fbpx
ಸಮಾಚಾರ

ಮದುವೆ ಮಂಟಪಕ್ಕೆ ರಾಯಲ್ ಎನ್​ಫೀಲ್ಡ್​ ಬೈಕ್ ಮೇಲೆ ಬಂದ ವಧು! ವಿಡಿಯೋ ವೈರಲ್

ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎಂಬುದು ಬಹಳ ವಿಶೇಷವಾದ ದಿನ. ಈ ದಿನ ವಧು ವರರಿಬ್ಬರು ವಿಜೃಂಭಣೆಯಿಂದ ಕಂಗೊಳಿಸುತ್ತಿರುತ್ತಾರೆ. ಸಂಬಂಧಿಕರು ಖುಷಿ ಇಂದ ಕುಣಿದು ಕುಪ್ಪಳಿಸುತ್ತಿರುತ್ತಾರೆ. ಈ ವೇಳೆ ಮದುಮಗಳು ಬೈಕ್ ನಲ್ಲಿ ಬಂದರೆ ಹೇಗಿರುತ್ತದೆ ಅಲ್ಲವೇ ಆ ಸನ್ನಿವೇಶ. ಇದೀಗ ಇದೆ ಘಟನೆ ದೆಹಲಿಯಲ್ಲಿ ನಡೆದಿದೆ.

 

 

ದೆಹಲಿಯ ರಸ್ತೆಯೊಂದರಲ್ಲಿ ರಾತ್ರಿಯೊತ್ತು ಮಧು ಮಗಳು ರಾಯಲ್ ಎನ್​ಫೀಲ್ಡ್​ ಬೈಕ್ ನಲ್ಲಿ ಹೋಗುತ್ತಿರುವುದನ್ನು ನೋಡಿ ಜನರು ಒಂದು ಕ್ಷಣ ಶಾಕ್ ಆಗಿದ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

ಈ ಮಧುಮಗಳ ಹೆಸರು ವೈಶಾಲಿ ಚೌಧರಿ. ಇವರಿಗೆ ಹಲವು ವರ್ಷಗಳಿಂದ ಮದುವೆ ಮಂಟಪಕ್ಕೆ ಈ ರೀತಿ ಬೈಕ್ ನಲ್ಲಿ ಮಧುಮಗಳ ಉಡಿಗೆಯನ್ನು ತೊಟ್ಟು ಪ್ರವೇಶಿಸಬೇಕೆಂಬ ಕನಸಿತ್ತು. ಇದೀಗ ಇವರಿಗೆ ಆ ಕನಸು ನನಸಾಗಿದೆ ಎಂದು ಖುಷಿ ಪಟ್ಟಿದ್ದಾರೆ. ಇದೀಗ ಕಾಲ ಕಾಲಕ್ಕೆ ಜನರು ಬದಲಾಗುತ್ತಿದ್ದಾರೆ, ಹಾಗೆಯೆ ಸಂಪ್ರದಾಯ ಕೂಡ ಬದಲಾಗುತ್ತಾ ಬಂದಿದ್ದೆ. ಹೀಗಾಗಿ ಈ ರೀತಿಯ ಚಿತ್ರ ವಿಚಿತ್ರವಾದ ಮದುವೆಗಳನ್ನು ನಾವು ನೋಡುತ್ತಿದ್ದೇವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top