ಬಿಗ್ ಬಾಸ್ ಮನೆಯಲ್ಲಿ ದಿನೆ ದಿನೆ ಒಂದಲ್ಲ ಒಂದು ಬೆಳವಣಿಗೆಗಳು ನಡೆಯುತ್ತಿದೆ. ಅದರಲ್ಲೂ ಟಾಸ್ಕ್ ಅಂತ ಬಂದರೆ ಒಬ್ಬರ ಮೇಲೊಬ್ಬರು ಜಿದ್ದಾಜಿದ್ದಿಯಿಂದ ಹೋರಾಡಿ ಗೆಲ್ಲುತ್ತಿದ್ದಾರೆ. ಇತ್ತೀಚಿಗೆ ಗುರೂಜಿ ಈ ವಾರದ ಟಾಸ್ಕ್ ಇಂದ ಎಲಿಮಿನೇಟ್ ಆಗಿದ್ದರು. ಆದರೆ ಇದೀಗ ಗುರೂಜಿ ಮತ್ತೆ ಈ ವಾರ ಟಾಸ್ಕಿನಲ್ಲಿ ಭಾಗವಹಿಸುತ್ತಿದ್ದಾರೆ, ಇದಕ್ಕೆ ಮುಖ್ಯ ಕಾರಣ ರೂಪೇಶ್.
ಬಿಗ್ ಬಾಸ್ ಮನೆಯಲ್ಲಿ ಸೋಮಣ್ಣ ಅವರ ನಾಯಕತ್ವದ ತಂಡಕ್ಕೆ ಕರುನಾಡ ವಾರಿಯರ್ಸ್ ಎಂಬ ಹೆಸರನ್ನು ಇಡಲಾಗಿತ್ತು. ಇದರಲ್ಲಿ ರೂಪೇಶ್ ಸೇರಿ ಒಟ್ಟು 6 ಮಂದಿ ಸ್ಪರ್ಧಿಗಳಿದ್ದರು. ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಅದೇನು ಬೆಳವಣಿಗೆ ಆಯಿತೋ ಏನೋ ಗೊತ್ತಿಲ್ಲ. ಆದರೆ ಇದೀಗ ರೂಪೇಶ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದು, ಇವರ ಬದಲು ಗುರೂಜಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದರ ಕುರಿತು ಸ್ವತಃ ಸೋಮಣ್ಣ ನವರೇ ತಿಳಿಸಿದ್ದಾರೆ.
ಬಿಗ್ ಬಾಸ್ ಸೋಮಣ್ಣನವರಿಗೆ ನಿಮ್ಮ ನಿರ್ಧಾರವನ್ನು ಸೂಕ್ತ ಕಾರಣದ ಜೊತೆ ಬಿಗ್ ಬಾಸ್ ಗೆ ತಿಳಿಸಿರಿ ಎಂದು ಕೇಳಿದಾಗ ಕರುನಾಡ ವಾರಿಯರ್ಸ್ ತಂಡದ ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಬಿಗ್ಬಾಸ್ ರೂಲ್ಸ್ಗಳನ್ನು ಯಾರೂ ಬ್ರೇಕ್ ಮಾಡಬಾರದು ಎನ್ನುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ತಂಡದಿಂದ ರೂಪೇಶ್ ಅವರನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
ಈ ಕೂಡಲೇ ಬಿಗ್ ಬಾಸ್ ಗುರೂಜಿ ಅವರಿಗೆ ನೀವು ಇವತ್ತಿಂದ ಕರುಣಾದವರ್ರಿಒರ್ಸ್ ತಂಡದ ಪರ ಆಡಬಹುದು ಎಂದು ತಿಳಿಸಿದರು, ಮತ್ತು ರೂಪೇಶ್ ಈ ವಾರ ಯಾವುದೇ ಟಾಸ್ಕ್ ಗಳಲ್ಲಿ ಭಾಗವಹಿಸಬಾರದೆಂದು ಸೂಚಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
