fbpx
ಸಮಾಚಾರ

‘ನಿನ್ನ ಮೇಲೆ ನನಗೆ ಫೀಲಿಂಗ್ ಇದೆ’! ಸೋನು ಹೇಳಿದ ಈ ಮಾತಿಗೆ ರಾಕೇಶ್ ಕೊಟ್ಟ ಉತ್ತರ ಏನು ಗೊತ್ತಾ?

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳ ಜೊತೆ ಪ್ರೇಮ ಕಥೆಯು ಶುರುವಾಗಿದೆ ಎಂದು ಹೇಳಬಹುದು. ಬಿಗ್ ಬಾಸ್ ಮನೆಯ ಲವರ್ ಬಾಯ್ ಎಂದರೆ ಅದು ರಾಕೇಶ್. ಇದೀಗ ಸೋನು ಗೌಡ ಅವರಿಗೆ ರಾಕೇಶ್ ಮೇಲೆ ಲವ್ ಆಗಿದೆ ಎಂದು ಹೇಳಬಹುದು. ಇದನ್ನು ಅವರು ರಾಕೇಶ್ ಅವರ ಬಳಿ ಓಪನ್ ಆಗಿ ಮಾತನಾಡಿದ್ದು, ಆದರೆ ಇದರ ಕುರಿತು ರಾಕೇಶ್ ಮಾತ್ರ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಲವರ್ ಬಾಯ್ ಆಗಿರುವ ರಾಕೇಶ್ ಪ್ರತಿಯೊಬ್ಬ ಹುಡುಗಿಯ ಜೊತೆ ಫ್ಲರ್ಟ್ ಮಾಡುತ್ತಿರುವುದನ್ನು ನಾವು ಗಮನಿಸಬಹುದು. ಅದರಲ್ಲೂ ಅವರು ಹೆಚ್ಚಾಗಿ ಸ್ಪೂರ್ತಿ ಗೌಡ ಅವರ ಜೊತೆ ತೀರಾ ಅನ್ಯೋನ್ಯವಾಗಿ ಇರುತ್ತಾರೆ. ಇವರಿಬ್ಬರ ನಡುವೆ ಆತ್ಮೀಯತೆ ಕೂಡ ಬೆಳೆದಿತ್ತು. ಆದರೆ ಇದು ಸೋನು ಗೌಡ ಅವರನ್ನು ಬಹಳಷ್ಟು ಬೇಸರಗೊಳಿಸುತ್ತಿತ್ತು. ಈ ಕುರಿತು ಅವರು ಓಪನ್ ಆಗಿ ಮಾತನಾಡಿದ್ದಾರೆ.

ರೂಪೇಶ್ ಶೆಟ್ಟಿ ಅವರ ಬಳಿ ಮಾತನಾಡುತ್ತಾ ಸೋನು ” ನನಗೆ ರಾಕೇಶ್ ಇಷ್ಟವಾಗಿದ್ದಾನೆ, ಆದರೆ ಆತ ಎಲ್ಲರ ಜೊತೆ ಫ್ಲರ್ಟ್ ಮಾಡುತ್ತಾನೆ, ಅದು ನಂಗೆ ಇಷ್ಟವಾಗುವುದಿಲ್ಲ ಎಂದು ಹೇಳಿದರು. ಇದಾದ ಬಳಿಕ ರಾಕೇಶ್ ಅವರ ಬಳಿ ಬಂದ ಸೋನು ‘ನಿನ್ನ ಮೇಲೆ ನಿಜಕ್ಕೂ ಫೀಲಿಂಗ್ಸ್​ ಇದೆ’ ಎಂದು ಹೇಳಿದಾಗ ಇದಕ್ಕೆ ರಾಕೇಶ್ ‘ನಿಜನಾ?’ ಎಂದು ಮರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸದ ಸೋನು “‘ನಿನ್ನ ಮೇಲೆ ಫೀಲಿಂಗ್ಸ್​ ಇದೆ. ಬೇಕು ಅಂದರೆ ಒಪ್ಪಿಕೋ, ಇಲ್ಲ ಅಂದ್ರೆ ಇಲ್ಲ. ನಾನು ಹೇಳಬೇಕು ಅನ್ನಿಸ್ತು ಹೇಳಿದೆ’ ಎಂದರು. ಕೊನೆಗೆ ರಾಕಿ ‘ನಿನ್ನ ಫೀಲಿಂಗ್ಸ್​​ ಜತೆ ಆಡಲ್ಲ’ ಎಂದು ಉತ್ತರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top