fbpx
ಸಮಾಚಾರ

‘ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರಕ್ಕೆ ಸಿ.ಟಿ. ರವಿಗೆ ಬೇಕು: ನೆಟ್ಟಿಗರ ಆಗ್ರಹ

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಹೊರಬಿದ್ದ ಬಳಿಕ ಅವರ ಜಾಗಕ್ಕೆ ಎಂಟ್ರಿ ಕೊಡುವ ನಟ ಯಾರು ಎನ್ನುವ ಚರ್ಚೆ ಬಹಳ ಜೋರಾಗಿ ನಡೆಯುತ್ತಿದೆ. ಈಗಾಗಲೇ ಸಾಕಷ್ಟು ನಟರ ಹೆಸರು ಕೇಳಿಬಂದಿದೆ. ವಿಜಯ್ ರಾಘವೇಂದ್ರ, ಜೆಕೆ, ಹರೀಶ್ ರಾಜ್, ನವೀನ್ ಕೃಷ್ಣ ಹೀಗೆ ಅನೇಕರ ಹೆಸರು ಆರ್ಯವರ್ಧನ್ ಪಾತ್ರಕ್ಕೆ ಕೇಳಿಬರುತ್ತಿತ್ತು.

 

 

ಈ ನಡುವೆ ಆರ್ಯವರ್ಧನ್ ಪಾತ್ರವನ್ನು ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ನೀಡಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಸಿ.ಟಿ. ರವಿ ಅವರು ಈವರೆಗೂ ಯಾವುದೇ ಸಿನಿಮಾ ಆಗಲಿ ಅಥವಾ ಧಾರಾವಾಹಿ ಆಗಲಿ ನಟಿಸದೇ ಇದ್ದರೂ, ಅವರ ಲುಕ್ ಆರ್ಯವರ್ಧನ್ ಪಾತ್ರಧಾರಿಯನ್ನು ಹೋಲುತ್ತದೆ. ಹಾಗಾಗಿ ಸಿ.ಟಿ. ರವಿ ಅವರಿಗೆ ಅವಕಾಶ ಕೊಡಿ ಎಂದು ಅನೇಕರು ಆಗ್ರಹಿಸಿದ್ದಾರೆ.

 

 

ಈ ಸುದ್ದಿ ಕೇಳಿ ನಿಮಗೆ ಆಶ್ಚರ್ಯ ಆಗಬಹುದು, ಆದರೂ ಇದು ಸತ್ಯ. ಆರ್ಯವರ್ಧನ್ ಪಾತ್ರವನ್ನು ಅನೇಕರು ಸಿ.ಟಿ ರವಿ ಅವರಲ್ಲಿ ಕಾಣುತ್ತಿದ್ದಾರೆ. ಅಲ್ಲದೇ, ಅನಿರುದ್ಧ ಅವರಂತೆ ಗೆಟಪ್ ಹೊಂದಿರುವ ರವಿ ಅವರ ಫೋಟೋವನ್ನು ಹಲವರು ಹಾಕಿ ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇದೆ ವಿಚಾರವಾಗಿ ಯೂಟ್ಯೂಬ್ ಚಾನೆಲ್ ನಡೆಸಿದ ಪೋಲ್ ಒಂದರಲ್ಲಿ ಸಿಟಿ ರವಿ ಅವರ ಹೆಸರೂ ಸಹ ಇದ್ದೂ ಪ್ರತಿಶತ 18% ಮಂದಿ ಸಿಟಿ ರವಿ ಅವರಿಗೆ ವೋಟ್ ಮಾಡಿದ್ದಾರೆ. ಈ ಪೋಲಿಂಗ್ ನಲ್ಲಿ ಇದುವರೆಗೂ ಒಟ್ಟು 20 ಸಾವಿರ ಮತಗಳು ಬಂದಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top