fbpx
ಸಮಾಚಾರ

ಬಿಗ್ ಬಾಸ್ ಮನೆಯಿಂದ ದಿಡೀರನೆ ಕಾಣೆಯಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್! ಅಷ್ಟಕ್ಕೂ ಇವರು ಮನೆಯಿಂದ ಹೊರನಡೆಯಲು ಕಾರಣವೇನು?

ಬಿಗ್ ಬಾಸ್ ಮನೆಯ ಕೇಂದ್ರ ಬಿಂದು ಎಂದರೆ ಅದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್. ಆದರೆ ನೆನ್ನೆ ಇಂದ ಲೋಕೇಶ್ ದೊಡ್ಮನೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದರಿಂದ ಇವರ ಅಭಿಮಾನಿಗಳಿಗೆ ಅನುಮಾನ ಹುಟ್ಟಿಕೊಂಡಿತ್ತು. ಲೋಕೇಶ್ ಎಲಿಮಿನೇಟ್ ಆಗಿದ್ದಾರೆ? ಅಥವಾ ಅವರಿಗೆ ಏನಾದರು ತೊಂದರೆ ಆಯ್ತಾ ಎಂದು? ಆದರೆ ಇದೀಗ ಇದಕ್ಕೆ ಉತ್ತರ ಸಿಕ್ಕಿದೆ.

ದೊಡ್ಮನೆಯಲ್ಲಿ ಸದಾ ಲವಲವಿಕೆ ಇಂದ ಓಡಾಡಿ ಮನೆ ಮಂದಿ ಹಾಗು ವೀಕ್ಷಕರನ್ನು ನಗಿಸುತ್ತಿದ್ದ ಲೋಕೇಶ್ ಅವರ ಕಾಲಿಗೆ ಪೆಟ್ ಆಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಇವರ ಕಾಲು ಕೂಡ ಊದಿಕೊಂಡಿದ್ದು, ಬಿಗ್ ಬಾಸ್ ಮನೆ ಇಂದ ನೇರವಾಗಿ ಅವರು ಆಸ್ಪತ್ರೆಗೆ ಧಾಖಲಾಗಿದ್ದಾರೆ.

ಇವರ ಕಾಲು ಊದಿರುವ ಕುರಿತು ಸೋನು ಗೌಡ ಗಮನಿಸಿ ಇವರಿಗೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ ಎಂದು ಹೇಳಿದ್ದರು. ಈ ಕಾರಣಕ್ಕಾಗಿ ಇವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಿಗ್ ಬಾಸ್ ನಿಯಮದ ಪ್ರಕಾರ ಮನೆ ಒಳಗೆ ಪ್ರವೇಶಿಸಿದ ಸ್ಪರ್ಧಿಯು ಎಲಿಮಿನೇಟ್ ಆಗುವವರೆಗೂ ಮನೆ ಇಂದ ಹೊರನಡೆಯಬಾರದು. ಆದರೆ ಟಾಸ್ಕ್ ಮಾಡುತ್ತಿದ್ದ ವೇಳೆ ತಮ್ಮ ಕಾಲಿಗೆ ಬಲವಾದ ಪೆಟ್ಟು ಬಿದ್ದು ಊದಿಕೊಂಡಿರುವ ಕಾರಣ ಲೋಕೇಶ್ ಅವರನ್ನು ಸೂಕ್ತ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಸೇರಿಸಲಾಗಿದೆ. ಇವರು ಗುಣಮುಖರಾಗಿ ಬಂದ ಬಳಿಕ ಮತ್ತೆ ದೊಡ್ಮನೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇವರು ಶೀಘ್ರ ಗುಣಮುಖರಾಗಿ ಬರಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top