ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದೆ. ಈ ವೇಳೆ ಮನೆಯಲ್ಲಿ ದಿನೆ ದಿನೆ ಹಲವಾರು ಬದಲಾವಣೆಗಳು ಆಗುತ್ತಿದೆ. ಮೊದಲು ಮನೆಯಲ್ಲಿ ಜಗಳ, ಪ್ರೀತಿ ಪ್ರೇಮ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಉದಯ್ ಕುರಿತು ಮನೆಯ ಕೆಲವು ಹೆಣ್ಣು ಮಕ್ಕಳು ತಮ್ಮ ಆಕ್ರೋಶವನ್ನು ಹೊರಹಕಿದ್ದಾರೆ.
ಮನೆಯ ಹೆಣ್ಣು ಮಕ್ಕಳು ಉದಯ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಲು ಮುಖ್ಯ ಕಾರಣ ಇವರು ಮಹಿಳಾ ಸ್ಪರ್ಧಿಗಳನ್ನು ಹಿಂದೆಯಿಂದ ಬಂದು ತಬ್ಬಿಕೊಂಡು ಅವರಿಗೆ ಕಿಸ್ ಕೊಡುತ್ತಾನೆ ಎಂದು. ಇದಕ್ಕೆ ಹಲವಾರು ಸಾಕ್ಷಿಗಳು ಇವೆ. ಬಿಗ್ ಬಾಸ್ ಸ್ಪರ್ಧಿಯಾಗಿರುವ ಅಕ್ಷತಾ ಟಾಸ್ಕ್ ಮುಗಿಸಿದ ಬಳಿಕ ಉದಯ್ ಅವರನ್ನು ಎತ್ತಿಕೊಂಡು ಹೋಗಿ ಕೂರಿಸಿ ಕಿಸ್ ಮಾಡಿ ತುಂಬಾ ಚೆನ್ನಾಗಿ ಆಡಿದ್ದೀಯಾ ಎಂದು ಹೇಳಿದರು. ಇದಾದ ಬಳಿಕ ವಾಶ್ ರೂಮ್ ಬಳಿ ತೆರಳಿ ಇವರನ್ನು ಹಿಂಬದಿಯಿಂದ ಹಗ್ ಮಾಡಿ ಇವರ ಕಿವಿಗೆ ಕಿಸ್ ಮಾಡಿದರು.
ಈ ಘಟನೆಯಿಂದ ಬೇಸರಗೊಂಡ ಅಕ್ಷತಾ ಸ್ವಲ್ಪ ಸಮಯದ ನಂತರ ಉದಯ್ ಬಳಿ ತೆರಳಿ ” ‘ನೀವು ಆ ರೀತಿ ಹಗ್ ಮಾಡಬೇಡಿ. ನೋಡುವವರಿಗೆ ಅದು ಬೇರೆಯ ರೀತಿ ಕಾಣುತ್ತದೆ. ಇನ್ಮುಂದೆ ಆ ರೀತಿ ಮಾಡಬೇಡಿ’ ಎಂದು ತಿಳಿ ಹೇಳಿದರು. ಇದರಿಂದ ಉದಯ್ ಬಹಳ ಬೇಸರಗೊಂಡರು. ಇದಾದ ಬಳಿಕ ಮನೆಯ ಸಹ ಸ್ಪರ್ಧಿಗಳಾಗಿರುವ ಸಾನ್ಯ ಮತ್ತು ನಂದು ಕೂಡ ಇದರ ಕುರಿತು ಮಾತನಾಡುತ್ತಿದ್ದರು.
‘ಉದಯ್ ಹಿಂದಿನಿಂದ ಬಂದು ಹಗ್ ಮಾಡಿ, ಕಿವಿಗೆ ಕಿಸ್ ಮಾಡುತ್ತಾರೆ. ಎಷ್ಟು ಹಿಂಸೆ ಆಗುತ್ತದೆ. ನನಗೆ ಮೊನ್ನೆ ಕೋಪವೇ ಬಂತು. ಎಲ್ಲರೂ ಇದ್ದಾರೆ ಎಂದು ನಾನು ರಿಯಾಕ್ಟ್ ಮಾಡಲಿಲ್ಲ’ ಎಂದು ಸಾನ್ಯಾ ಹೇಳಿದರು. ಮರು ಮಾತನಾಡಿದ ನಂದು ‘ಅವನು ನನಗೂ ಮೊನ್ನೆ ಅದೇ ರೀತಿ ಮಾಡಿದ್ದ. ಜಶ್ವಂತ್ ಎದುರೇ ಆ ರೀತಿ ಮಾಡಿದ’ ಎಂದು ದೂರಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
