮಾಧಾನ ಪಡಿಸಲು ಬಂದ ರಾಕೇಶ್ ಗೆ ಸೋನು ಕೊಟ್ಟ ಉತ್ತರ

ಕಿರುತರೆಯ ಬಿಗ್ ಬಾಸ್ OTT ಇದೀಗ ದಿನದಿಂದ ದಿನಕ್ಕೆ ತಿರುವನ್ನು ಪಡೆದುಕೊಳ್ಳುತ್ತಿದೆ. ಒಂದಲ್ಲ ಒಂದು ರೀತಿಯಲ್ಲಿ ಈ ಕಾರ್ಯಕ್ರಮ ಸಕತ್ ಸುದ್ದಿ ಆಗುತ್ತಿದೆ. ಅದರಲ್ಲೂ ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಸರ್ವೇ ಸಾಮಾನ್ಯವಾಗಿದೆ. ಇದೀಗ ಸ್ಫೂರ್ತಿ ಗೌಡ ಮತ್ತು ರಾಕೇಶ್ ಅಡಿಗ ಅವರ ಮಾತನ್ನು ಅಪಾರ್ಥ ಮಾಡಿಕೊಂಡ ಸೋನು ಸ್ಪೂರ್ತಿ ವಿರುದ್ಧ ಜಗಳಕ್ಕೆ ಇಳಿದಿದ್ದಾರೆ.

ಸ್ಪೂರ್ತಿ ಜೊತೆ ಮಾತನಾಡುತ್ತಾ ಸೋನು “ನೀನು ಸುಮ್ಮನೆ ನಗುತ್ತಿರುವುದು ಸರಿಕಾಣುವುದಿಲ್ಲ. ಹಿಂದಿನಿಂದ ಹೀಯಾಳಿಸುತ್ತಿರುವುದನ್ನು ನಾನು ನೋಡಿದ್ದೇನೆ ” ಎಂದು ಜಗಳಕ್ಕೆ ಇಳಿದಿದ್ದಾರೆ. ಇಬ್ಬರ ನಡುವೆ ಜಗಳ ತಾರಕ್ಕೇರಿತ್ತು. ಒಬ್ಬರನೊಬ್ಬರು ದೂಷಿಸುತ್ತಾ ಜಗಳ ವಾಡುತ್ತಿದ್ದರು. ಈ ವೇಳೆಯಲ್ಲಿ ರಾಕೇಶ್ ಮಧ್ಯಪ್ರವೇಶಿಸಿ ಸೋನು ಅವರನ್ನು ಸಮಾಧಾನ ಪಡಿಸಲು ಯತ್ನಿಸುತ್ತಾರೆ. ಇಲ್ಲಿ ನೀನು ಅಪಾರ್ಥ ಮಾಡಿಕೊಂಡಿದ್ದೀಯ. ನಾವು ಯಾರನ್ನು ಹೀಯಾಳಿಸಿಲ್ಲ. ನಾವು ಸುಮ್ಮನೆ ತಮಾಷೆ ಮಾಡಿ ನಕ್ಕಿದೆವು ಎಂದು ಹೇಳಿದರು. ಆದರೆ ರಾಕೇಶ್ ಅವರ ಮಾತಿಗೆ ಸೋನು ಸಮಾಧಾನವಾದಂತೆ ಕಂಡಿಲ್ಲ.

ಇದರಿಂದ ಬೇಸರಗೊಂಡ ಸೋನು ತನ್ನನು ಯಾರು ಕೂಡ ಸಪ್ಪೋರ್ಟ್ ಮಾಡುವುದಿಲ್ಲ ಎಂದು ಹೇಳಿ ಅಳಲು ಪ್ರಾರಂಭಿಸಿದರು. ಇದನ್ನು ಕಂಡ ರಾಕೇಶ್ ಇವರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಬೆಳಬೆಳ್ಳಿಗ್ಗೆನೇ ಮೂಡ್ ಆಫ್ ಆಗ್ಬೇಡ ಎಂದರು. ಮೊದಲೇ ಬೇಸರದಲ್ಲಿದ್ದ ಸೋನು ನಾನು ” ಯಾವತ್ತೂ ಮೂಡ್ ಆಫ್ ಆಗಲ್ಲ” ಎಂದು ಹೇಳಿದರು. ಹೀಗಾಗಿ ಸೋನು ನಾನು ಎಂದಿಗೂ ಮೂಡ್ ಆಫ್ ಮಾಡಿಕೊಂಡು ಇರುವುದಿಲ್ಲ ಯಾವಾಗ್ಲೂ ನಗುತ್ತಾ ಖುಷಿಯಾಗಿ ಇರುತ್ತೇನೆ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top