fbpx
ಸಮಾಚಾರ

ಇವರೇ ನೋಡಿ ಜೂನಿಯರ್ ಕಾಫೀ ನಾಡು ಚಂದು! ವೈರಲ್ ಆಗುತ್ತಿದೆ ಚಂದು ರೀತಿ ಕಾಣುವ ವ್ಯಕ್ತಿಯ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಇದೀಗ ಎಲ್ಲಿ ನೋಡಿದರು ಬರೀ ಕಾಫೀ ನಾಡು ಚಂದು ಅವರದ್ದೇ ಹವಾ ಎಂದು ಹೇಳಿದರೆ ತಪ್ಪಾಗಲಾರದು. ಇವರಿಗೆ ಇದೀಗ ಅಪಾರವಾದ ಅಭಿಮಾನಿ ಬಳಗವೇ ಇದೆ. ಇವರ ಅಭಿಮಾನ ಎಷ್ಟರ ಮಟ್ಟಿಗೆ ಇದೆ ಎಂದರೆ ಇದೀಗ ಜನರು ತಮ್ಮ ಸ್ನೇಹಿತರ ಅಥವಾ ಪ್ರೀತಿಪಾತ್ರರ ಹುಟ್ಟುಹಬ್ಬದಂದು ಕಾಫೀ ನಾಡು ಚಂದು ಅವರ ರೀತಿಯಲ್ಲೇ ಹುಟ್ಟುಹಬ್ಬ ಹಾಡನ್ನು ಹಾಡುವ ಮೂಲಕ ಆಚರಿಸುತ್ತಾರೆ. ಇದೀಗ ಮತ್ತೊಂದು ಕುತೂಹಲಕಾರಿ ಮಾಹಿತಿ ಹೊರಬಂದಿದ್ದು, ಅದೇನೆಂದರೆ ಕಾಫೀ ನಾಡು ಚಂದು ಅವರ ರೀತಿಯಲ್ಲೇ ಒಬ್ಬ ವ್ಯಕ್ತಿ ಇದ್ದು, ಇದೀಗ ಜನರು ಇವರ ಬಳಿ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದಾರೆ.

 

 

View this post on Instagram

 

A post shared by Madhu Mandya (@jeeva5720)

 

ಪ್ರಪಂಚದಲ್ಲಿ ಒಬ್ಬರ ರೀತಿ 7 ಜನರಿದ್ದಾರೆ ಎಂಬ ಮಾತು ಸತ್ಯ ಎಂದೆನಿಸುತ್ತದೆ. ಏಕೆಂದರೆ ಕಾಫೀ ನಾಡು ಚಂದು ಅವರ ರೀತಿಯಲ್ಲೇ ಇದೀಗ ಮತ್ತೊಬ್ಬ ವ್ಯಕ್ತಿ ಇದ್ದು, ಇವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

 

 

View this post on Instagram

 

A post shared by Madhu Mandya (@jeeva5720)

 

ಇವರ ಹೇರ್​ಸ್ಟೈಲ್​, ಗಡ್ಡ, ಎತ್ತರ, ತೂಕ ಎಲ್ಲವೂ ಚಂದು ಅವರ ರೀತಿ ಇದೆ. ಹೀಗಾಗಿ ಜನರು ಇವರನ್ನು ಜೂನಿಯರ್ ಚಂದು ಎಂದೇ ಗುರುತಿಸುತ್ತಿದ್ದಾರೆ. ಜೂನಿಯರ್ ಚಂದು ಇರುವುದು ನಮ್ಮ ಬೆಂಗಳೂರಿನ ವಿಜಯನಗರದಲ್ಲಿ. ಈ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದರೆ ಜನರು ಇವರನ್ನು ಕಂಡು ಜೂನಿಯರ್ ಚಂದು ಎಂದು ಹೇಳುತ್ತಿದ್ದಾರಂತೆ. ಈ ಕುರಿತು ಸ್ವತಃ ಇವರೇ ಹೇಳಿಕೊಂಡಿದ್ದಾರೆ. ಇದೀಗ ಜೂನಿಯರ್ ಚಂದು ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದ್ದು, ಇವರ ಜೊತೆ ಸೆಲ್ಫಿ ಕ್ಲಿಕ್ಕಿಸಲು ಜನರು ಮುಗಿಬೀಳುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top