fbpx
ಸಮಾಚಾರ

ಬಿಗ್ ಬಾಸ್ ಮನೆಯಿಂದ ಈ ವಾರ ಹೊರ ಹೋಗಲು ಬರೋಬ್ಬರಿ ಏಳು ಮಂದಿ ನಾಮಿನೇಟ್: ಯಾರೆಲ್ಲಾ ಮೇಲಿದೆ ತೂಗುಕತ್ತಿ

ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ಹಲವಾರು ತಿರುವುಗಳನ್ನು ಪಡೆಯುತ್ತಿದೆ. 16 ಜನರೊಂದಿಗೆ ಶುರುವಾದ ಕಾರ್ಯಕ್ರಮ 12 ಜನಕ್ಕೆ ಬಂದು ನಿಂತಿದೆ. ವೈಯಕ್ತಿಕ ಕಾರಣದಿಂದ ಅರ್ಜುನ್ ಮತ್ತು ಲೋಕೇಶ್ ಮನೆಯಿಂದ ಹೊರಗುಳಿದರೆ, ನಾಮಿನೇಟ್ ಆಗಿ ಕಿರಣ್ ಮತ್ತು ಸ್ಫೂರ್ತಿ ಗೌಡ ಮನೆ ಇಂದ ಹೊರಗುಳಿದಿದ್ದಾರೆ. ಇದೀಗ ಮನೆಯ 3 ನೇ ನಾಮಿನೇಷನ್ ಪ್ರಕ್ರಿಯೆ ಶುರವಾಗಿದ್ದು. ಅಚ್ಚರಿಯ ರೀತಿಯಲ್ಲಿ ಸೋನು ನಾಮಿನೇಟ್ ಆಗದೆ ಉಳಿದುಕೊಂಡಿದ್ದಾರೆ.

ನಾಮಿನೇಷನ್ ಪ್ರಕ್ರಿಯೆ ಕುರಿತು ಬಿಗ್ ಬಾಸ್ ಮನೆ ಮಂದಿಗೆ ಒಂದು ಟಾಸ್ಕ್ ನೀಡಿದರು. ಅದೇನೆಂದರೆ ಒಂದು ಬಾಕ್ಸ್ ಕಳಿಸಿದ್ದು, ಅದರಲ್ಲಿ ಎರಡು ವಸ್ತು ಇತ್ತು. ಒಂದರಲ್ಲಿ ಕಣ್ಣಿನ ಚಿತ್ರ ಇತ್ತು, ಮತ್ತೊಂದು ಬಾಕ್ಸ್​ನಲ್ಲಿ ಕನ್ಫೆಷನ್ ರೂಮ್ ಎಂದು ಇತ್ತು. ಕಣ್ಣಿನ ಚಿತ್ರ ಇದ್ದವರು ಎಲ್ಲರ ಎದುರು ಸ್ಪರ್ಧಿಗಳನ್ನು ನಾಮಿನೇಟ್​ಗೆ ಮಾಡಬೇಕು. ಕನ್ಫೆಷನ್ ರೂಮ್ ಎಂದು ಬರೆದುಕೊಂಡಿದ್ದವರು ಕನ್ಫೆಷನ್ ರೂಮ್​ಗೆ ತೆರಳಿ ನಾಮಿನೇಟ್​ ಮಾಡಬೇಕು.

ಹೀಗಾಗಿ ಉದಯ್, ರೂಪೇಶ್, ನಂದಿನಿ, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀ ಈ ವಾರ ನಾಮಿನೇಟ್ ಆದರು. ಜಸ್ವಂತ್ ಅಗರು ಕ್ಯಾಪ್ಟನ್ ಆದ ಕಾರಣ ಸೋಮಣ್ಣ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು. ಮೂರನೇ ಹಂತದಲ್ಲಿ ನಾಮಿನೇಷ್​​​​ನಿಂದ ಒಬ್ಬರನ್ನು ಸೇವ್​ ಮಾಡುವ ಪ್ರಕ್ರಿಯೆ ನಡೆಯಿತು. ಈ ಪ್ರಕ್ರಿಯೆಯಲ್ಲಿ ನಂದಿನಿ ಸೇವ್ ಆದರು.

ಆದರೆ ಇದರಲ್ಲಿ ಗಮನಿಸಬೇಕಾದ ವಿಷಯ ಎಂದರೆ ಕಳೆದ ಎರಡು ವಾರಗಳಿಂದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೋನು ಅವರ ಹೆಸರು ನಾವು ನೋಡಿದ್ದೇವೆ. ಆದರೆ ಅಚ್ಚರಿಯ ವಿಷಯವೆಂದರೆ ಇದೆ ಮೊದಲ ಬಾರಿಗೆ ಸೋನು ಅವರು ನಾಮಿನೇಟ್ ಆಗಿಲ್ಲ. ಹೀಗಾಗಿ ಈ ಬಾರಿ ಅವರು ಸೇಫ್ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top