fbpx
ಸಮಾಚಾರ

‘ಅನ್ನ ಭಾಗ್ಯ’ದ ಉಚಿತ ಅಕ್ಕಿಗೆ ಕತ್ತರಿ? : ಪ್ರತಿ ಕುಟುಂಬಕ್ಕೆ ತಲಾ 5 ಕೆಜಿ ಅಕ್ಕಿ ಕಡಿತ ಸಾಧ್ಯತೆ!

ಬಿಪಿಎಲ್ ಕುಟುಂಬದವರಿಗೆ ಅನ್ನ ಭಾಗ್ಯ ಯೋಜನೆಯಲ್ಲಿ ಸಪ್ಟೆಂಬರ್ ತಿಂಗಳಿಂದ ಅಕ್ಕಿಯ ಪ್ರಮಾಣ ಕಡಿಮೆಯಾಗುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ಬೈಪೈಲ್ ಕುಟುಂಬದವರಿಗೆ ಸಪ್ಟೆಂಬರ್ ತಿಂಗಳಿಂದ ಬರುವ ಉಚಿತ ಅಕ್ಕಿ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಸರಕಾರದ ಗರೀಬ್‌ ಕಲ್ಯಾಣ್‌ ಯೋಜನೆಯಡಿ ಉಚಿತ ಆಹಾರಧಾನ್ಯ ವಿತರಣೆ ಅವಧಿ ಸೆಪ್ಟೆಂಬರ್‌ಗೆ ಮುಗಿಯುತ್ತಿದೆ. ಈ ಕುರಿತು ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್‌ ಕತ್ತಿ ಮಾತನಾಡಿದ್ದು ‘ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬಡವರಿಗೆ ಆಹಾರ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ಕಳೆದ 2 ವರ್ಷಗಳಿಂದ ಉಚಿತ ಆಹಾರ ಧಾನ್ಯ ಪೂರೈಸುತ್ತಿತ್ತು ಮತ್ತು ಕಳೆದ ಮಾರ್ಚ್‌ನಲ್ಲಿ 6 ತಿಂಗಳ ಕಾಲ ವಿಸ್ತರಣೆ ಮಾಡಿತ್ತು’ ಎಂದು ತಿಳಿಸಿದರು.

ಹೀಗಾಗಿ ‘ಪ್ರಸ್ತುತ ರಾಜ್ಯದ ಒಟ್ಟು 4.01 ಕೋಟಿ ಬಿಪಿಎಲ್‌ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 10 ಕಿ.ಲೋ ಅಕ್ಕಿ, 2 ಕಿ.ಲೋ ರಾಗಿ ಅಥವಾ ಜೋಳ ವಿತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಕೇಂದ್ರದಿಂದ ಮಾಸಿಕ 2.15 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಮತ್ತು ರಾಜ್ಯದಿಂದ 2.25 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಪೂರೈಸಲಾಗುತ್ತಿದೆ. ಕೇಂದ್ರದ ಗರೀಬ್‌ ಕಲ್ಯಾಣ್‌ ಯೋಜನೆ ಸ್ಥಗಿತಗೊಂಡ ನಂತರ ತಲಾ 5 ಕಿ.ಲೋ ಅಕ್ಕಿ ಹಾಗೂ 2 ಕಿ.ಲೋ ರಾಗಿ ಅಥವಾ ಜೋಳ ವಿತರಣೆ ಮುಂದುವರಿಯಲಿದೆ’ ಎಂದು ಹೇಳಿದರು.

ಹೀಗಾಗಿ ಸಪ್ಟೆಂಬರ್ ತಿಂಗಳಿಂದ ಬಿಪಿಎಲ್ ಕುಟುಂಬದವರಿಗೆ ಸರ್ಕಾರದಿಂದ 10 ಕಿಲೋ ಅಕ್ಕಿ ಬದಲು ಕೇವಲ 5 ಕಿಲೋ ಅಕ್ಕಿ ಮಾತ್ರ ದೊರೆಯುತ್ತದೆ. ರಾಗಿ ಅಥವಾ ಜೋಳ ವಿತರಣೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top