fbpx
ಸಮಾಚಾರ

ನನ್ನ ಮನಸಿನ ಮನೆಗೆ ನೀವೇ ಮೊದಲು ಪ್ರವೇಶಿಸಬೇಕು! ಗುರೂಜಿಗೆ ಪ್ರೊಪೋಸ್ ಮಾಡಿದ ಸಾನ್ಯ

ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ OTT ಯಲ್ಲಿ ಪ್ರದರ್ಶನವಾಗುತ್ತಿದೆ. ಇದೆ ಮೊದ್ಲ ಬಾರಿಗೆ OTT ಯಲ್ಲಿ ಪ್ರದರ್ಶನವಾಗುತ್ತಿರುವ ಕಾರಣ ಜನರಿಗೆ ಹಲವಾರು ಕುತೂಹಲವಿತ್ತು. ಇದೀಗ ಬಿಗ್ ಬಾಸ್ ಮನೆಯಲ್ಲಿ ಸಹಜವಾಗಿ ನಡೆಯುವಂತೆ ಜಗಳಗಳು ನಡೆಯುತ್ತಿದೆ. ಇದೀಗ ಇದಕ್ಕಿಂತ ಮೀರಿ ಮತ್ತೊಂದು ಘಟನೆ ನಡೆದಿದ್ದು, ಸಾನ್ಯ ಅಯ್ಯರ್ ಗುರೂಜಿ ಅವರಿಗೆ ತಮ್ಮ ಪ್ರೇಮ ನಿವೇದನೆ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲಿ ಸಹಜವಾಗಿ ಸ್ಪರ್ಧಿಗಳು ಟಾಸ್ಕ್ ಗಳಲ್ಲಿ ಭಾಗವಹಿಸುತ್ತಾರೆ. ಈ ವೇಳೆ ಪುಟ್ಟ ಗೌರಿ ಮದುವೆ ಖ್ಯಾತಿಯ ಸಾನ್ಯ ಗುರೂಜಿ ಅವರಿಗೆ ತಮ್ಮದೇ ಶೈಲಿಯಲ್ಲಿ ಪ್ರಪೋಸ್ ಮಾಡಿದ್ದಾರೆ. “ಬಿಗ್ ಬಾಸ್ ಮನೆಗೆ ಮೊದಲ ಕಂಟೆಸ್ಟೆಂಟ್ ಆಗಿ ಬಂದಿದ್ದೀರಿ. ಹಾಗೆ ನನ್ನ ಮನಸಿಗೂ ನೀವೆ ಮೊದಲು ಕಾಲಿಡಬೇಕು ಎಂದಿದ್ದಾರೆ”.

ಇದಕ್ಕೆ ಪ್ರತಿಕ್ರಯಿಸಿದ ಗುರೂಜಿ ” ಈ ಮನೆಗೆ ಬಂದೆ, ಮನೆ ಸುಂದರವಾಗಿದೆ, ಮನೆಗೆ ದೀಪ ಹಚ್ಚೋರು ಯಾರು ಇಲ್ಲ, ಅಡುಗೆ ಮಾಡೋರು ಯಾರು ಇಲ್ಲ, ಆ ಸ್ಥಾನ ನಿಮಗೆ ಕೊಡುತ್ತೇನೆ” ಎಂದು ಗುರೂಜಿ ಹೇಳುತ್ತಾರೆ. ಇದಕ್ಕೆ ಸಾನ್ಯ ಹಾಗಾದರೆ ನಾನು ಕೆಲಸದವಳ ಎಂದು ಕೇಳುತ್ತಾರೆ. ಇದಕ್ಕೆ ಪ್ರತಿಕ್ರಯಿಸಿದ ಗುರೂಜಿ ಬೇರೆ ರೀತಿಯಲ್ಲಿ ಪ್ರೊಪೋಸ್ ಮಾಡಿ ಎಂದು ಸಾನ್ಯ ಅವರ ಬಳಿ ಕೇಳುತ್ತಾರೆ.

ಸಾನ್ಯ ” ಬಿಗ್ ಬಾಸ್ ಮನೆಗೆ ಮೊದಲು ಪ್ರವೇಶಿಸಿದ್ದು ನೀವು, ಆದ್ದರಿಂದ ನನ್ನ ಮನಸಿನ ಮನೆಗೆ ಮೊದಲು ನೀವೇ ಪ್ರವೇಶಿಸಬೇಕು, ನಿಮ್ಮ ಒಳ ಮನಸ್ಸು ಕಂಡ ತರ ಕ್ಯೂಟ್ ಆಗಿ ಇದೆ, ನನ್ನ ಹೃದಯಕ್ಕೆ ಟಚ್ ಆಯಿತು, ನನ್ನ ಬಾಳಲ್ಲಿ ಬರುತ್ತೀರಾ ಎಂದು ಕೇಳಿಕೊಂಡರು. ಇದಕ್ಕೆ ಗುರೂಜಿ ” ನಾನು ಮುದ್ದಾಗಿದ್ದೀನಿ ಅಂತ ನೀವು ಹೇಳಿದ್ದೀರಿ, ಅದನ್ನು ಒಪ್ಪಿಕೊಳ್ಳೋಕೆ ಎರಡು ದಿನ ಟೈಮ್ ಕೊಡಿ” ಎಂದು ಹಾಸ್ಯ ಮಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top