fbpx
ಸಮಾಚಾರ

ಭಾರತದ ಟಾಪ್ ಹೀರೋಗಳ ಪಟ್ಟಿ ಬಿಡುಗಡೆ; ಜೋಸೆಫ್ ವಿಜಯ್ ಫಸ್ಟ್​, ರಾಕಿ ಭಾಯ್ ಗೆ ಎಷ್ಟನೇ ಸ್ಥಾನ?

ದಕ್ಷಿಣ ಭಾರತದ ಸಿನಿಮಾಗಳು ಇದೀಗ ಎಲ್ಲಾ ಕಡೆ ಸಕತ್ ಸೌಂಡ್ ಮಾಡುತ್ತಿದೆ. ಭಾರತದಲ್ಲದೆ ಪ್ರಪಂಚ್ದ್ಯಂತ ಹೆಚ್ಚು ಸದ್ದು ಮಾಡುತ್ತಿದೆ. ದಕ್ಷಿಣ ಭಾರತದ ಹಲವಾರು ಸಿನಿಮಾಗಳು ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದಿರುವುದನ್ನು ನಾವು ನೋಡಿದ್ದೇವೆ. ಇದೀಗ ಭಾರತದ ಟಾಪ್ 10 ಜನಪ್ರಿಯ ನಂತರ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ನಮ್ಮ ಕನ್ನಡ ರಾಕಿ ಭಾಯ್ ಯಶ್ ಅವರ ಹೆಸರು ಕೂಡ ಇದೆ. ಭಾರತದ ಟಾಪ್ 10 ನಾಯಕರ ಪಟ್ಟಿ ಹೀಗಿದೆ.

 

 

ಮೊದಲನೆಯ ಸ್ಥಾನದಲ್ಲಿ ದಳಪತಿ ವಿಜಯ್ ಅವರ ಹೆಸರು ಇದೆ. ಇತ್ತೀಚಿಗೆ ಇವರ ನಟನೆಯ ಬೀಸ್ಟ್ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಈ ಸಿನಿಮ ಹೇಳಿಕೊಳ್ಳುವಂತಹ ಪ್ರದರ್ಶನ ತೋರಲಿಲ್ಲ. ಇದಾದರೂ ಸಹ ಇವರ ಹೆಸರು ಮೊದಲನೆಯ ಸ್ಥಾನದಲ್ಲಿದೆ. ಇವರ ನಂತರ ಪ್ರಭಾಸ್ ಎರಡನೇ ಸ್ಥಾನ ದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಆರ್​ಆರ್​ಆರ್’ ಚಿತ್ರದ ಮೂಲಕ ಅವರು ದೊಡ್ಡ ಯಶಸ್ಸು ಕಂಡಿದ್ದ ಜ್ಯೂ.ಎನ್​ಟಿಆರ್ ಇದ್ದಾರೆ. ‘ಪುಷ್ಪ’ ಸಿನಿಮಾದ ಮೂಲಕ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ಅಲ್ಲು ಅರ್ಜುನ್​​ಗೆ ನಾಲ್ಕನೇ ಸ್ಥಾನ ಸಿಕ್ಕಿದೆ.

ಐದನೇ ಸ್ಥಾನದಲ್ಲಿ ನಮ್ಮ ರಾಕಿ ಭಾಯ್ ಯಶ್ ಅವರಿದ್ದಾರೆ. ಕೆಜಿಎಫ್ ಸಿನಿಮಾದ ಮೂಲಕ ಇಡೀ ವಿಶ್ವ ಕನ್ನಡ ಸಿನಿಮಾದ ಕಡೆ ತಿರುಗಿ ನೋಡುವಂತೆ ಮಾಡಿದ ನಟ ಎಂದು ಹೇಳಿದರೆ ತಪ್ಪಾಗಲಾರದು. ಅಚ್ಚರಿಯ ವಿಷಯ ಎಂದರೆ ಟಾಪ್ 10 ರ ಪಟ್ಟಿಯಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ನಟ ಎಂದರೆ ಅದು ನಮ್ಮ ಯಶ್ ಮಾತ್ರ.

ಇದಾದ ನಂತರ ರಾಮ್ ಚರಣ್, ಅಕ್ಷಯ್ ಕುಮಾರ್, ಮಹೇಶ್ ಬಾಬು, ಸೂರ್ಯ, ಅಜಿತ್ ಕುಮಾರ್ ಕ್ರಮವಾಗಿ ಆರು (6), ಏಳು (7), ಎಂಟು (8), ಒಂಬತ್ತು (9) ಮತ್ತು ಹತ್ತನೇ (10) ಸ್ಥಾನದಲ್ಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top