fbpx
ಸಮಾಚಾರ

ನೋವಿನ ನಡುವೆಯೂ ಗೆದ್ದು ಬೀಗಿದ ಸೋನು! ಮನೆಯ ಮಂದಿಯಿಂದ ಹರಿಯಿತು ಮೆಚ್ಚುಗೆ ಮಹಾಪೂರ

ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಟಾಸ್ಕ್ ನೀಡಿ ಅವರನ್ನು ಆಕ್ಟಿವ್ ಮಾಡುತ್ತಿದ್ದಾರೆ. ಈ ವೇಳೆ ಮನೆಯ ಮಂದಿಗಳೆಲ್ಲ ಗೆಲ್ಲಬೇಕು ಎಂಬ ಹಂಬಲದಿಂದ ಸಕ್ರಿಯವಾಗಿ ಟಾಸ್ಕ್ ಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ವೇಳೆ ಹೊರಗಡೆ ಸಕತ್ ಟ್ರೊಲ್ ಆಗಿದ್ದ ಸೋನು ಇದೀಗ ಮನೆಯ ಮಂದಿಯ ಮೆಚ್ಚುಗೆಯನ್ನು ಗಳಿಸಿದ್ದಾರೆ.

ಈ ವಾರ ಬಿಗ್ ಬಾಸ್ ಮನೆಯ ಮಂದಿಗಳಿಗೆ ಟಾಸ್ಕ್ ನೀಡಿದ್ದರು. ಅದು ಕೂಡ ಫಿಸಿಕಲ್ ಟಾಸ್ಕ್. ಇದರಲ್ಲಿ ಎರಡು ತಂಡಗಳು ಇದ್ದವು. ಒಂದು ಸೋಮಣ್ಣ ಅವರ ನಾಯಕತ್ವದ ತಂಡವಾದರೆ ಮತ್ತೊಂದು ನಂದು ಅವರ ನಾಯಕತ್ವದ ಮತ್ತೊಂದು ತಂಡ. ನಂದು ನಾಯಕತ್ವದ ತಂಡದಲ್ಲಿ ಸೋನು ಭಾಗವಹಿಸಿದರು.

ಟಾಸ್ಕ್ ಶುರುವಾಗುವ ಮುಂಚೆ ಸೋಮಣ್ಣ ಅವರ ಬಳಿ ಕಬ್ಬಡಿ ಆಡಲು ಹೋಗಿ ಸೋನು ಕೈ ಗಾಯ ಮಾಡಿಕೊಂಡಿದ್ದರು. ಇದು ಇವರಿಗೆ ತೀರಾ ನೋವನ್ನು ನೀಡಿತ್ತು. ಇದೆ ಕಾರಣಕ್ಕಾಗಿ ಇವರು ತಮ್ಮ ಕೈಗೆ ಹೊಲಿಗೆಯನ್ನು ಸಹ ಹಾಕಿಸಿಕೊಂಡಿದ್ದರು. ಆದರೆ ಇದನೆಲ್ಲ ಲೆಕ್ಕಿಸದೆ ಸೋನು ಟಾಸ್ಕ್ ನಲ್ಲಿ ಭಾಗವಹಿಸಿ ಜಯಶಾಲಿಯಾಗಿದ್ದರು.

ಸೋನು ಟಾಸ್ಕ್ ನಲ್ಲಿ ಗೆಲ್ಲುತ್ತಿದಂತೆ ಮನೆ ಮುಂದೆ ಇವರಿಗೆ ಮೆಚ್ಚುಗೆಯನ್ನು ಸೂಚಿಸಿದರು. ನೋವಿನ ನಡುವೆಯೂ ಗೆದ್ದ ಸೋನು ಆ ಟಾಸ್ಕ್ ನ ಹೈಲೈಟ್ ಆದರು. ಇದಲ್ಲದೆ ಮನೆಯ ಮಂದಿ ಇವರಿಗೆ ‘ಇಂದಿನ ನಿಜವಾದ ಸ್ಟಾರ್ ನೀನು’ ಎಂದು ಪ್ರಶಂಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top