ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಫೇಮಸ್ ಆಗಿದ್ದ ಸಪ್ನಾ ಚೌಧರಿ ಅವರು ಒಂದಲ್ಲ ಒಂದು ಕಾರಣಕ್ಕೆ ಚರ್ಚೆಯಲ್ಲಿರುತ್ತಾರೆ. ತನ್ನ ಹಾಡುಗಳು ಮತ್ತು ವೀಡಿಯೊಗಳಿಂದ ಸುದ್ದಿ ಮಾಡುತ್ತಿರುವ ಸಪ್ನಾ ಇತ್ತೀಚಿನ ದಿನಗಳಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ವಾಸ್ತವವಾಗಿ, ನಟಿ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ.
ಡ್ಯಾನ್ಸ್ ಶೋ ಹೆಸರಲ್ಲಿ ಲಕ್ಷಾಂತರ ರೂಪಾಯಿ ಠೇವಣಿ ಇರಿಸಿ ಕಾರ್ಯಕ್ರಮ ನಡೆಸದೇ ಹಣ ದೋಚಿರುವ ಆರೋಪದ ಹಿನ್ನೆಲೆಯಲ್ಲಿ ಲಕ್ನೋದ ಎಸಿಜೆಎಂ ನ್ಯಾಯಾಲಯ ಸಪ್ನಾ ಚೌಧರಿ ಬಂಧನಕ್ಕೆ ಆದೇಶಿಸಿದ್ದು, ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.
ಸಂಸ್ಥೆಯೊಂದಕ್ಕೆ ಕಾರ್ಯಕ್ರಮ ಕೊಡಲು ಒಪ್ಪಿಕೊಂಡಿದ್ದ ಸಪ್ನಾ ಚೌಧರಿ ಆ ಒಪ್ಪಂದನ್ನು ಮುರಿದಿದ್ದಾರಂತೆ. ಅಲ್ಲದೇ, ಪಡೆದ ಹಣವನ್ನೂ ವಾಪಸ್ಸು ನೀಡಿಲ್ಲ. ಒಪ್ಪಂದ ಪ್ರಕಾರ ಅವರು ಗ್ರಾಹಕರ ಜೊತೆ ನೇರ ಸಂಪರ್ಕ ಇಟ್ಟುಕೊಳ್ಳಬಾರದು ಮತ್ತು ಒಪ್ಪಂದಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳಬಾರದು ಎನ್ನುವ ನಿಯಮವಿತ್ತು ಎಂದು ಹೇಳಲಾಗಿತ್ತು. ಅದನ್ನು ಅವರು ಮುರಿದಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು.
ವಾಸ್ತವವಾಗಿ, ಸಪ್ನಾ ಚೌಧರಿ ಸೋಮವಾರ ವಿಚಾರಣೆಗೆ ಹಾಜರಾಗಬೇಕಿತ್ತು, ಆದರೆ ಸಪ್ನಾ ಚೌಧರಿ ಅವರು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಅಲ್ಲದೇ ಪರವಾಗಿ ಯಾವುದೇ ಅರ್ಜಿಯನ್ನೂ ಸಲ್ಲಿಸಲಿಲ್ಲ. ಈ ಬಗ್ಗೆ ತೀವ್ರ ನಿಲುವು ತಳೆದ ನ್ಯಾಯಾಲಯ ಸಪ್ನಾ ಚೌಧರಿ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಲು ಆದೇಶಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
