fbpx
ಸಮಾಚಾರ

ದೊಡ್ಮನೆಗೆ ಪ್ರವೇಶಿಸಲು ಹೊಸ ಅಭಿಯಾನ ಶುರುಮಾಡಿದ ಕಾಫೀ ನಾಡು ಚಂದು! ಇದೀಗ ಎಲ್ಲಾ ಕಡೆ ಚಂದು ಅವರದ್ದೇ ಹವಾ

ಬಿಗ್ ಬಾಸ್ OTT ಶುರುವಾಗಿ 1 ವಾರಗಳು ಕಳೆಯುತ್ತಿದೆ. ಈ ವೇಳೆ ಮನೆಯಲ್ಲಿ ಇಂದು ಅಥವಾ ನಾಳೆ ಮನೆಯಿಂದ ಒಬ್ಬ ಸದಸ್ಯ ಹೊರಹೋಗುವುದು ಪಕ್ಕಾ ಎಂದು ಹೇಳಬಹುದು. ಈ ಮಧ್ಯೆ ಇದೀಗ ಎಲ್ಲ ಕಡೆ ಮತ್ತೊಂದು ಸುದ್ದಿ ಸಕತ್ ವೈರಲ್ ಆಗುತ್ತಿದೆ. ಅದೇನೆಂದರೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕಾಫೀ ನಾಡು ಚಂದು ಅವರನ್ನು ಮನೆ ಒಳಗೆ ಪ್ರವೇಶಿಸಲು ಅಭಿಯಾನ ಶುರುವಾಗುತ್ತಿದೆ.

ಹುಟ್ಟು ಹಬ್ಬದ ಹಾಡನ್ನು ಹಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿರುವ ಕಾಫೀ ನಾಡು ಚಂದು ಬಿಗ್ ಬಾಸ್ ಮನೆಗೆ ಪ್ರವೇಶಿಸಬೇಕೆಂಬುದು ಪ್ರತಿಯೊಬ್ಬರ ಆಸೆಯಾಗಿತ್ತು. ಆದರೆ ಅದು ನೆರವೇರಲೇ ಇಲ್ಲ. ಇದು ಚಂದು ಹಾಗು ಅವರ ಅಭಿಮಾನಿಗಳಿಗೆ ಬಹಳಷ್ಟು ಬೇಸರವನ್ನು ತರಿಸಿತ್ತು. ಆದರೆ ಇದೀಗ ಮನೆ ಒಳಗೆ ಪ್ರವೇಶಿಸಲು ಚಂದು ಹೊಸ ಅಭಿಯಾನವನ್ನು ಶುರು ಮಾಡಿದ್ದಾರೆ.

 

 

ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸಬೇಕೆಂಬುದು ಕಾಫೀ ನಾಡು ಚಂದು ಅವರ ಬಹು ದೊಡ್ಡ ಕನಸಾಗಿತ್ತು. ಆದರೆ ಅದು ಈಡೇರದೆ ಇದ್ದಾಗ ಅವರಿಗೆ ಬಹಳಷ್ಟು ಬೇಸರವಾಗಿತ್ತು. ಆದರೆ ಅಷ್ಟಕ್ಕೇ ಸುಮ್ಮನೆ ಕೂರದ ಚಂದು ಇದೀಗ ಒಂದು ದೊಡ್ಡ ಅಭಿಯಾನವನ್ನು ಶುರು ಮಾಡಿದ್ದಾರೆ. ಎಲ್ಲರ ಬಳಿ ತೆರಳಿ ಕಾಫಿನಾಡಿನ ಚಂದು ಅವರನ್ನು ಬಿಗ್‌ಬಾಸ್‌ಗೆ ಕಳುಹಿಸವಂತೆ ಒತ್ತಾಯಿಸುವ ವಿಡಿಯೋ ಮಾಡಿಸಿ ಅಪ್ಲೋಡ್ ಮಾಡಿಸುತ್ತಿದ್ದಾರಂತೆ. ಈ ಬಗ್ಗೆ ಇದೀಗ ಎಲ್ಲಾ ಕಡೆ ಚರ್ಚೆ ಶುರುವಾಗಿದೆ.

ಒಂದು ಹಂತದಲ್ಲಿ ಹೇಳಬೇಕೆಂದರೆ ಕಾಫೀ ನಾಡು ಚಂದು ಬಿಗ್ ಬಾಸ್ ಮನೆಗೆ ಪ್ರವೇಶಿಸುವುದು ಒಳ್ಳೆಯದು ಎಂದು ಹೇಳಬಹುದು. ತಮ್ಮ ಬಳಿ ಇರುವ ಟ್ಯಾಲೆಂಟ್ ಅನ್ನು ಉಪಯೋಗೊಸಿ ಹಲವಾರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದಲ್ಲದೆ ಇದೀಗ ಪ್ರತಿಯೊಬ್ಬರ ಹುಟ್ಟುಹಬ್ಬದಂದು ಎಲ್ಲ ಕಡೆ ನಮಗೆ ಕೇಳಿ ಬರುವುದು ಕಾಫೀ ನಾಡು ಚಂದು ಅವರ ಬರ್ತಡೇ ಹಾಡು, ಹೀಗಾಗಿ ದೊಡ್ಮನೆ ಪ್ರವೇಶಿಸಲು ಚಂದು ಅರ್ಹರು ಎಂದು ಹೇಳಬಹುದು. ಇದರ ಕುರಿತು ನಿಮ್ಮ ಅಭಿಪ್ರಾಯ ಏನು?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top