fbpx
ಸಮಾಚಾರ

ಗುರೂಜಿ ಬಿಡೋದೆಲ್ಲಾ ಬರೀ ಬೊಗಳೆ! ಗುರೂಜಿ ಲೆಕ್ಕಾಚಾರವನ್ನು ಟೀಕಿಸಿದ ಸೋಮಣ್ಣ

ಬಿಗ್ ಬಾಸ್ ಮನೆಯಲ್ಲಿ ಇದೀಗ ಎಲ್ಲಿ ನೋಡಿದರು ಆರ್ಯವರ್ಧನ್ ಗುರೂಜಿ ಅವರದ್ದೇ ಹವಾ ಎಂದು ಹೇಳಬಹುದು. ಸಂಖ್ಯಾಶಾಸ್ತ್ರದ ಮೂಲಕ ಅಪಾರವಾದ ಅಭಿಮಾನಿಗಳನ್ನು ಸಂಪಾದಿಸಿರುವ ಇವರು ಬಿಗ್ ಬಾಸ್ ಮನೆಯಲ್ಲೂ ಸಹ ಹಲವಾರು ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ. ಆದರೆ ಇದೀಗ ಇವರ ಲೆಕ್ಕಾಚಾರ ಮನೆಯ ಮಂದಿಯ ನಗುವಿಗೆ ಕಾರಣವಾಗಿದೆ.

‘ನಾನು ಎಂದರೆ ನಂಬರ್’ ‘ನಂಬರ್ ಎಂದರೆ ನಾನು’ ಎಂದು ಹಲವಾರು ಲೆಕ್ಕಾಚಾರಗಳನ್ನು ಹಾಕುತ್ತಿದ್ದ ಗುರೂಜಿ ಇದೀಗ ದೊಡ್ಮನೆಯಲ್ಲೂ ಸಹ ಹಲವಾರು ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ. ಆದರೆ ದುರದೃಷ್ಟವಶಾತ್ ಅವೆಲ್ಲಾ ತಪ್ಪಾಗುತ್ತಿದೆ. ಇದಕ್ಕೆ ಒಂದು ಉದಾಹರಣೆ ಎಂದರೆ ” ‘ಸೋನು ಎಲ್ಲಾ ಆಟದಲ್ಲಿ ಗೆಲ್ಲುತ್ತಾರೆ’ ಎಂದು ಗುರೂಜಿ ಪ್ರೆಡಿಕ್ಟ್ ಮಾಡಿದ್ದರು. ಆದರೆ ಸೋನು ಯಾವುದೇ ಆಟದಲ್ಲಿ ಗೆಲ್ಲಲಿಲ್ಲ. ಹೀಗಾಗಿ ಗುರೂಜಿ ಅವರ ಲೆಕ್ಕಾಚಾರ ತಲೆಕೆಳಗಾಗಿತ್ತು. ಇದೆ ಕಾರಣಕ್ಕೆ ಸೋಮಣ್ಣ ಗುರೂಜಿ ಅವರನ್ನು ಟೀಕಿಸಿದರು.

ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಯಾರು ಗೆಲ್ಲುತ್ತಾರೆ ಎಂದು ಗುರೂಜಿ ಕ್ಯಾಮೆರಾ ಮುಂದೆ ಬಂದು ತಮ್ಮದೇ ರೀತಿಯಲ್ಲಿ ವಿವರಿಸುತ್ತಿದ್ದರು. ಇದನ್ನು ಅಲ್ಲೇ ಇದ್ದ ಸೋಮಣ್ಣ ಮತ್ತು ಅರ್ಜುನ್ ವೀಕ್ಷಿಸುತ್ತಿದ್ದರು. ಇದಾದ ಬಳಿಕ ಸೋಮನ್ನು ಗುರೂಜಿ ಅವರ ಪ್ರೆಡಿಕ್ಷನ್ ಕುರಿತು ” ಗುರೂಜಿ ಅವರು ಲೆಕ್ಕಾಚಾರದಲ್ಲಿ ಸದಾ ತಪ್ಪುತ್ತಿದ್ದಾರೆ. ಅವರು ಭವಿಷ್ಯ ನಿಜವಾಗಲ್ಲ. ವ್ಯಕ್ತಿ ಆಗಿ ಅವರು ಇಷ್ಟ ಆಗುತ್ತಾರೆ ಅಷ್ಟೇ. ಆದರೆ, ಸಂಖ್ಯಾಶಾಸ್ತ್ರಜ್ಞರಾಗಿ ಅವರು ಫ್ಲಾಪ್. ಅವರು ಬಿಡೋದೆಲ್ಲಾ ಬರೀ ಬೊಗಳೆ ” ಎಂದು ಹೇಳಿ ಟೀಕಿಸಿದರು. ಸೋಮಣ್ಣ ಅವರ ಮಾತು ಕೇಳಿ ಸಹ ಸ್ಪರ್ಧಿಗಳು ಕೂಡ ನಗೆ ಚೆಲ್ಲಿದರು.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೆಡಿಕ್ಷನ್ ಮೂಲಕ ಟ್ರೊಲ್ ಆಗುತ್ತಿದ್ದ ಗುರೂಜಿ ಇದೀಗ ಬಿಗ್ ಬಾಸ್ ಮನೆಯಲ್ಲೂ ಸಹ ಇದೆ ಕಾರಣಕ್ಕೆ ಟ್ರೊಲ್ ಆಗಿದ್ದು, ಮನೆಯ ಸದಸ್ಯರ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top