fbpx
ಸಮಾಚಾರ

ಬರಲಿದೆಯಂತೆ ಸೋನು ಜೀವನಚರಿತೆ ಕುರಿತು ಒಂದು ಸಿನಿಮಾ? ನಾಯಕಿ ಯಾರು ಗೊತ್ತಾ

ಬಿಗ್ ಬಾಸ್ ಮನೆ ಒಳಗೆ ಮತ್ತು ಹೊರಗೆ ಇದೀಗ ಕೇಳಿಬರುತ್ತಿರುವುದು ಒಂದೇ ಹೆಸರು. ಅದು ಟಿಕ್ ಟಾಕ್ ಕ್ವೀನ್ ಎಂದೇ ಪ್ರಸಿದ್ಧಿಯಾಗಿರುವ ಸೋನು ಶ್ರೀನಿವಾಸ್ ಗೌಡ. ಸಾಮಾಜಿಕ ಜಾಲತಾಣಗಳ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿರುವ ಇವರು ಬಿಗ್ ಬಾಸ್ ಮನೆಯಲ್ಲೂ ಸಹ ಭರ್ಜರಿಯಾಗಿ ಆಡುತ್ತಿದ್ದಾರೆ. ಇದೀಗ ಸೋನು ಕುರಿತು ಮತ್ತೊಂದು ವಿಷಯ ಹೊರಬಿದಿದ್ದು, ಇವರ ಜೀವ ಚರಿತೆ ಕುರಿತು ಸಿನಿಮಾ ಮಾಡಲಿದ್ದಾರಂತೆ ಕರ್ನಾಟಕದ ನಿರ್ಮಾಪಕರು.

ಟಿಕ್ ಟಾಕ್ ರಿಲ್ಸ್ ಮಾಡುವ ಮೂಲಕ ಸುಮಾರು 8 ಲಕ್ಷಕ್ಕೂ ಅಧಿಕ ಅಭಿಮಾನಿಗಳನ್ನು ಸಂಪಾದಿಸಿರುವ ಇವರ ಜೀವನ ಹಲವಾರು ತಿರುವುಗಳನ್ನು ಪಡೆದಿದೆ. ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟವನ್ನು ಸಹ ಇವರು ಬಿಗ್ ಬಾಸ್ ಮನೆಯಲ್ಲೂ ಸಹ ಎಲ್ಲರ ಮುಂದೆ ಹೇಳಿ ಕಣ್ಣೀರು ಹಾಕಿದ್ದಾರೆ. ಇವೆಲ್ಲ ನೋವುಗಳಿದ್ದರು ಸಹ ತಮ್ಮೆಲ್ಲ ಶಕ್ತಿ ಮೀರಿ ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಬ್ಬ ಸ್ಪರ್ದಿಗೂ ಟಫ್ ಕಾಂಪಿಟೇಟರ್ ಆಗಿ ಸೋನು ಆಟವಾಡುತ್ತಿದ್ದಾರೆ.

ಹೀಗಾಗಿ ಸಹಜವಾಗಿ ಇವರ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಸೋನು ಅವರ ಜೀವನ ಚರಿತೆ ಕುರಿತು ಸಿನಿಮಾ ಮಾಡಲು ಕರ್ನಾಟಕದ ಹೆಸರಾಂತ ನಿರ್ಮಾಪಕರೊಬ್ಬರು ಚಿಂತಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸೋನು ಅವರ ಜೀವನಚರಿತೆಯನ್ನು ಎಳೆಎಳೆಯಾಗಿ ತೆರೆಯಮೇಲೆ ತೋರಿಸಲು ಇವರು ಚಿಂತಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸೋನು ಅವರೇ ನಟಿಸಲಿದ್ದಾರೆ ಎಂಬ ಮಾಹಿತಿ ಕೂಡ ಕೇಳಿಬರುತ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಸೋನು ಅವರ ಜೀವನಚರಿತೆನ್ನು ನಾವು ತೆರೆಯಮೇಲೆ ನೋಡಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top