fbpx
ಸಮಾಚಾರ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಕೃಷ್ಣ ವೇಷದಾರಿಯ ಬಾಲಕ ಯಾರು ಗೊತ್ತಾ? ಈತ ಸಿನಿರಂಗದ ಹೆಸರಾಂತ ನಟ

ಕೃಷ್ಣ ಜನ್ಮಾಷ್ಟಮಿ ಹಬ್ಬದಂದು ಮಕ್ಕಳಿಗೆ ಕೃಷ್ಣನ ವೇಷ ಧರಿಸಿ ಫೋಟೋ ಇಡಿಸುವುದು ಇತ್ತೀಚಿಗೆ ಎಲ್ಲ ಕಡೆ ಸಕತ್ ಕಾಮನ್ ಆಗಿದೆ. ಅದು ಸಾಮಾನ್ಯ ಜನರಿಂದ ಇಡಿದು ಸೆಲೆಬ್ರಿಟಿಗಳವರೆಗೂ ಅದನ್ನು ನಾವು ಕಾಣಬಹುದು. ಇದೀಗ ಕೃಷ್ಣವೇಷದಾರಿಯ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಇದು ಯಾರ ಫೋಟೋ ಎಂದು ಜನರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

 

 

ಇತ್ತೀಚಿಗೆ ದೇಶದಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಜನರು ಆಚರಿಸಿದರು. ಈ ವೇಳೆ ಜನರು ತಮ್ಮ ಮಕ್ಕಳ ಕೃಷ್ಣವೇಷದಾರಿಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಈ ವೇಳೆ ಎಲ್ಲರ ಕಣ್ಣಿಗೆ ಒಂದು ಫೋಟೋ ಬಿದ್ದಿದ್ದು, ಅಂದು ಪುಟ್ಟ ಕೃಷ್ಣ ವೇಷದಲ್ಲಿರುವ ಆ ಬಾಲಕ ಇಂದು ಬಹು ಬೇಡಿಕೆಯ ಹೆಸರಾಂತ ನಟ.

ಕೈಯಲ್ಲಿ ಕೊಳಲು ಹಿಡಿದು, ತಲೆಗೆ ಪೇಟ ಸುತ್ತಿ ಬಾಲ ಕೃಷ್ಣನಾಗಿ ಕಾಣಿಸಿಕೊಂಡ ಪುಟ್ಟ ಬಾಲಕ ಬೇರೆಯಾರು ಅಲ್ಲ ಅದು ತಮಿಳಿನ ಫೇಮಸ್‌ ನಟ ದಳಪತಿ ವಿಜಯ್. ಇದೀಗ ದಳಪತಿ ವಿಜಯ್ ಅವರ ಬಾಲ್ಯದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಫೋಟೋ ನೋಡಿದ ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top