fbpx
ಸಮಾಚಾರ

ತನಗೆ ಆದ ನೋವಿನ ಕುರಿತು ವಿವರಿಸುತ್ತಿದ್ದ ವೇಳೆ ನಕ್ಕ ಜಯಶ್ರೀ ಗೆ ಮಾತಿನ ಮೂಲಕ ಟಾಂಗ್ ಕೊಟ್ಟ ಗುರೂಜಿ!

ಈ ಬಾರಿ ಮೊದಲ ಬಾರಿಗೆ ಬಿಗ್ ಬಾಸ್ OTT ಯಲ್ಲಿ ಪ್ರಸಾರವಾಗುತ್ತಿದೆ. ಈಗಾಗಲೇ ಬಿಗ್ ಬಾಸ್ ಮನೆ ಒಳಗೆ 16 ಸ್ಪರ್ಧಿಗಳು ಪ್ರವೇಶಿಸಿದ್ದು, ಈ ವಾರ ಒಬ್ಬ ಸ್ಪರ್ಧಿ ಆಚೆ ಬರುವುದು ಪಕ್ಕಾ. ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಹಿರಿಯ ವ್ಯಕ್ತಿ ಎಂದರೆ ಅದು ಆರ್ಯವರ್ಧನ್ ಗುರೂಜಿ. ತಂಡದ ಸೋಲಿನಿಂದ ತಂಡದ ಆಟಗಾರನಿಗೆ ಎಷ್ಟರಮಟ್ಟಿಗೆ ನೋವಾಗುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗಿದೆ. ಇದರಲ್ಲಿ ಬಿಗ್ ಬಾಸ್ ಎರಡು ತಂಡಗಳಾಗಿ ವಿಂಗಡಿಸಿದೆ. ಆದರೆ ದುರದೃಷ್ಟವಶಾತ್ ಗುರೂಜಿ ಇರುವ ತಂಡದವರು ಒಂದು ಟಾಸ್ಕ್ ಕೂಡ ಗೆದ್ದಿಲ್ಲ. ಇದು ಗುರೂಜಿ ಅವರ ಮನಸಿಗೆ ಬಹಳಷ್ಟು ಬೇಸರ ತಂದಿದೆ. ಆದರೆ ತಮ್ಮ ಬೇಸರವನ್ನು ಎಂದಿಗೂ ಹೊರಹಾಕದ ಗುರೂಜಿ ಕ್ಯಾಪ್ಟನ್ ಆಯ್ಕೆಯ ಸಂಧರ್ಭದಲ್ಲಿ ತಮಗೆ ಆದ ಬೇಸರದ ಕುರಿತು ಮಾತನಾಡಿದರು.

ಬಿಗ್ ಬಾಸ್ ಸ್ಪರ್ಧಿಗಳಿಗೆ ಮನೆಯ ನಾಯಕನನ್ನು ಆಯ್ಕೆ ಮಾಡಬೇಕೆಂಬ ಒಂದು ಟಾಸ್ಕ್ ನೀಡುತ್ತಾರೆ. ಈ ಟಾಸ್ಕ್ ಗುರೂಜಿ ಅವರಿಗೂ ಸಹ ಬರುತ್ತದೆ. ಈ ಸಂಧರ್ಭದಲ್ಲಿ ಗುರೂಜಿ ” ನಮ್ಮ ಟೀಮ್ ಇಂದ ಬಹಳ ದುಃಖವಿದೆ, ನಮ್ಮ ಟೀಮ್ ಇಂದ ಯಾರಾದರೂ ಕ್ಯಾಪ್ಟನ್ ಆಗಿದ್ದರೆ ಖುಷಿಯಾಗಿರುತ್ತಿತ್ತು, ನಮ್ಮ ಟೀಮ್ ಎಡವಟ್ಟಿನಿಂದ ನಾವು ಇನ್ನೊಬ್ಬರನ್ನು ಕ್ಯಾಪ್ಟನ್ ಮಾಡುವ ಸಂಧರ್ಭ ಬಂದಿದೆ, ಅದು ನನಗೆ ಬಹಳ ದುಃಖವಾಗುತ್ತಿದೆ, ಕೋತಿ ತರ ಡಿಸಿಷನ್ ತೊಗೊಂಡು ನಾವು ನಾಯಿ ತರ ಅಡಿ ಇನ್ನೊಬ್ಬರಿಗೆ ಟೀಮ್ ಬಿಟ್ಟುಕೊಡುತ್ತಿದೇವೆ, ನಮ್ಮ ಎದೆಮೇಲೆ ಬರೆಸಿಕೊಳ್ಳಬೇಕಿದ್ದ ಸಹಿಯನ್ನು ಇನ್ನೊಬ್ಬರ ಎದೆಯಮೇಲೆ ಬರೆಯಬೇಕೆಂದರೆ ನಮ್ಮ ರಕ್ತ ಕಿತ್ತುಕೊಟ್ಟಂಗೆ ಇರುತ್ತೆ” ಎಂದು ಗುರೂಜಿ ಹೇಳುತ್ತಿದ್ದಂತೆ ಜಯಶ್ರೀ ನಗಲು ಪ್ರಾರಂಭಿಸುತ್ತಾರೆ.

ಇದರಿಂದ ಬೇಸರಗೊಂಡ ಗುರೂಜಿ ” ನಾವು ಇಲ್ಲಿ ಬಂದಿರೋದು ಕಿಸಿಯಕ್ಕಲ್ಲ, ಗೆಲ್ಲಕ್ಕೆ ಬಂದಿರೋದು, ಗೆಲುವಿನ ಕಡೆ ಗಮನವಿಲ್ಲ, ಬೇರೆಯವರಿಗೆ ಸಹಿ ಹಾಕಬೇಕಾದರೆ ಅದು ಬರಿ ನಮ್ಮ ಪೆನ್ ಅಲ್ಲ ಅದು ನಮ್ಮ ರಕ್ತ ಎಂದು ತಿಳಿದುಕೊಂಡಿದ್ದೇವೆ, ನಮ್ಮನ್ನು ನೋಡಕ್ಕೂ, ಅದ್ಕೊಳಕ್ಕೂ ಮತ್ತು ಹೊಗಳಕ್ಕೂ ತುಂಬಾ ಜನರಿದ್ದಾರೆ, ಬದುಕಕ್ಕೆ ನಾವಿರೋದು, ಆಡ್ಕೊಳೋರೀತಿಯಲ್ಲಿ ಬದುಕಕ್ಕೆ ಹೋಗಿ ನಮ್ಮ ಜೀವನ ಹಾಳು ಮಾಡಿಕೊಳ್ಳಬೇಕಾಗುತ್ತದೆ ” ಎಂದು ಟಾಂಗ್ ಕೊಟ್ಟರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top