fbpx
ಸಮಾಚಾರ

ಮಕ್ಕಳಾಗದ ವಿಚಾರಕ್ಕೆ ನಟಿ ಪ್ರಿಯಮಿ ದಂಪತಿ ವಿಚ್ಛೇದನ?

ಬಹುಭಾಷಾ ನಟಿ ಪ್ರಿಯಾಮಣಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವಾರು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿದ ನಟಿ ಇವರು. ಆದರೆ ಇತ್ತೀಚಿಗೆ ಇವರ ದಾಂಪತ್ಯ ಜೀವನದ ಕುರಿತು ಹಲವಾರು ವದಂತಿಗಳು ಕೇಳಿಬರುತ್ತಿದ್ದು, ಇದು ಇವರ ಅಭಿಮಾನಿಗಳ ಮನಸಲ್ಲಿ ಆತಂಕ ಮೂಡಿಸಿದೆ.

2017 ರಲ್ಲಿ ಪ್ರಿಯಾಮಣಿ ತಮ್ಮ ಗೆಳೆಯ ಮುಸ್ತಫಾ ರಾಜ್ ರವರನ್ನು ಪ್ರೀತಿಸಿ ಮದುವೆಯಾದರು. ಅಚ್ಚರಿಯ ವಿಷಯವೆಂದರೆ ಪ್ರಿಯಾಮಣಿ ಮುಸ್ತಫಾ ಅವರಿಗೆ ಎರಡನೆಯ ಪತ್ನಿ. ಇದಕ್ಕಿಂತ ಮುಂಚೆ ಮುಸ್ತಫಾ ತಮ್ಮ ಮೊದಲನೆಯ ಪತ್ನಿ ಆಯೇಷಾ ವಿರೋಧದ ನಡುವೆಯೂ ಪ್ರಿಯಾಮಣಿ ಅವರನ್ನು ವಿವಾಹರಾದರು. ಇದಾದ ಬಳಿಕ ಆಯೇಷಾ ಮುಸ್ತಫಾ ನನಗೆ ಮೋಸ ಮಾಡಿದ್ದು, ಈ ಮದುವೆ ಅಸಿಂಧು ಎಂದು ಪರಿಗಣಿಸಬೇಕೆಂದು ಕೋರ್ಟ್ ಮೊರೆ ಹೋಗಿದ್ದರು.

ಮದುವೆಯಾದ ಕೆಲವು ವರ್ಷಗಳ ಕಾಲ ಪ್ರಿಯಾಮಣಿ ಮತ್ತು ಮುಸ್ತಫಾ ರಾಜ್ ಖುಷಿಯಾಗಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಇವರಿಬ್ಬರ ನಡುವೆ ಮಕ್ಕಳ ವಿಷಯಕ್ಕೆ ಜಗಳಗಳು ನಡೆಯುತ್ತಿದೆ ಎಂಬ ವಿಷಯ ಕೇಳಿಬರುತ್ತಿದೆ. ಏಕೆಂದರೆ ಇವರಿಬ್ಬರು ಮದುವೆಯಾಗಿ ಸುಮಾರು 5 ವರ್ಷಗಳು ಕಳೆದಿದೆ. 5 ವರ್ಷಗಳಾದರೂ ಇವರಿಬ್ಬರಿಗೂ ಮಕ್ಕಳಾಗಿಲ್ಲ ಎಂಬ ವಿಷಯಕ್ಕೆ ಅವಾಗವಾಗ ಜಗಳ ವಾಡುತ್ತಿದ್ದರು. ಆದರೆ ಇದೀಗ ಇದು ವಿಚ್ಚೇದನದ ವರೆಗೆ ತಲುಪಿದೆ ಎಂದು ಹೇಳಲಾಗುತ್ತಿದೆ.

ಆದರೆ ಪ್ರಿಯಾಮಣಿ ದಂಪತಿ ವಿಚ್ಚೇದನ ಪಡೆಯುತ್ತಿದ್ದಾರೆ ಎಂಬ ವಿಷಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದರು ಸಹ ಇದರ ಕುರಿತು ಪ್ರಿಯಾಮಣಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಪ್ರಿಯಾಮಣಿ ಹಲವಾರು ರಿಯಾಲಿಟಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಇವರ ವಿಚ್ಚೇದನದ ಕುರಿತು ಹರಿದಾಡುತ್ತಿರುವ ವದಂತಿಯ ಕುರಿತು ಪ್ರಿಯಾಮಣಿ ದಂಪತಿ ಸ್ಪಷ್ಟನೆ ನೀಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top