fbpx
ಸಮಾಚಾರ

42 ವರ್ಷದ ನಟಿ, ಬಿಜೆಪಿ ನಾಯಕಿ ಸೋನಾಲಿ ಫೋಗಟ್ ನಿಧನ

ಟಿಕ್‌ ಟಾಕ್‌ ಸ್ಟಾರ್‌ ಹಾಗೂ ಭಾರತೀಯ ಜನತಾ ಪಾರ್ಟಿ ನಾಯಕಿ ಸೋನಾಲಿ ಪೋಗಟ್‌ ಹೃದಯಾಘಾತದಿಂದ ಸಾವು ಕಂಡಿದ್ದಾರೆ. ಆಗಸ್ಟ್ 22ರಂದು ಸೋಮವಾರ ರಾತ್ರಿ ನಟಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ತನ್ನ ಕೆಲವು ಸಿಬ್ಬಂದಿಗಳೊಂದಿಗೆ ನಟಿ ಗೋವಾದಲ್ಲಿರುವಾಗ ಹೃದಯಾಘಾತ ಸಂಭವಿಸಿದೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೋಗಿದ್ದ ಅಂಜುನಾದ ಗ್ರ್ಯಾಂಡ್ ಲಿಯೋನಿ ರೆಸಾರ್ಟ್‌ನಲ್ಲಿ ಆಕೆ ಸಾವನ್ನಪ್ಪಿದ್ದಾಳೆ.

ಸಾವಿಗೂ ಮುನ್ನ ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಡಿಯೋವೊಂದನ್ನೂ ಕೂಡ ಅವರು ಪೋಸ್ಟ್‌ ಮಾಡಿದ್ದಾರೆ. ಅದಲ್ಲದೆ, ಟ್ವಟಿರ್‌ ಅಕೌಂಟ್‌ನಲ್ಲಿ ತಮ್ಮ ಫ್ರೊಫೈಲ್‌ ಪಿಕ್ಚರ್‌ಅನ್ನು ಕೂಡ ಅವರು ಬದಲಿಸಿದ್ದರು. ಆಕೆ ತನ್ನ ಕೆಲವು ಸಿಬ್ಬಂದಿಯೊಂದಿಗೆ ಗೋವಾಕ್ಕೆ ಹೋಗಿದ್ದಳು ಎಂದು ಹೇಳಲಾಗುತ್ತಿದೆ. ಸ್ಥಳೀಯ ಆಡಳಿತ ಅವರ ಸಾವಿಗೆ ಕಾರಣವನ್ನು ಖಚಿತಪಡಿಸಲು ಪ್ರಯತ್ನಿಸುತ್ತಿದೆ.

ಅವರು 2019 ರ ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಪಡೆದು ಆದಂಪುರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇತ್ತೀಚೆಗೆ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬದಲಾದ ಕುಲದೀಪ್ ಬಿಷ್ಣೋಯ್ ವಿರುದ್ಧ ಅವರು ಅಂದು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸೋನಾಲಿ ಟಿಕ್‌ಟಾಕ್‌ನಲ್ಲಿ ಕೂಡ ಬಹಳ ಜನಪ್ರಿಯರಾಗಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top