fbpx
ಸಮಾಚಾರ

BMTC ಇಂದ ಬಂಪರ್ ಆಫರ್! ಆಗಸ್ಟ್ 15 ರಂದು ಪ್ರಯಾಣಿಕರಿಗೆ ಉಚಿತ ಬಸ್ ಪ್ರಯಾಣ

ಈ ವರ್ಷ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ ಬಂದು 75 ವರ್ಷಗಳಾಗುತ್ತವೆ. ಈಗಾಗಿ ಸ್ವಾತಂತ್ರದ ಅಮೃತ ಮಹೋತ್ಸವವನ್ನು ದೇಶದ ತುಂಬಾ ಆಚರಣೆಗೆ ಸಕಲ ಸಿದ್ದತೆಗಳು ನಡೆಯುತ್ತಿದೆ. ಈ ವೇಳೆ ಬಿಎಂಟಿಸಿ ತನ್ನ ಪ್ರಯಾಣಿಕರಿಗೆ ಒಂದು ದೊಡ್ಡ ಆಫರ್ ನೀಡಿದೆ.

ಈ ಬಾರಿ ದೇಶ ಸ್ವಾತಂತ್ರ ಪಡೆದು 75 ವರ್ಷಗಳು ಆಗಿರುವ ಕಾರಣ ಬಿಎಂಟಿಸಿ ತನ್ನ ಪ್ರಯಾಣಿಕರಿಗೆ ಆಗಸ್ಟ್ 15 ರಂದು ಉಚಿತವಾಗಿ ಪ್ರಯಾಣಿಸಬಹುದು ಎಂದು ತಿಳಿಸಿದೆ. ಇದಲ್ಲದೆ ಬಿಎಂಟಿಸಿ 25 ವರ್ಷ ಪೂರೈಸಿದ ಕಾರಣಕ್ಕೆ ತನ್ನ ಪ್ರಯಾಣಿಕರಿಗೆ ಈ ಬಂಪರ್ ಆಫರ್ ನೀಡಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಂಟಿಸಿ ನಿಗಮ ಅಧ್ಯಕ್ಷ ನಂದೀಶ್ ರೆಡ್ಡಿ “ಆಗಸ್ಟ್ 15 ರಂದು ಪ್ರಯಾಣಿಕರು ಉಚಿತವಾಗಿ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಬಹುದು. ಇದರಲ್ಲಿ ಎಸಿ ಬಸ್ ಗಳು ಸಹ ಸೇರಿಕೊಂಡಿರುತ್ತದೆ” ಎಂದು ಹೇಳಿದ್ದಾರೆ.

ಆಗಸ್ಟ್ 15 ರಂದು ಹೊಸ 300 ಎಲೆಕ್ಟ್ರಿಕ್ ಬಸ್​ಗಳು ಬಿಎಂಟಿಸಿ ವ್ಯಾಪ್ತಿಯಲ್ಲಿ ಕಾರ್ಯಾರಂಭ ಮಾಡಲಿದ್ದು, ಇದನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top