fbpx
ಸಮಾಚಾರ

ತನ್ನ ಗರ್ಲ್​ಫ್ರೆಂಡ್ ಗೆ ಆದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಂಡ ಜಶ್ವಂತ್! ಎರಡನೆ ಬಾರಿ ನಾಮಿನೇಟ್ ಆದ ಸೋನು ಗೌಡ

ಬಿಗ್ ಬಾಸ್ ಮನೆಯ ಮೊದಲ ಎಲಿಮಿನೇಷನ್ ಮುಗಿದಿದ್ದು, ಇದೀಗ ಎರಡನೇ ನಾಮಿನೇಷನ್ ಪ್ರಕ್ರಿಯೆ ಶುರವಾಗಿದೆ. ಈ ವೇಳೆ ತನ್ನ ಗರ್ಲ್​ಫ್ರೆಂಡ್ ವಿಚಾರಕ್ಕೆ ಬಂದ ಸೋನು ಗೌಡ ವಿರುದ್ಧ ಸೇಡು ತೀರಿಸಿಕೊಂಡ ಜಶ್ವಂತ್ ಸೋನು ಗೌಡ ಅವರನ್ನು ನಾಮಿನೇಟ್ ಮಾಡಿದ್ದಾರೆ.

ಬಿಗ್ ಬಾಸ್ ಸದ್ಯಸರಿಗೆ ಒಂದು ಟಾಸ್ಕ್ ನೀಡಿದ್ದರು. ಮ್ಯೂಸಿಕಲ್ ಚೇರ್ ರೀತಿಯ ಒಂದು ಟಾಸ್ಕ್ ಬಿಗ್ ಬಾಸ್ ನೀಡಿದರು. ಈ ಟಾಸ್ಕ್ ವೇಳೆ ಸೋನು ಅವರಿಗೆ ಒಂದು ಲೆಟರ್ ಸಿಕ್ಕಿತು. ಅದರಲ್ಲಿ ಒಬ್ಬರನ್ನು ನಾಮಿನೇಟ್ ಮಾಡಬೇಕು ಎಂದು ಬರೆದಿತ್ತು. ಅದರಂತೆ ಸೋನು ‘ನಾನು ನಂದು ಅವರನ್ನು ನಾಮಿನೇಟ್ ಮಾಡುತ್ತೇನೆ. ಅವರು ಸಖತ್ ಆಗಿ ಆಡುತ್ತಾರೆ. ನನಗೆ ಟಫ್ ಕಾಂಪಿಟೇಟರ್ ಅನಿಸಿತು. ಈ ಕಾರಣಕ್ಕೆ ಅವರ ಹೆಸರನ್ನು ತೆಗೆದುಕೊಂಡೆ’ ಎಂದು ಕಾರಣ ನೀಡಿದರು. ಆದರೆ ಸೋನು ಅವರ ಈ ನಿರ್ಧಾರ ಇದೀಗ ಅವರಿಗೆ ಮುಳುವಾಗಿದೆ.

ಏಕೆಂದರೆ ಮತ್ತೊಂದು ಆಟದಲ್ಲಿ ಗೆದ್ದ ಜಶ್ವಂತ್ ನೇರವಾಗಿ ಸೋನು ಅವರನ್ನು ನಾಮಿನೇಟ್ ಮಾಡಿದ್ದಾರೆ. ‘ಸೋನು ಅವರು ಎಲ್ಲರ ಜತೆ ಬೆರೆಯುತ್ತಿಲ್ಲ. ಇದರ ಜತೆಗೆ ಅವರು ನನ್ನ ಗರ್ಲ್​​ಫ್ರೆಂಡ್​​ ಅನ್ನು ನಾಮಿನೇಟ್ ಮಾಡಿದ್ದಾರೆ. ಈ ಕಾರಣಕ್ಕೆ ಅವರನ್ನು ನಾಮಿನೇಟ್ ಮಾಡುತ್ತಿದ್ದೇನೆ’ ಎಂದು ಕಾರಣ ತಿಳಿಸಿದರು. ಇದರಿಂದ ತಾವು ತಮ್ಮ ಗರ್ಲ್​ಫ್ರೆಂಡ್ ಆದ ಅನ್ಯಾಯವಾದ ವಿರುದ್ಧ ಸೇಡು ತೀರಿಸಿಕೊಂಡರು.

ಮೊದಲ ವಾರದಲ್ಲೇ ಸೋನು ನಾಮಿನೇಟ್ ಆಗಿದ್ದರು. ಆದರೆ ಹೆಚ್ಚಿನ ವೋಟ್ ಪಡೆಯುವ ಮೂಲಕ ಸೇಫ್ ಆಗಿದ್ದರು. ಆದರೆ ಇದೀಗ ಮತ್ತೊಮ್ಮೆ ನಾಮಿನೇಟ್ ಆಗಿದ್ದು, ಈ ಬಾರಿಯೂ ಅವರು ಸೇಫ್ ಆಗುತ್ತಾರಾ ಎಂದು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top