fbpx
ಸಮಾಚಾರ

ಕೊನೆಗೂ ಈಡೇರಿತು ಕಾಫೀ ನಾಡು ಚಂದು ಅವರ ಕನಸು! ನೆಚ್ಚಿನ ನಟನನ್ನು ಭೇಟಿ ಮಾಡಿ ಸಂತಸ ವ್ಯಕ್ತಪಡಿಸಿದ ರೀಲ್ಸ್ ಸ್ಟಾರ್

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ವ್ಯಕ್ತಿ ಎಂದರೆ ಅದು ನಮ್ಮ ಕಾಫೀ ನಾಡು ಚಂದು. ತಮ್ಮ ಬರ್ತಡೇ ಸಾಂಗ್ ಮೂಲಕ ಅಪಾರವಾದ ಅಭಿಮಾನಿಯನ್ನು ಇವರು ಗಳಿಸಿದ್ದಾರೆ. ಇದಲ್ಲದೆ ಇವರು ಶಿವಣ್ಣ ಮತ್ತು ಅಪ್ಪು ಅವರ ಅಪ್ಪಟ ಅಭಿಮಾನಿ. ಹೀಗಾಗಿ ಕೆಲವು ವಾರಗಳ ಹಿಂದೆ ವಿಡಿಯೋ ಮಾಡಿ ತಾವು ಶಿವಣ್ಣ ಅವರನ್ನು ಭೇಟಿಮಾಡಬೇಕು ಎಂದು ಕೇಳಿಕೊಂಡಿದ್ದರು. ಇದೀಗ ಇವರ ಅಸೆ ಈಡೇರಿದೆ ಎಂದು ಹೇಳಬಹುದು.

ಈ ಹಿಂದೆ ರಿಲ್ಸ್ ಮೂಲಕ ಅನುಶ್ರೀ ಅವರ ಬಳಿ ತಾವು ಶಿವಣ್ಣ ಅವರನ್ನು ಭೇಟಿ ಮಾಡಬೇಕು ಎಂದು ತಮ್ಮದೇ ರೀತಿಯಲ್ಲಿ ಕೇಳಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸೌಂಡ್ ಮಾಡಿತ್ತು. ಇದಾದ ನಂತರ ಚಂದು ಶಿವಣ್ಣ ಅವರನ್ನು ಯಾವಾಗ ಭೇಟಿ ಮಾಡುತ್ತಾರೆ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿತ್ತು. ಆದರೆ ಇದೀಗ ಚಂದು ಅಸೆ ಈಡೇರಿದ್ದು, ಅವರು ಶಿವಣ್ಣ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಶಿವಣ್ಣ ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದಾರೆ. ಹೀಗಾಗಿ ಆಗಸ್ಟ್ 18 ರಂದು ನಡೆದ ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಶೋಟಿಂಗ್ ನಡೆದಿದೆ. ಈ ವೇಳೆ ಚಂದು ಅವರಿಗೆ ಒಂದು ದೊಡ್ಡ ಆಫರ್ ಸಿಕ್ಕಿತ್ತು. ಅದೇನೆಂದರೆ ಶಿವಣ್ಣನ ಮುಂದೆ ಚಂದು ಹಾಡು ಹೇಳಬೇಕಿತ್ತು. ಈ ಮೂಲಕ ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಿ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top