ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ ಸುಮಾರು 10 ದಿನಗಳು ಕಳೆಯುತ್ತಾ ಬಂದಿದೆ. ಮನೆಯ ಮೊದಲ ಎಲಿಮಿನೇಷನ್ ಕೂಡ ಮುಗಿದಿದೆ. ಇದಲ್ಲದೆ ಸಹಜವಾಗಿ ಮನೆಯಲ್ಲಿ ಜಗಳಗಳು ಮತ್ತು ಪ್ರೀತಿ ಪ್ರೇಮ ಹೀಗೆ ಹಲವಾರು ಘಟನೆಗಳು ನಡೆಯುತ್ತಾ ಬಂದಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಅರ್ಜುನ್ ಮತ್ತು ರೂಪೇಶ್ ನಡುವೆ ಜಗಳ ನಡೆದಿದ್ದು, ಇದರ ಪ್ರೊಮೊ ಕಲರ್ಸ್ ಕನ್ನಡ ಪೇಜ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಬಿಗ್ ಬಾಸ್ ಶುರುವಾದಾಗಿನಿಂದ ಮನೆಯಲ್ಲಿ ಜಗಳಗಳು ನಡೆಯುತ್ತಾ ಬಂದಿದೆ. ಮೊದಲಿಗೆ ಸೋನು ಮತ್ತು ಸ್ಪೂರ್ತಿ ಗೌಡ ನಡುವೆ ಸಣ್ಣ ಪುಟ್ಟ ಕಾರಣಕ್ಕೆ ಜಗಳ ನಡೆಯಿತು. ನಂತರ ಉದಯ್ ಮತ್ತು ಆರ್ಯವರ್ಧನ್ ಗುರೂಜಿ ನಡುವೆ ಜಗಳ ನಡೆಯಿತು. ಇದಾದ ನಂತರ ಸುಮ್ಮನಿದ್ದ ಬಿಗ್ ಬಾಸ್ ಮನೆಯಲ್ಲಿ ಅರ್ಜುನ್ ಮತ್ತು ರೂಪೇಶ್ ನಡುವೆ ಜಗಳ ಶುರುವಾಗಿದ್ದು, ಇದು ದೊಡ್ಮನೆಯ ಮಂದಿಯ ನಿದ್ದೆ ಕೆಡಿಸಿದೆ.
ಅಷ್ಟಕ್ಕೂ ಇವರಿಬ್ಬರ ನಡುವೆ ಜಗಳ ಶುರುವಾಗಲು ಮುಖ್ಯ ಕಾರಣ ರೊಟ್ಟಿ. ರೊಟ್ಟಿ ಹೆಚ್ಚಾಗಿತ್ತು ಎಂಬ ಕಾರಣಕ್ಕೆ ರೂಪೇಶ್ ರೊಟ್ಟಿಯನ್ನು ಕಸದ ಬುಟ್ಟಿಯಲ್ಲಿ ಬಿಸಾಕಿದರು. ಇದನ್ನು ಗಮನಿಸಿದ ಅರ್ಜುನ್ ರೊಟ್ಟಿ ಕಸದ ಬುಟ್ಟಿಯಲ್ಲಿ ಬಿಸಾಕಿದ್ದು ಯಾರು ಎಂದು ಪ್ರಶ್ನಿಸಿದರು. ಇದಕ್ಕೆ ರೂಪೇಶ್ ರೊಟ್ಟು ಹೆಚ್ಚಾಗಿ ಒಟ್ಟೆಗೆ ಸೇರಲಿಲ್ಲ ಅದಕ್ಕಾಗಿ ಬಿಸಾಕಿದೆ ಕ್ಷಮೆ ಇರಲಿ ಎಂದು ಹೇಳಿದರು. ಇಷ್ಟಕ್ಕೆ ಸಿಟ್ಟಾದ ಅರ್ಜುನ್ ಎಷ್ಟೊ ಜನ ಊಟ ವಿಲ್ಲದೆ ಸಾಯುತ್ತಿದ್ದಾರೆ. ಹಾಗಿರುವಾಗ ಊಟ ಎಸೆಯುವುದು ತಪ್ಪು ಎಂದು ಹೇಳಿದರು.
ಇಷ್ಟಕ್ಕೆ ಸಿಟ್ಟಾದ ರಾಕೇಶ್ ಹಾಗೆಲ್ಲಾ ಹೇಳಬೇಡ, ನನಗೂ ಗೊತ್ತು, ಎಂದು ಇಬ್ಬರ ಮದ್ಯೆ ಜಗಳ ತಾರಕ್ಕೇರುತ್ತದೆ. ಮನೆಯ ಮಂದಿ ಬಂದು ಇಬ್ಬರನ್ನು ಸಮಾಧಾನ ಪಡಿಸಿಸಲು ಎಷ್ಟೇ ಪ್ರಯತ್ನಿಸಿದರು ಅದು ಸಾಧ್ಯವಾಗಲೇ ಇಲ್ಲ. ಇದೀಗ ಈ ಪ್ರೊಮೊ ವಿಡಿಯೋ ಸಕತ್ ವೈರಲ್ ಆಗುತ್ತಿದೆ. ಇವರಿಬ್ಬರ ಜಗಳ ನಂತರ ಬಿಗ್ ಬಾಸ್ ಮನೆಯಲ್ಲಿ ಏನೆಲ್ಲಾ ನಡೆಯಿತು ಎಂಬುದು ಸಂಜೆ ಪ್ರಸಾರವಾಗುವ ಎಪಿಸೋಡ್ ಅನ್ನು ವುಟ್ ಆಪ್ ನಲ್ಲಿ ವೀಕ್ಷಿಸಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
