fbpx
ಸಮಾಚಾರ

ಇದೇ ಮುದ್ದಾದ ಎರಡೂ ಮಕ್ಕಳ ಮುಖ ತೋರಿಸಿದ ನಟಿ ಅಮೂಲ್ಯ

ಮದುವೆ ನಂತರ ಚಿತ್ರರಂಗದಿಂದ ದೂರ ಸರಿದು ಸಂಸಾರ ತಾಪತ್ರಗಳಲ್ಲಿ ಮುಳುಗಿಹೋಗಿರುವಾಕೆ ಅಮೂಲ್ಯ. ತನ್ನ ನಟನೆ ಮೂಲಕವೇ ಕನ್ನಡಿಗರ ಮನೆಮಾತಾಗಿದ್ದ ಅಮೂಲ್ಯ ಇತ್ತೀಚಿಗೆ ಎರಡು ಮುದ್ದಾದ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದರು.

ಮಗು ಜನಿಸಿದಾಗ ಪುಟ್ಟ ಮಕ್ಕಳ ಬೆರಳು, ಕಾಲುಗಳನ್ನಷ್ಟೇ ತೋರಿಸಿದ್ದ ಅಮೂಲ್ಯ ದಂಪತಿ, ಈ ಬಾರಿ ಮುಖವನ್ನೂ ತೋರಿಸಿದ್ದಾರೆ. ನಮ್ಮ ಕಂದಮ್ಮಗಳಿಗೆ ನಿಮ್ಮ ಹಾರೈಕೆಗಳು ಇರಲಿ ಎಂದು ಕೇಳಿಕೊಂಡಿದ್ದಾರೆ.

 

 

‘’ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ನಮ್ಮ ಮುದ್ದಿನ ಮಕ್ಕಳನ್ನು ಸಂತೋಷದಿಂದ ನಿಮಗೆ ಪರಿಚಯಿಸುತ್ತಿದ್ದೇವೆ. ಸಹೃದಯಿಗಳಾದ ನಿಮ್ಮ ಶುಭಾಶೀರ್ವಾದವಿರಲಿ’’ ಎಂದು ನಟಿ ಅಮೂಲ್ಯ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top