fbpx
ಸಮಾಚಾರ

“ಆರ್ಯವರ್ಧನ್ ಪಾತ್ರಕ್ಕೆ ಆಫರ್ ಬಂದಿದ್ದು ನಿಜ, ಆದರೆ……..” ಅನೂಪ್ ಭಂಡಾರಿ ಸ್ಪಷ್ಟನೆ

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಹೊರಬಿದ್ದ ಬಳಿಕ ಅವರ ಜಾಗಕ್ಕೆ ಎಂಟ್ರಿ ಕೊಡುವ ನಟ ಯಾರು ಎನ್ನುವ ಚರ್ಚೆ ಬಹಳ ಜೋರಾಗಿ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ನಟರ ಹೆಸರು ಕೇಳಿಬಂದಿದೆ. ವಿಜಯ್ ರಾಘವೇಂದ್ರ, ಜೆಕೆ, ಹರೀಶ್ ರಾಜ್, ನವೀನ್ ಕೃಷ್ಣ ಹೀಗೆ ಅನೇಕರ ಹೆಸರು ಆರ್ಯವರ್ಧನ್ ಪಾತ್ರಕ್ಕೆ ಕೇಳಿಬರುತ್ತಿತ್ತು.

ಆದರೀಗ ಮತ್ತಷ್ಟು ಹೆಸರು ವೈರಲ್ ಆಗಿದೆ. ಅದು ಮತ್ಯಾರು ಅಲ್ಲ ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ. ಹೌದು, ಆರ್ಯವರ್ಧನ್ ಪಾತ್ರದಲ್ಲಿ ಅನೂಪ್ ಭಂಡಾರಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ನೆನ್ನೆಯಿಂದ ಸಕತ್ ವೈರಲ್ ಆಗಿತ್ತು. ಇದೀಗ ಆ ಎಲ್ಲಾ ಸುದ್ದಿಗಳಿಗೆ ಸ್ವತಃ ಅನೂಪ್ ಭಂಡಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ನಿರ್ದೇಶಕ ಅನೂಪ್ ಭಂಡಾರಿ, ‘’ಜೊತೆ ಜೊತೆಯಲಿ’ ತಂಡದವರು ನನಗೆ ಕರೆ ಮಾಡಿದ್ದು ಸತ್ಯ. ಆದರೆ ನಾನು ಅದನ್ನ ರಿಜೆಕ್ಟ್ ಮಾಡಿದ್ದೇನೆ. ನಾನೀಗ ನನ್ನ ಮುಂದಿನ ಸಿನಿಮಾದ ಸ್ಕ್ರಿಪ್ಟಿಂಗ್ ಕೆಲಸದಲ್ಲಿ ಬಿಜಿಯಾಗಿದ್ದೇನೆ. ಅತೀ ಶೀಘ್ರದಲ್ಲೇ ನಮ್ಮ ಹೊಸ ಸಿನಿಮಾ ಅನೌನ್ಸ್ ಆಗಲಿದೆ’’ ಎಂದು ಅನೂಪ್ ಭಂಡಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಉಳಿದಂತೆ ನಟ ಅನಿರುದ್ಧ ಜತ್ಕರ್ ಹಾಗೂ ಆರೂರು ಜಗದೀಶ್ ಮಧ್ಯೆ ವೈಮನಸ್ಯ ತಾರಕಕ್ಕೇರಿದ ಪರಿಣಾಮ, ಧಾರಾವಾಹಿಯಿಂದ ಅನಿರುದ್ಧ ಅವರನ್ನು ಅವರನ್ನ ಕೈಬಿಡಲು ಆರೂರು ಜಗದೀಶ್ ಹಾಗೂ ಜೀ ಕನ್ನಡ ವಾಹಿನಿ ನಿರ್ಧರಿಸಿದೆ. ನಿರ್ದೇಶಕ ಅನೂಪ್ ಭಂಡಾರಿ ಅವರು ಈ ಪಾತ್ರಕ್ಕೆ ಒಪ್ಪಿಲ್ಲ. ಹಾಗಾದ್ರೆ ಯಾರಾಗ್ತಾರೆ ಆರ್ಯವರ್ಧನ್ ಅನ್ನೋದನ್ನ ಮುಂದಿನ ದಿನಗಳಲ್ಲಿ ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top